ಇದೇ 16ರಿಂದ ಕೆಂಪು ವರ್ಣದ ಒನ್‌ಪ್ಲಸ್ 6 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ..!

By GizBot Bureau
|

ಫೋನ್ ಕೇವಲ ಮಾತನಾಡಲು ಮತ್ತು ಯಾವುದೋ ಅಂತರ್ಜಾಲದ ಕೆಲಸಕ್ಕಾಗಿ ಮಾತ್ರ ಅಲ್ಲ. ಈಗಂತೂ ಕೈಯಲ್ಲಿರೋ ಫೋನ್ ಫ್ಯಾಷನ್ ನ್ನು ಕೂಡ ಪ್ರತಿಬಿಂಬಿಸುತ್ತದೆ. ಇಂತಹದ್ದೇ ಬಣ್ಣ, ಡಿಸೈನ್ ಇದ್ದರೆ ಆ ಫೋನಿಗೊಂದು ಬೆಲೆ ಎಂಬುದು ಫ್ಯಾಷನ್ ಪ್ರಿಯರ ಅಂಬೋಣ. ಅದಕ್ಕಾಗಿಯೇ ಫ್ಯಾಷನ್ ಫ್ರಿಯ ಗ್ರಾಹಕರು ತಮ್ಮ ಇಷ್ಟದ ಬಣ್ಣದ ಫೋನ್ ಖರೀದಿಸಲು ಮುಂದಾಗುತ್ತಾರೆ. ಅದಕ್ಕೆ ತಕ್ಕಂತೆ ತಯಾರಿಕಾ ಕಂಪೆನಿಯಗಳು ಒಂದೇ ಮಾಡೆಲ್ ನ ಫೋನ್ ಗಳನ್ನು ಬೇರೆಬೇರೆ ಬಣ್ಣಗಳಲ್ಲಿ ಬಿಡುಗಡೆ ಮಾಡಲು ಮುಂದಾಗುತ್ತದೆ.ಅದಕ್ಕೆ ಹೊಸ ಸೇರ್ಪಡೆ ಒನ್ ಪ್ಲಸ್ .

ಹೌದು ಚೈನೀಸ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಒನ್ ಪ್ಲಸ್ ತನ್ನ ಕೆಂಪು ಬಣ್ಣದ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಒನ್ ಪ್ಲಸ್ 6 ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕಂಪೆನಿಯು ಪ್ರಕಟಣೆ ನೀಡಿರುವಂತೆ ಜುಲೈ 16 ರಿಂದ ಇದರ ಮಾರಾಟ ಆರಂಭವಾಗಲಿದ್ದು ಬೆಲೆ 39,999 ರುಪಾಯಿ ಆಗಿದೆ.ಆಸಕ್ತ ಗ್ರಾಹಕರು ಅಮೇಜಾನ್ ಇಂಡಿಯಾ ವೆಬ್ ಸೈಟ್ ಮತ್ತು ಒನ್ ಪ್ಲಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಇದನ್ನು ಖರೀದಿಸಬಹುದಾಗಿದೆ.

ಇದೇ 16ರಿಂದ ಕೆಂಪು ವರ್ಣದ ಒನ್‌ಪ್ಲಸ್ 6 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ..!

ಇಂತಹ ವಿಭಿನ್ನ ಕೆಂಪು ಬಣ್ಣವನ್ನು ಪಡೆಯಲು ಸಾಕಷ್ಟು ತಿಂಗಳುಗಳ ಶ್ರಮವನ್ನು ಒನ್ ಪ್ಲಸ್ ಸಂಸ್ಥೆ ವಹಿಸಿದೆ, ಗ್ರಾಹಕರ ಮನ ಗೆಲ್ಲಲು ಮತ್ತು ಅವರಿಗೊಂದು ವಿಭಿನ್ನ ತಾಕತ್ತು ಮತ್ತು ಆತ್ಮವಿಶ್ವಾಸ ನೀಡಲು ಖಂಡಿತ ಈ ಫೋನ್ ನೆರವಿಗೆ ಬರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ಒನ್ ಪ್ಲಸ್ ನ ಸಿಇಓ ಮತ್ತು ಫೌಂಡರ್ ನ ಪೀಟೆ ಲಾ ಅವರ ಅಭಿಪ್ರಾಯವಾಗಿದೆ.

6 ಪೆನಲ್ ಗಳ ಗ್ಲಾಸ್, ಆಪ್ಟಿಕಲ್ ಕೋಟಿಂಗ್ ಮತ್ತು ಆವಿಯಾಗುವ ಚಿತ್ರಗಳಂತ ವಿಶೇಷ ತಂತ್ರಜ್ಞಾನಗಳನ್ನು ಈ ಫೋನಿನ ತಯಾರಿಕೆಯಲ್ಲಿ ಬಳಸಲಾಗಿದ್ದು, ಅದೇ ಕಾರಣಕ್ಕೆ ಈ ಕೆಂಪು ಬಣ್ಣವನ್ನು ಪಡೆಯಲು ಸಾಧ್ಯವಾಗಿದೆಯಂತೆ. ಇದರಲ್ಲಿ ಆಂಟಿ-ಪ್ರತಿಪಲಿತ ಪದರವನ್ನು ಕೂಡ ಬಳಕೆ ಮಾಡಲಾಗಿದ್ದು ಗಾಜಿನ ಕೆಳಗಿನ ಪದರಗಳಿಗೂ ಕೂಡ ಬೆಳಕು ತಲುಪುತ್ತದೆ ಮತ್ತು ಡಿವೈಸ್ ನಲ್ಲಿ ಅದು ಪ್ರತಿಫಲಿತಗೊಂಡು ಫೋನ್ ಮೇಲ್ಮೈ ಕೆಂಪಾಗಿ ಬೆಳಗುತ್ತದೆ.

ಒಂದು ಪಾರದರ್ಶಕ ಕಿತ್ತಳೆ ಬಣ್ಣದ ಪದರವು ಕೆಂಪು ಮೂಲದ ಪದರದೊಂದಿಗೆ ಒಂದು ವಿಕಿರಣದಂತ ಹೊಳಪು ಸಾಧಿಸಲು ನೆರವು ನೀಡುತ್ತದೆ. ಆ ಮೂಲಕ ಒನ್ ಪ್ಲಸ್ ನ ಕೆಂಪು ಆವೃತ್ತಿಗೆ ವಿಶೇಷ ಮತ್ತು ಅನನ್ಯ ರೂಪ ಬರಲು ಸಾಧ್ಯವಾಗಿದೆ. ಬಣ್ಣವನ್ನು ಹೊರತು ಪಡಿಸಿ ಈ ಫೋನಿನ ಇನ್ನಿತರೆ ವೈಶಿಷ್ಟ್ಯತೆಗಳು ಇತರೆ ಒನ್ ಪ್ಲಸ್ 6 ಫೋನ್ ನಂತೆಯೇ ಇದೆ.

ಇದೇ 16ರಿಂದ ಕೆಂಪು ವರ್ಣದ ಒನ್‌ಪ್ಲಸ್ 6 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ..!

ಒನ್ ಪ್ಲಸ್ 6 ನ ವೈಶಿಷ್ಟ್ಯತೆಗಳು :

ಒನ್ ಪ್ಲಸ್ 6 6.28-ಇಂಚಿನ ಫುಲ್HD+ ಆಪ್ಟಿಕ್ AMOLED ಸ್ಕ್ರೀನ್ ಜೊತೆಗೆ 19:9 ಅನುಪಾತವನ್ನು ಹೊಂದಿದೆ. ಡಿಸ್ಪ್ಲೇ ಯು ಐಫೋನ್ ಎಕ್ಸ್ ನಂತ ನಾಚ್ ಹೊಂದಿದೆ ಮತ್ತು ಇದನ್ನು ಅನೇಬಲ್ ಅಥವಾ ಡಿಸೇಬಲ್ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಲಾಗಿರುತ್ತದೆ.

ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 8.1 ಆರಿಯೋ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಕಂಪೆನಿಯು ಈಗಾಗಲೇ ಆಂಡ್ರಾಯ್ಡ್ ಪಿ ಅಪ್ ಡೇಟ್ ಹೊಂದಲಿದೆ ಎಂಬುದನ್ನು ಕೂಡ ಖಾತ್ರಿಪಡಿಸಿದೆ. ಕ್ಯಾಮರಾ ವಿಚಾರಕ್ಕೆ ಬರುವುದಾದರೆ , ಒನ್ ಪ್ಲಸ್ 6 ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾಗಳಿಗೆ ಅದರಲ್ಲಿ ಒಂದು 16ಎಂಪಿ (ಸೋನಿ IMX519)ಮತ್ತೊಂದು 20ಎಂಪಿ(ಸೋನಿ IM376K ಸೆನ್ಸರ್ )ನ್ನು ಹೊಂದಿದೆ.. ಅಷ್ಟೇ ಅಲ್ಲ 16ಎಂಪಿ ಮುಂಭಾಗದ ಕ್ಯಾಮರಾ ಕೂಡ ಇದ್ದು ಇದು ಸೋನಿ IMX371 ಸೆನ್ಸರಾ ನ್ನು ಹೊಂದಿದೆ. ವಿಶೇಷ ಪೊಟ್ರೈಟ್ ಮೋಡ್ ವೈಶಿಷ್ಟ್ಯತೆ ಕೂಡ ಇದರಲ್ಲಿದೆ.

ಮತ್ತೊಮ್ಮೆ ನಿಮಗೆ ನೆನಪಿಸುವುದಾದರೆ ಒನ್ ಪ್ಲಸ್ 6 ಎರಡು ವೇರಿಯಂಟ್ ನಲ್ಲಿ ಬರುತ್ತದೆ. ಒಂದು 6ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆ ಇರುವ ಫೋನಿನ ಬೆಲೆ 34,999 ರುಪಾಯಿಗಳು ಮತ್ತು 8ಜಿಬಿ RAM ಮತ್ತು 128ಜಿಬಿ ಇಂಟರ್ ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 39,999 ರುಪಾಯಿಗಳಾಗಿದೆ.

Best Mobiles in India

English summary
OnePlus introduces Amber Red OnePlus 6, available in India from July 16. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X