3,000 ಅಗ್ಗ! OnePlus Nord 4 ಫೋನಿನ ಸೇಲ್ ಶುರು: ಈ ಅವಕಾಶ ಬಿಡಬೇಡಿ!
ಒನ್‌ಪ್ಲಸ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಹೊಸ ಒನ್‌ಪ್ಲಸ್ ಫೋನನ್ನು 3,000 ರೂ.ಗಳ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೌದು, ಒನ್‌ಪ್ಲಸ್ (OnePlus) ಕಂಪನಿಯು ಇತ್ತೀಚೆಗೆ ತನ್ನ ಭಾರತೀಯ ಗ್ರಾಹಕರಿಗಾಗಿ ಒನ್‌ಪ್ಲಸ್ ನಾರ್ಡ್ 4 (OnePlus Nord 4) ಫೋನನ್ನು ಬಿಡುಗಡೆ ಮಾಡಿದೆ. ಈ OnePlus Nord 4 ಫೋನಿನ ಮೊದಲ ಮಾರಾಟವು ಇಂದು (ಆಗಸ್ಟ್ 2) ಪ್ರಾರಂಭವಾಗಲಿದೆ. ನೀವು ಹೊಸ ಫೋನ್ ಖರೀದಿಸಲು ಬಯಸಿದರೆ, ಒನ್‌ಪ್ಲಸ್ ನಾರ್ಡ್ 4 ಫೋನಿನ ಬೆಲೆ, ಡಿಸ್ಕೌಂಟ್ ಮತ್ತು ಫೀಚರ್ಸ್‌ಗಳನ್ನು ಒಮ್ಮೆ ತಿಳಿಯಿರಿ.
ಒನ್‌ಪ್ಲಸ್ ನಾರ್ಡ್ 4 ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಹೊಂದಿದೆ. ಸ್ಟನ್ನಿಂಗ್ ಲುಕ್ ರಚನೆ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ರಚನೆ ಒಳಗೊಂಡಿದೆ. ಈ ಫೋನ್ 5,500mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಮೆಟಲ್ ರಚನೆ ಪಡೆದಿರುವ ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ನಾರ್ಡ್ 3 ಫೋನಿನ ಉತ್ತರಾಧಿಕಾರಿಯಾಗಿದೆ. ಈ ಫೋನಿನ ಬೆಲೆ ಮತ್ತು ಡಿಸ್ಕೌಂಟ್ ತಿಳಿಯಲು ಮುಂದೆ ಓದಿ.

OnePlus Nord 4 ಬೆಲೆ ಮತ್ತು ಆಫರ್
8GB + 128GB ಸ್ಟೋರೇಜ್ ಬೆಲೆ = ರೂ. 29,999
8GB + 256GB ಸ್ಟೋರೇಜ್ ಬೆಲೆ = ರೂ. 32,999
12GB + 256GB ಸ್ಟೋರೇಜ್ ಬೆಲೆ = ರೂ. 35,999
ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಮರ್ಕ್ಯುರಿಯಲ್ ಸಿಲ್ವರ್, ಅಬ್ಸಿಡಿಯನ್ ಮಿಡ್‌ನೈಟ್ ಮತ್ತು ಓಯಸಿಸ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ICICI ಮತ್ತು OneCard ಬ್ಯಾಂಕ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಈ ಫೋನ್ ಮೇಲೆ ಡಿಸ್ಕೌಂಟ್ ಪಡೆಯಬಹುದು. ಬ್ಯಾಂಕ್ ಆಫರ್‌ನಲ್ಲಿ 3,000 ರೂ.ವರೆಗೆ ಹಣ ಉಳಿಸಬಹುದು. ಇಂದು (ಆಗಸ್ಟ್ 2) ಮಧ್ಯಾಹ್ನ 12 ಗಂಟೆಯಿಂದ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಾಗಲಿದೆ.
ಡಿಸ್ಕೌಂಟ್ ಬಳಿಕ OnePlus Nord 4 ಬೆಲೆ
8GB + 128GB ಸ್ಟೋರೇಜ್ ಬೆಲೆ = ರೂ. 27,999
8GB + 256GB ಸ್ಟೋರೇಜ್ ಬೆಲೆ = ರೂ. 29,999
12GB + 256GB ಸ್ಟೋರೇಜ್ ಬೆಲೆ = ರೂ. 32,999
ಒನ್‌ಪ್ಲಸ್ ನಾರ್ಡ್ 4 ಫೀಚರ್ಸ್
ಡಿಸ್‌ಪ್ಲೇ: ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ 6.74 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1240 x 2772 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. 120Hz ರಿಫ್ರೆಶ್ ರೇಟ್ ಸೌಲಭ್ಯ ಸಹ ಪಡೆದಿದೆ. ಇದು 451ppi ಮತ್ತು HDR10+ ಸಪೋರ್ಟ್ ಸಹ ಹೊಂದಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡಲಿದೆ. ಜೊತೆಗೆ, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ರನ್ ಆಗಲಿದೆ. ಇದು 16GB RAM ಮತ್ತು 256GB ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ: ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಇದರ ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಪಡೆದುಕೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದರೊಂದಿಗೆ 100W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ನಂತಹ ಸೌಲಭ್ಯ ಹೊಂದಿದೆ.


Click it and Unblock the Notifications








