OnePlus Nord 4 ಬೆಲೆ ಲೀಕ್! Nord 3ಗಿಂತ ಅಗ್ಗ.. ಶಾಕ್ ಆದ ಸ್ಮಾರ್ಟ್‌ಫೋನ್ ಪ್ರಿಯರು!
ಒನ್‌ಪ್ಲಸ್ ಮೊಬೈಲ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ OnePlus Nord 4 ಅನ್ನು ಬಿಡುಗಡೆ ಮಾಡುವುದು ಗೊತ್ತೇ ಇದೆ. ಈ ಮಧ್ಯೆ ಈ ಫೋನ್ ಕುರಿತ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ. ಹೌದು, ಇದೇ ಜುಲೈ 16 ರಂದು ಇಟಲಿಯ ಮಿಲನ್‌ನಲ್ಲಿ OnePlus Nord 4 ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಇದೀಗ ಈ ಫೋನಿನ ಬೆಲೆ ಸೋರಿಕೆಯಾಗಿದೆ. ನಿನ್ನೆಯಷ್ಟೇ, ಲೀಕ್ ಆಗಿರುವ ಅಧಿಕೃತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಲ್ ಚಲ್ ಎಬ್ಬಿಸಿವೆ. ಈಗ, ಹೊಸ ಸೋರಿಕೆಯು ಒನ್‌ಪ್ಲಸ್ ನಾರ್ಡ್ 4ರ ನಿರೀಕ್ಷಿತ ಬೆಲೆಯನ್ನು ಬಹಿರಂಗ ಪಡಿಸಿದೆ.
ಒನ್‌ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಮೊಬೈಲ್ ಪ್ರಿಯರು ಕೊಡುವ ಬೆಲೆಗೆ ಉತ್ತಮ ಗುಣಮಟ್ಟದ ಫೀಚರ್ಸ್‌ಗಳನ್ನು ನೀಡುವ ಮೂಲಕ ಭಾರೀ ಸೌಂಡ್ ಮಾಡುತ್ತಿದೆ. ಹೀಗಾಗಿ, ಜನರು ಒನ್‌ಪ್ಲಸ್ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುತ್ತಾರೆ. ಇದೀಗ, ತನ್ನ Nord ಸರಣಿಯ ನೂತನ OnePlus Nord 4 ಗ್ರಾಹಕರ ಕೈಗೆ ಸೇರುವ ಕಾಲ ಸನ್ನಿಹಿತವಾಗಿದೆ. ಇದು ಒನ್‌ಪ್ಲಸ್ ಪ್ರಿಯರ ಮೆಚ್ಚುಗೆ ಗಳಿಸುವುದರಲ್ಲಿ ಅನುಮಾನವೇ ಇಲ್ಲ. ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

OnePlus Nord 4 ಬೆಲೆ ಸೋರಿಕೆ: ಭಾರತದಲ್ಲಿ ಎಷ್ಟಿರಲಿದೆ?
X (formerly Twitter) ನಲ್ಲಿ ಟಿಪ್‌ಸ್ಟರ್ ಟೆಕ್ ಹೋಮ್ ಪ್ರಕಾರ, OnePlus Nord 4 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 27,999 ರೂ. ಇರಲಿದೆ. ಸೋರಿಕೆಯಾದ ಬೆಲೆಯ ಮಾಹಿತಿಯು ಭಾರತೀಯ ಗ್ರಾಹಕರಿಗೆ ಅಚ್ಚರಿಯನ್ನು ಉಂಟುಮಾಡಿದೆ. ಆದಾಗ್ಯೂ, ಸೋರಿಕೆಯಾದ ಚಿತ್ರದ ಪ್ರಕಾರ ಈ ಬೆಲೆಯು ನಿರೀಕ್ಷಿತ ಬ್ಯಾಂಕ್ ಡಿಸ್ಕೌಂಟ್‌ಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ನೀವು ಗಮನಿಸಬೇಕಿದೆ.
ಡಿಸ್ಕೌಂಟ್‌ನೊಂದಿಗೆ 30,000 ರೂ.ಗಿಂತ ಕಡಿಮೆ ಬೆಲೆ?
RAM ಮತ್ತು ಸ್ಟೋರೇಜ್ ವೇರಿಯಂಟ್‌ನ ಆಧಾರದ ಮೇಲೆ ನಿಜವಾದ ಬೆಲೆಯು 31,000 ರೂ.ನಿಂದ 32,000 ರೂ.ಗೆ ಹತ್ತಿರವಿರಬಹುದು ಎಂದು ವರದಿಗಳು ಸೂಚಿಸುತ್ತವೆ. ಕಂಪನಿಯು 30,000 ರೂ.ಗಿಂತ ಕಡಿಮೆ ಬೆಲೆಯೊಂದಿಗೆ ಕೆಲವು ಲಾಂಚ್ ಆಫರ್‌ಗಳನ್ನು ನೀಡುವ ಸಾಧ್ಯತೆಯಿದೆ. ಅದೇನೇ ಇರಲಿ, ನಿರೀಕ್ಷಿತ ಬೆಲೆಯೊಂದಿಗೆ, OnePlus Nord 4 ಇನ್ನಿತರ ಕಂಪನಿಗಳ ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧೆ ಮಾಡಲಿದೆ. ಬಿಡುಗಡೆಯ ಬಳಿಕ ಅಧಿಕೃತ ದರ ಬಹಿರಂಗವಾಗಲಿದೆ.
OnePlus Nord 3 ಬೆಲೆಗಿಂತ ಕಡಿಮೆ ಇರುತ್ತೆ
ಕಳೆದ ವರ್ಷ ಬಿಡುಗಡೆಯಾದ OnePlus Nord 3 ಸ್ಮಾರ್ಟ್‌ಫೋನ್‌ನ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 33,999 ರೂ.ನೊಂದಿಗೆ ಪ್ರಾರಂಭವಾಯಿತು. ಇದೀಗ, ಸೋರಿಕೆಯಾದ ಬೆಲೆಯು ನಿಜವಾಗಿದ್ದರೆ, OnePlus ಅದರ ಹಿಂದಿನ ಬೆಲೆಗಿಂತ ಕಡಿಮೆ ಬೆಲೆಗೆ ಒನ್‌ಪ್ಲಸ್ ನಾರ್ಡ್ 4 ಅನ್ನು ಮಾರಾಟ ಮಾಡಲಿದೆ. ಭಾರತದಲ್ಲಿ Nord 4 ಖರೀದಿಯಲ್ಲಿ OnePlus ಆರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದೆ EMI ಆಯ್ಕೆಯನ್ನು ನೀಡಲಿದೆ. ಇದು ಗ್ರಾಹಕರ ಜೇಬಿನ ಭಾರವನ್ನು ಕಡಿಮೆ ಮಾಡುತ್ತದೆ.

ವಾವ್ ಎನಿಸುವ ಫೀಚರ್ಸ್‌ಗಳು
ಒನ್‌ಪ್ಲಸ್ ನಾರ್ಡ್ 4ನ ವಿಶೇಷತೆಗಳನ್ನು ನೋಡುವುದಾದರೆ, ಈ ಫೋನ್ 6.74 ಇಂಚಿನ OLED Tianma U8+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ ಸಾಕಷ್ಟು ಅದ್ಭುತವಾಗಿರಲಿದ್ದು, ಉತ್ತಮ ಬಣ್ಣಗಳು ಮತ್ತು ದೃಶ್ಯಗಳು ಇದರಲ್ಲಿ ಕಾಣಿಸುತ್ತವೆ. ಫೋನ್‌ನ ಡಿಸ್ಲ್ಪೇ 1.5K ರೆಸಲ್ಯೂಶನ್ ಬೆಂಬಲದೊಂದಿಗೆ ಬರಲಿದೆ. ಇದರ ಡಿಸ್ಲ್ಪೇ 120Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದೆ. ಅಲ್ಲದೆ, 2150 ನಿಟ್‌ಗಳ ಗರಿಷ್ಠ ಬ್ರೈಟ್‌ನೆಟ್ ಹೊಂದಿರಲಿದೆ.
ಕ್ಯಾಮೆರಾ ಸೆಟಪ್‌ಗೆ ನೀವು ಫಿದಾ ಆಗ್ತೀರಾ!
ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಸೆಟಪ್ ನೋಡುವುದಾದರೆ, ಇದು ಡ್ಯುಯಲ್-ಟೋನ್ ವಿನ್ಯಾಸ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಬ್ಯಾಕ್ ಕ್ಯಾಮೆರಾ OnePlus Nord 3Sಗಿಂತ ಭಿನ್ನವಾಗಿರುತ್ತದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಅಲ್ಲದೆ, 8 ಮೆಗಾಪಿಕ್ಸೆಲ್ IMX355 ಅಲ್ಟ್ರಾವೈಡ್ ಕ್ಯಾಮೆರಾ ಸಂವೇದಕವನ್ನು ಒದಗಿಸಲಾಗುವುದು. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಫೋನಿನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ Samsung S5K3P9 ಸಂವೇದಕವನ್ನು ಅಳವಡಿಸಲಾಗಿದೆ.
ಈ ಫೋನಿನ ಬ್ಯಾಟರಿ ಬ್ಯಾಕಪ್ ಅದ್ಭುತ
ಈ ಸ್ಮಾರ್ಟ್‌ಫೋನ್ Qualcomm Snapdragon 7+ Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಬಾಕ್ಸ್ ಹೊರಗೆ ಆಧರಿಸಿ Android 14ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಫೋನ್‌ಗೆ 4 ವರ್ಷಗಳ ಭದ್ರತಾ ಅಪ್ಡೇಟ್‌ಗಳ ಜೊತೆಗೆ 3 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್‌ಗಳನ್ನು ನೀಡಲಾಗುವುದು.

OnePlus Buds 3 Pro ಮತ್ತು Watch 2R ಲಾಂಚ್
ಈ ಫೋನ್‌ನ ಕನೆಕ್ಟಿವಿಟಿ ಆಯ್ಕೆಗಳನ್ನು ನೋಡುವುದಾದರೆ, ಇದು ಡ್ಯುಯಲ್ ಸ್ಪೀಕರ್‌ಗಳು, 5G, Wi-Fi, ಬ್ಲೂಟೂತ್ 5.4, NFC ಮತ್ತು IR ಬ್ಲಾಸ್ಟರ್ ಅನ್ನು ಹೊಂದಿದೆ. ಮುಂಬರುವ Nord 4 ಫೋನ್‌ನ ಕೆಳಭಾಗದಲ್ಲಿ ಬೆಳ್ಳಿ ಬಣ್ಣ, ಕೆಳಭಾಗದಲ್ಲಿ ಬ್ರಷ್ ಮೆಟಲ್ ಫಿನಿಶ್ ಹೊಂದಿರುವ ಮಿಂಟ್ ಗ್ರೀನ್, ಕೆಳಭಾಗದಲ್ಲಿ ಬ್ರಷ್ ಮೆಟಲ್ ಫಿನಿಶ್ ಹೊಂದಿರುವ ಕಪ್ಪು ಬಣ್ಣ ಕಾಣಬಹುದು. OnePlus Nord 4 ಜೊತೆಗೆ OnePlus Buds 3 Pro ಮತ್ತು OnePlus Watch 2R ಸಹ ಭಾರತದಲ್ಲಿ ಲಾಂಚ್ ಆಗಲಿದೆ.
ಜುಲೈ 16 ರಂದು ಅದ್ದೂರಿಯಾಗಿ ಲಾಂಚ್
ಇದೇ ಜುಲೈ 16 ರಂದು OnePlus Nord 4 ಫೋನ್ ಅದ್ದೂರಿಯಾಗಿ ಲಾಂಚ್ ಆಗಲಿದೆ. ಇಟಲಿಯಲ್ಲಿ ನಡೆಯುವ ಜಾಗತಿಕ ಸಮಾರಂಭದಲ್ಲಿ ಈ ಸ್ಮಾರ್ಟ್‌ಫೋನ್ ಲೋಕಾರ್ಪಣೆಗೊಳ್ಳಲಿದೆ. ಭಾರತದಲ್ಲಿ ಸಂಜೆ 6.30ಕ್ಕೆ ಸ್ಟ್ರೀಮಿಂಗ್ ಆಗಲಿದೆ. ವರದಿಗಳ ಪ್ರಕಾರ OnePlus Nord 4 ಮೆಟಲ್ ಗ್ಲಾಸ್ ಯುನಿಬಾಡಿ ವಿನ್ಯಾಸದಲ್ಲಿ ಬರಲಿದೆ. ಸೋರಿಕೆಯಾದ ಫೋಟೋವು ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ ಎಂದು ತೋರಿಸುತ್ತದೆ. ಒಟ್ನಲ್ಲಿ, ಇದು ವಿಭಿನ್ನ ಡಿಸೈನ್, ಅತ್ಯಾಕರ್ಷಕ ಫೀಚರ್ಸ್ ಮತ್ತು ಆಕರ್ಷಕ ಬೆಲೆಯನ್ನು ಹೊಂದಿರಲಿದೆ.


Click it and Unblock the Notifications








