Home
ಮೊಬೈಲ್

OnePlus ನಿಂದ ಹೊಸ ‘OP Gaming Core’ ತಂತ್ರಜ್ಞಾನ ಅನಾವರಣ: ಏನಿದು ಗೊತ್ತಾ?

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್ OnePlus ತನ್ನೆಲ್ಲಾ ಗೇಮಿಂಗ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. OnePlus ಇಂದು ತನ್ನ ಹೊಸ ಗೇಮಿಂಗ್ ತಂತ್ರಜ್ಞಾನವಾದ OP Gaming Core ಅನ್ನು ಅಧಿಕೃತವಾಗಿ ಘೋಷಿಸಿದ್ದು, ಈ ಹೊಸ ತಂತ್ರಜ್ಞಾನವು ಮೊಬೈಲ್ ಗೇಮಿಂಗ್ ಅನುಭವವನ್ನು ಮತ್ತಷ್ಟು ಗರಿಷ್ಠ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದೆ. ಕಂಪನಿಯ ಪ್ರಕಾರ, ಇದು ಮೊಬೈಲ್ ಗೇಮಿಂಗ್‌ನಲ್ಲಿ ಕಾರ್ಯಕ್ಷಮತೆ, ಸ್ಥಿರತೆ ಮತ್ತು ಸ್ಪರ್ಶ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ತಲುಪಿಸಲಿದೆ. ಈ ತಂತ್ರಜ್ಞಾನವನ್ನು ಮೊದಲು ಒನ್‌ಪ್ಲಸ್ 15 ಸರಣಿಯಲ್ಲಿ ಕಾಣಬಹುದಾಗಿದ್ದು, ಹಾಗಾದರೆ, ಏನಿದು OP Gaming Core?, ಇದರಿಂದ ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎಂಬುದನ್ನು ನೋಡೋಣ ಬನ್ನಿ.

ಏನಿದು OP Gaming Core?
OP Gaming Core ಒಂದು ಚಿಪ್-ಮಟ್ಟದ ಆಪ್ಟಿಮೈಸೇಶನ್ ತಂತ್ರಜ್ಞಾನವಾಗಿದ್ದು, ಇದು ಆಂಡ್ರಾಯ್ಡ್‌ನ ಮೂಲಮಟ್ಟದಲ್ಲೇ ಕಾರ್ಯನಿರ್ವಹಿಸುತ್ತದೆ. ಒನ್‌ಪ್ಲಸ್ ಹೇಳುವಂತೆ, ಈ ತಂತ್ರಜ್ಞಾನವನ್ನು ನಿರ್ಮಿಸಲು 20,000ಕ್ಕೂ ಹೆಚ್ಚು ಸಾಲುಗಳ ಕೋಡ್ ಬಳಸಲಾಗಿದೆ ಮತ್ತು ಇದು 254 ಗೇಮಿಂಗ್ ಪೇಟೆಂಟ್‌ಗಳ ಬೆಂಬಲವನ್ನು ಹೊಂದಿದೆ.

ಇದರ ಪ್ರಮುಖ ಅಂಶವಾದ OnePlus CPU Scheduler ಹೊಸ ರೀತಿಯ ರಿಸೋರ್ಸ್ ಹಂಚಿಕೆ ವಿಧಾನವನ್ನು ಬಳಸಿ ಗೇಮಿಂಗ್ ಸಮಯದಲ್ಲಿ ಸ್ಮಾರ್ಟ್‌ಫೋನ್‌ನ ಪ್ರಾಸೆಸಿಂಗ್ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದರ ಮೂಲಕ CPU ಮೇಲಿನ ಒತ್ತಡವನ್ನು 22.74% ವರೆಗೆ ಕಡಿಮೆ ಮಾಡಬಹುದು ಎಂದು ಕಂಪನಿ ಹೇಳಿದೆ.

OnePlus ನಿಂದ ಹೊಸ ‘OP Gaming Core’ ತಂತ್ರಜ್ಞಾನ ಅನಾವರಣ: ಏನಿದು ಗೊತ್ತಾ?

ಈ ಹೊಸ CPU Scheduler‌ನಿಂದ, OP Gaming Core ತಂತ್ರಜ್ಞಾನ ಹೊಂದಿರುವ ಫೋನ್‌ಗಳು ಪ್ರತಿ ಫ್ರೇಮ್‌ನ ಶಕ್ತಿ ಬಳಕೆಯನ್ನು ನಿರ್ವಹಿಸಿ 120fps ಮಟ್ಟದ ಸ್ಥಿರ ಗೇಮಿಂಗ್ ನೀಡಲಿವೆ. ಜೊತೆಗೆ ಇದು ತಾಪಮಾನ ನಿಯಂತ್ರಣ ಮತ್ತು ಪವರ್ ಎಫಿಷಿಯನ್ಸಿ ಸುಧಾರಣೆಗಳನ್ನು ತರುತ್ತದೆ, ಅಂದರೆ ದೀರ್ಘಕಾಲದ ಗೇಮಿಂಗ್ ವೇಳೆ ಕೂಡ ಡಿವೈಸ್ ಹೆಚ್ಚು ಬಿಸಿ ಆಗದೆ ನಯವಾಗಿ ಕಾರ್ಯನಿರ್ವಹಿಸುತ್ತದೆ.

OnePlus ಪರಿಚಯಿಸಿದ Next-Gen HyperRendering ತಂತ್ರಜ್ಞಾನ GPU ಪೈಪ್‌ಲೈನ್ ಅನ್ನು ಪುನರ್‌ರಚಿಸಿ ಪ್ರತಿ ಫ್ರೇಮ್‌ನ ರೆಂಡರಿಂಗ್ ಕಾರ್ಯಕ್ಷಮತೆಯನ್ನು 80% ಹೆಚ್ಚಿಸುತ್ತದೆ. ಈ ತಂತ್ರಜ್ಞಾನದಿಂದ ಚಿತ್ರಪ್ರದರ್ಶನ ಹೆಚ್ಚು ತೀಕ್ಷ್ಣವಾಗುತ್ತಿದ್ದು, ಫ್ರೇಮ್ ಇಂಟರ್‌ಪೊಲೇಶನ್‌ನಿಂದ ಉಂಟಾಗುವ ವಿಳಂಬವನ್ನು ಶೂನ್ಯಕ್ಕೆ ಸಮೀಪಿಸುತ್ತದೆ ಎಂದು ಹೃಳಲಾಗಿದೆ.

Performance Tri-Chip:ಈಗ ಮೂರು ಚಿಪ್‌ಗಳ ಶಕ್ತಿ
Performance Tri-Chip ವ್ಯವಸ್ಥೆ ಈ ತಂತ್ರಜ್ಞಾನಕ್ಕೆ ಪೂರಕವಾಗಿದೆ. ಇದು Performance, Touch Response ಮತ್ತು Wi-Fi G2 ಎಂಬ ಮೂರು ಪ್ರತ್ಯೇಕ ಚಿಪ್‌ಗಳನ್ನು ಒಳಗೊಂಡಿದೆ.
Touch Response ಚಿಪ್: 330Hz ಸ್ಯಾಂಪ್ಲಿಂಗ್ ರೇಟ್ ಮತ್ತು 3200Hz ಇನ್‌ಸ್ಟಂಟ್ ಪ್ರತಿಕ್ರಿಯೆ ನೀಡುತ್ತದೆ, ಇದರಿಂದ ಆಟಗಾರರು ತಕ್ಷಣದ ಸ್ಪರ್ಶ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ.
Wi-Fi G2 ಚಿಪ್: ದುರ್ಬಲ ಸಿಗ್ನಲ್ ಪರಿಸ್ಥಿತಿಗಳಲ್ಲಿಯೂ ಸಂಪರ್ಕ ಸ್ಥಿರತೆಯನ್ನು ಕಾಪಾಡಿ ಸ್ಟಟರ್ ಕಡಿಮೆ ಮಾಡುತ್ತದೆ.
ಈ ಎಲ್ಲಾ ತಂತ್ರಜ್ಞಾನಗಳು ಹೊಸ Snapdragon 8 Elite Gen 5 ಚಿಪ್‌ಸೆಟ್ ಮೇಲೆ ಆಧಾರಿತವಾಗಿವೆ.

ಒನ್‌ಪ್ಲಸ್ ತನ್ನ ಹೊಸ OP FPS Max ಅನ್ನು ಸಹ ಅನಾವರಣಗೊಳಿಸಿದೆ. ಇದು 165Hz ಡಿಸ್ಪ್ಲೇ ಮತ್ತು ನೇಟಿವ್ 165fps ಗೇಮಿಂಗ್ ಬೆಂಬಲವನ್ನು ಒದಗಿಸುತ್ತದೆ. ಚಿಪ್ ಮಟ್ಟದ ಆಪ್ಟಿಮೈಸೇಶನ್ ಮತ್ತು ಸುಧಾರಿತ ಟಚ್ ಪ್ರತಿಕ್ರಿಯೆಯಿಂದ ಗೇಮಿಂಗ್ ಅನುಭವ ನಿಖರ ಮತ್ತು ಸ್ಮೂತ್ ಆಗಿರುತ್ತದೆ. ಕಂಪನಿ ಈಗಾಗಲೇ ಕೆಲವು ಜನಪ್ರಿಯ ಆಟಗಳಲ್ಲಿ ಈ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಗೇಮ್‌ಗಳಿಗೂ ಬೆಂಬಲ ನೀಡಲಿದೆ.

ಒಟ್ಟಾರೆಯಾಗಿ, OnePlus OP Gaming Core, Performance Tri-Chip ಮತ್ತು OP FPS Max ತಂತ್ರಜ್ಞಾನಗಳು ಗೇಮಿಂಗ್ ಲೋಕದಲ್ಲಿ ಹೊಸ ಮಾನದಂಡವನ್ನು ನಿರ್ಮಿಸಬಹುದು. ಒನ್‌ಪ್ಲಸ್ ಪ್ರಕಾರ, ಈ ಎಲ್ಲಾ ಹೊಸ ತಂತ್ರಜ್ಞಾನಗಳನ್ನು ಮೊದಲ ಬಾರಿಗೆ OnePlus 15 ಸರಣಿಯಲ್ಲಿ ಅಳವಡಿಸಲಾಗುತ್ತದೆ. ಹೀಗಾಗಿ, ಈ ಸರಣಿ ಭಾರತದ ಗೇಮಿಂಗ್ ಪ್ರೇಮಿಗಳಿಗೆ ನಿಜವಾದ ಹೈ-ಪರ್ಫಾರ್ಮೆನ್ಸ್ ಸ್ಮಾರ್ಟ್‌ಫೋನ್ ಅನುಭವ ನೀಡುವ ನಿರೀಕ್ಷೆಯಿದೆ. ಏನಂತಿರಾ?

Best Mobiles in India

English summary
OnePlus today officially announced its new gaming technology, OP Gaming Core, which it says will take the mobile gaming experience to the next level. According to the company, it will take performance, stability, and touch response to a whole new level in mobile gaming.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+