Home
ಮೊಬೈಲ್

OnePlus: ಇಂದು ಸಮ್ಮರ್ ಲಾಂಚ್ ಈವೆಂಟ್: OnePlus Nord 4 ಫೋನ್ ಬಿಡುಗಡೆ: ಬೆಲೆ ಎಷ್ಟು? ಏನು ವಿಶೇಷತೆ?

ಟೆಕ್ ದೈತ್ಯ ಒನ್‌ಪ್ಲಸ್‌ (OnePlus) ಕಂಪನಿಯ 'ಒನ್‌ಪ್ಲಸ್ ಸಮ್ಮರ್ ಲಾಂಚ್ ಈವೆಂಟ್' (OnePlus Nord Summer Launch Event) ಇಂದು (ಜುಲೈ 16) ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಲ್ಕು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯ ಬಿಡುಗಡೆ ಸಮಾರಂಭವು ಇಟಲಿಯಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ಲಾಂಚ್ ಈವೆಂಟ್‌ನಲ್ಲಿ ಪರಿಚಯಿಸುವ ಉತ್ಪನ್ನಗಳ ಬಗ್ಗೆ ಕಂಪನಿಯು ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಆದಾಗ್ಯೂ, ಮಾಧ್ಯಮ ವರದಿಗಳಲ್ಲಿ, ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳ ಕುರಿತ ಮಾಹಿತಿಯು ಬಿಡುಗಡೆಗು ಮೊದಲೇ ಸೋರಿಕೆಯಾಗಿದೆ.

ಮೊಬೈಲ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ ಕಂಪನಿಯು OnePlus Nord 4 ಸ್ಮಾರ್ಟ್‌ಫೋನ್, OnePlus Watch 2R, OnePlus Nord Buds Pro 3 ಮತ್ತು OnePlus Pad 2 ಅನ್ನು ಸಹ ಬಿಡುಗಡೆ ಮಾಡಲಿದೆ. ಕಂಪನಿಯು ಈಗಾಗಲೇ ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಒನ್‌ಪ್ಲಸ್‌ ನಾರ್ಡ್‌ 4 ಫೋನ್‌ ಒನ್‌ಪ್ಲಸ್‌ ನಾರ್ಡ್‌ 3ನ ಉತ್ತರಾಧಿಕಾರಿಯಾಗಿ ಬರಲಿದೆ.

ಇಂದು OnePlus Nord 4 ಫೋನ್ ಬಿಡುಗಡೆ: ಬೆಲೆ ಎಷ್ಟು? ಏನು ವಿಶೇಷತೆ?

ಸಮಾರಂಭವನ್ನು ಲೈವ್ ಆಗಿ ವೀಕ್ಷಿಸುವುದು ಹೇಗೆ?

ಈವೆಂಟ್ ಅನ್ನು ಸಂಜೆ 6.30ಕ್ಕೆ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇದು 50 ನಿಮಿಷಗಳವರೆಗೆ ಇರುತ್ತದೆ. ಇದನ್ನು ವೀಕ್ಷಿಸಲು, ನೀವು ಒನ್‌ಪ್ಲಸ್‌ನ ಅಧಿಕೃತ ಯುಟ್ಯೂಬ್ ಚಾನಲ್‌ಗೆ ಭೇಟಿ ನೀಡಬಹುದು. ಅಥವಾ ಫೇಸ್‌ಬುಕ್, ಎಕ್ಸ್‌ ಖಾತೆ ಮತ್ತು ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಲ್ಲಿ ಇದರ ಲೈವ್ ಅಪ್ಡೇಟ್‌ಗಳ್ನು ಪಡೆಯಬಹುದು.

ಕೆಳಗಿನ ಎಂಬೆಡೆಡ್ ವೀಡಿಯೊವನ್ನು ಕ್ಲಿಕ್ ಮಾಡುವ ಮೂಲಕ ನೀವು 'ಒನ್‌ಪ್ಲಸ್ ಸಮ್ಮರ್ ಲಾಂಚ್ ಈವೆಂಟ್' ಅನ್ನು ಲೈವ್ ಆಗಿ ವೀಕ್ಷಿಸಬಹುದು.

ಒನ್‌ಪ್ಲಸ್‌ ನಾರ್ಡ್‌ 4 ಬೆಲೆ 25,000 ರೂ. ಸಾಧ್ಯತೆ!

ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್ 6.74 ಇಂಚಿನ OLED Tianma U8+ ಡಿಸ್ಪ್ಲೇ, ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7+ ಜೆನ್‌ 3 ಪ್ರೊಸೆಸರ್ ಮತ್ತು 5,500mAh ಬ್ಯಾಟರಿಯನ್ನು ಹೊಂದಿರುತ್ತದೆ. ಈ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ನ ಬೆಲೆ 25,000 ರೂ. ಆಗಿರಬಹುದು. ಈ ಹೊಸ ಸ್ಮಾರ್ಟ್‌ಫೋನ್ 6 ವರ್ಷಗಳ ಭದ್ರತಾ ಅಪ್ಡೇಟ್‌ಗಳನ್ನು ಮತ್ತು 4 ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯುತ್ತದೆ ಎಂದು ಕಂಪನಿಯು ದೃಢಪಡಿಸಿದೆ.

ಒನ್‌ಪ್ಲಸ್‌ ನಾರ್ಡ್‌ 4ನ ನಿರೀಕ್ಷಿತ ವಿಶೇಷತೆಗಳು

ಡಿಸ್ಲ್ಪೇ: ಒನ್‌ಪ್ಲಸ್‌ ನಾರ್ಡ್‌ 4ನಲ್ಲಿ, ಕಂಪನಿಯು 6.74 ಇಂಚಿನ OLED Tianma U8+ ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಒದಗಿಸಬಹುದು. ಡಿಸ್ಲ್ಪೇ ರೆಸಲ್ಯೂಶನ್ 1.5K ಆಗಿರಬಹುದು. ಮತ್ತು ಅದರ ಗರಿಷ್ಠ ಬ್ರೈಟ್‌ನೆಸ್‌ 2150 nits ಹೊಂದಿರುವ ನಿರೀಕ್ಷೆಯಿದೆ.

ಕ್ಯಾಮೆರಾ ಸೆಟಪ್: ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ನಾರ್ಡ್ 4ನ ಹಿಂದಿನ ಪ್ಯಾನೆಲ್‌ನಲ್ಲಿ ಕಾಣಬಹುದು. ಆದರೆ, 16MP ಫ್ರಂಟ್‌ ಕ್ಯಾಮೆರಾವು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಲಭ್ಯವಾಗುವ ನಿರೀಕ್ಷೆಯಿದೆ.

ಇಂದು OnePlus Nord 4 ಫೋನ್ ಬಿಡುಗಡೆ: ಬೆಲೆ ಎಷ್ಟು? ಏನು ವಿಶೇಷತೆ?

ಸಾಫ್ಟ್‌ವೇರ್: ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7+ ಜೆನ್‌ 3 ಚಿಪ್‌ಸೆಟ್ ಫೋನ್‌ನಲ್ಲಿ ಲಭ್ಯವಿರುತ್ತದೆ. ಇದು ಔಟ್-ಆಫ್-ಬಾಕ್ಸ್ ಆಂಡ್ರಾಯ್ಡ್ 14 ಆಧಾರಿತ ಇತ್ತೀಚಿನ ಆಕ್ಸಿಜನ್ ಓಎಸ್‌ನೊಂದಿಗೆ ಬರಬಹುದು.

ಸ್ಟೋರೇಜ್‌ ಆಯ್ಕೆ: ಕಂಪನಿಯು ಒನ್‌ಪ್ಲಸ್‌ ನಾರ್ಡ್‌ 4ನಲ್ಲಿ ಎರಡು ಸ್ಟೋರೇಜ್‌ ಆಯ್ಕೆಗಳನ್ನು ನೀಡಬಹುದು. ಇದು 4GB RAM ಜೊತೆಗೆ 128GB ಸ್ಟೋರೇಜ್ ಮತ್ತು 6GB RAM ಜೊತೆಗೆ 256GB ಸ್ಟೋರೇಜ್ ಆಯ್ಕೆಯನ್ನು ಹೊಂದಿರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯ ಮುಂಬರುವ ಈ ಒನ್‌ಪ್ಲಸ್‌ ನಾರ್ಡ್‌ 4 ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿರುವ ಸಾಧ್ಯತೆಯಿದೆ. ಇದರೊಂದಿಗೆ 100W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲ ಪಡೆದಿರುವ ನಿರೀಕ್ಷೆ ಇದೆ.

ಕನೆಕ್ಟಿವಿಟಿ ಆಯ್ಕೆಗಳು: ಈ ಫೋನ್ 5G, 4G, 3G, 2G, Wi-Fi, ಬ್ಲೂಟೂತ್ 5.2, GPS, FM ರೇಡಿಯೋ ಮತ್ತು USB ಟೈಪ್-C ಪೋರ್ಟ್ ಅನ್ನು ಚಾರ್ಜಿಂಗ್‌ಗಾಗಿ ಹೊಂದಿರುತ್ತದೆ.

Best Mobiles in India

English summary
OnePlus Nord 4 will be launching in india today: Expected specs, price details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+