OnePlus Nord 3: Amazonನಲ್ಲಿ 20,000 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತೆ!
ನೀವು ಒನ್‌ಪ್ಲಸ್ ಪ್ರಿಯರಾಗಿದ್ದರೆ ಮಿಸ್ ಮಾಡದೇ ಈ ಸ್ಟೋರಿ ಓದಿ. ನಿಮಗೆ 20,000 ರೂ. ಒಳಗೆ ಒನ್‌ಪ್ಲಸ್ ಖರೀದಿಸುವ ಬಯಕೆ ಇದೆಯೇ? ಹಾಗಿದ್ರೆ, ಈ ಫೋನ್ ಖರೀದಿಗೆ ಇದು ಪರ್ಫೆಕ್ಟ್ ಟೈಮ್. ಒನ್‌ಪ್ಲಸ್‌ನ ಈ ಫೋನ್ ಮೇಲೆ 41% ಭರ್ಜರಿ ಆಫರ್, 1,500 ಡಿಸ್ಕೌಂಟ್ ಮತ್ತು ಕ್ಯಾಶ್‌ಬ್ಯಾಕ್ ಕೂಡ ಸಿಗುತ್ತೆ. ಹೌದು, OnePlus Nord 3 ಸ್ಮಾರ್ಟ್‌ಫೋನ್ ಖರೀದಿ ಮೇಲೆ Amazonನಲ್ಲಿ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್ ನಿಮ್ಮದಾಗಿಸಿಕೊಳ್ಳಬಹುದು. 33,999 ರೂ. ಬೆಲೆಯ ಈ ಒನ್‌ಪ್ಲಸ್ ನಾರ್ಡ್ 3 ಫೋನ್ ಖರೀದಿ ಮೇಲೆ ಬರೋಬ್ಬರಿ 14,001 ರೂ. ಸೇವ್ ಮಾಡಬಹುದು.
ಒನ್‌ಪ್ಲಸ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿರುವ ಎಲ್ಲಾ ಫೋನ್‌ಗಳು ಗ್ರಾಹಕರ ಹಾಟ್ ಫೇವರಿಟ್ ಆಗಿವೆ. ಹೊಚ್ಚ ಹೊಸ ಮೊಬೈಲ್ ಬಿಡುಗಡೆ ಜೊತೆಗೆ, ದುಬಾರಿ ಬೆಲೆಯ ಫೋನ್‌ಗಳ ಮೇಲೆ ಡಿಸ್ಕೌಂಟ್ ಸಹ ಘೋಷಿಸುತ್ತಿದೆ. ಈ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದೆ. ಇದೀಗ, ಒನ್‌ಪ್ಲಸ್ ನಾರ್ಡ್ 3 ಮೊಬೈಲ್ ಖರೀದಿ ಮೇಲೆಯೂ ಆಫರ್ ನೀಡಿದೆ. ಈ ಡಿಸ್ಕೌಂಟ್ Amazon ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

ಹೌದು, ಕಳೆದ ವರ್ಷ ಜುಲೈನಲ್ಲಿ ಸಾಕಷ್ಟು ಹೊಸ ಫೀಚರ್ಸ್, ದೀರ್ಘಾವದಿ ಬಾಳಿಕೆಯ ಭರವಸೆಯೊಂದಿಗೆ ಒನ್‌ಪ್ಲಸ್ ನಾರ್ಡ್ 3 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಗ್ರಾಹಕರು 20,000 ರೂ. ಒಳಗಿನ ಅಪ್‌ಗ್ರೇಡ್ ಮೊಬೈಲ್ ಹುಡುಕುತ್ತಿರುವಾಗಲೇ, ಒನ್‌ಪ್ಲಸ್ ನಾರ್ಡ್ 3 ಬೆಲೆಯನ್ನು ಕಡಿಮೆ ಮಾಡಿದೆ. ಅಮೆಜಾನ್ ಮಾನ್ಸೂನ್ ಮೊಬೈಲ್ Mania ಸೇಲ್‌ನಲ್ಲಿ 20,000 ರೂ.ಗಿಂತ ಕಡಿಮೆಗೆ ಲಭ್ಯವಿದೆ. ಈ ಫೋನ್ ಅನ್ನು 33,999 ರೂ. ಬೆಲೆಯೊಂದಿಗೆ ಲಾಂಚ್ ಮಾಡಲಾಗಿತ್ತು.
ಒನ್‌ಪ್ಲಸ್ ನಾರ್ಡ್ 3 ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. Amazonನಲ್ಲಿ 19,998 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳ ಮೇಲೆ 10% (1,500) ಡಿಸ್ಕೌಂಟ್ ಪಡೆಯಬಹುದು. ಅಮೆಜಾನ್ ಮಾನ್ಸೂನ್ ಮೊಬೈಲ್ Mania ಸೇಲ್‌ನಲ್ಲಿ ಈ ಆಫರ್ ಲಭ್ಯವಿದೆ. ಇದು ಈಗಾಗಲೇ ಚಾಲ್ತಿಯಲ್ಲಿದೆ ಮತ್ತು ಜೂನ್ 25 ರವರೆಗೆ ಮುಂದುವರಿಯಲಿದೆ. ಕಳೆದ ವರ್ಷ 33,999 ರೂ.ಗೆ ಲಭ್ಯವಾಗುವಂತೆ ಅನಾವರಣಗೊಳಿಸಲಾಗಿತ್ತು.
ಒನ್‌ಪ್ಲಸ್ ನಾರ್ಡ್ 3 ಫೀಚರ್ಸ್‌ಗಳು
ಒನ್‌ಪ್ಲಸ್ ನಾರ್ಡ್ 3 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು 6.74-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದಿಂದ ಕೂಡಿದೆ. 93.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 9000 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಆಂಡ್ರಾಯ್ಡ್ 13 ಆಧಾರಿತ Oxygen OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಅದ್ಭುತ ಕ್ಯಾಮೆರಾ ಸೆಟಪ್, ಬೊಂಬಟ್ ಬ್ಯಾಟರಿ
ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ, ನಾರ್ಟ್ 3 ಕ್ಯಾಮೆರಾ ಅದ್ಭುತವಾಗಿದೆ. ಈ ಫೋನ್ 50MP ಸೋನಿ IMX890 ಸೆನ್ಸಾರ್ ಹೊಂದಿದೆ. 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಕ್ಯಾಮೆರಾವನ್ನು ಪಡೆದಿದೆ. ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಿದ್ದು, 80W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಫೋನ್‌ನ ಕನೆಕ್ಟಿವಿಟಿ ಆಯ್ಕೆಗಳು
ಒನ್‌ಪ್ಲಸ್ ನಾರ್ಡ್ 3 ಫೋನ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು 5G, 4G LTE, Wi-Fi 6, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.
OnePlus Nord CE 4 Liteಗೆ ನೇರ ಸ್ಪರ್ಧೆ
ಒನ್‌ಪ್ಲಸ್ ನಾರ್ಡ್ 3 ಫೋನ್ ಮುಂಬರುವ OnePlus Nord CE 4 Liteಗೆ ನೇರ ಸ್ಪರ್ಧೆಯನ್ನು ನೀಡುತ್ತದೆ. ಈ ಮಧ್ಯೆ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್ ಘೋಷಿಸಿದೆ. ಈ ಒನ್‌ಪ್ಲಸ್ ನಾರ್ಡ್ 3 ಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ನೀವು 20,000 ರೂ.ಗಿಂತ ಕಡಿಮೆ ಬೆಲೆಯ ಮೊಬೈಲ್ ಅನ್ನು ಖರೀದಿಸಲು ಬಯಸಿದ್ರೆ, 19,998 ರೂ.ನ ಈ ಫೋನ್ ಬೆಸ್ಟ್ ಆಯ್ಕೆಯಾಗಿದೆ.


Click it and Unblock the Notifications








