ಭಾರತಕ್ಕೆ ಏಪ್ರಿಲ್‌ನಲ್ಲಿ OnePlus Nord 6 ಆಗಮನ ಸಾಧ್ಯತೆ!..9000mAh ಬ್ಯಾಟರಿ!
OnePlus ತನ್ನ ಜನಪ್ರಿಯ Nord ಸರಣಿಗೆ ಶೀಘ್ರದಲ್ಲೇ ಹೊಸ OnePlus Nord 6 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸುವ ಹಲವಾರು ಸೂಚನೆಗಳು ದೊರೆತಿವೆ. ಕಳೆದ ಜುಲೈ 2025 ರಲ್ಲಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಗೊಂಡಿದ್ದ OnePlus Nord 5 ಗೆ ಉತ್ತರಾಧಿಕಾರಿಯಾಗಿ OnePlus Nord 6 ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಈ ಫೋನ್ ಹೊಂದಿರುವ ಪ್ರಮುಖ ಸ್ಪೆಸಿಫಿಕೇಷನ್‌ಗಳು ಮತ್ತು ಬಿಡುಗಡೆ ಸಮಯದ ಬಗ್ಗೆ ಹಲವಾರು ವರದಿಗಳು ಹೊರಬಿದ್ದಿವೆ. ಇದೀಗ ಜನಪ್ರಿಯ ಟಿಪ್‌ಸ್ಟಾರ್ ಯೋಗೇಶ್ ಬ್ರಾರ್ ಅವರು ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.
ಏಪ್ರಿಲ್‌ನಲ್ಲಿ ಬಿಡುಗಡೆ ಸಾಧ್ಯತೆ
ಟೆಕ್ ಲೀಕ್‌ಗಳಿಗೆ ಪ್ರಸಿದ್ಧರಾಗಿರುವ ಯೋಗೇಶ್ ಬ್ರಾರ್ ಅವರು X (ಹಿಂದಿನ Twitter) ನಲ್ಲಿ ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, OnePlus Nord 6 ಫೋನ್ ಏಪ್ರಿಲ್ ತಿಂಗಳಲ್ಲೇ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಈ ಫೋನ್‌ನ ಪ್ರಮುಖ ವೈಶಿಷ್ಟ್ಯಗಳು ಚೀನಾದಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ OnePlus Turbo 6 ಮಾದರಿಯಂತೆಯೇ ಇರಬಹುದು ಎಂದು ಹೇಳಿದ್ದಾರೆ. ಅಂದರೆ, Nord 6 ಫೋನ್ Turbo 6ನ ರೀಬ್ರ್ಯಾಂಡ್ ಆವೃತ್ತಿಯಾಗಿರುವ ಸಾಧ್ಯತೆ ಹೆಚ್ಚು ಎಂದು ವರದಿಗಳು ಸೂಚಿಸುತ್ತಿವೆ.
Geekbench ನಲ್ಲಿ ಕಾಣಿಸಿಕೊಂಡಿದೆ ಮತ್ತು ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಸಾಧ್ಯತೆ
ಇತ್ತೀಚೆಗೆ OnePlus Nord 6 ಫೋನ್ Geekbench ಬೆಂಚ್ಮಾರ್ಕ್ ವೆಬ್‌ಸೈಟ್‌ನಲ್ಲಿ CPH2795 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ. ಈ ಬೆಳವಣಿಗೆ ಫೋನ್ ಬಿಡುಗಡೆ ಹೆಚ್ಚು ದೂರದಲ್ಲಿಲ್ಲ ಎಂಬ ಸೂಚನೆಯನ್ನು ನೀಡುತ್ತದೆ. OnePlus Nord 6 ಬೆಲೆ ವಿಚಾರದಲ್ಲಿ ಕೂಡ ಬದಲಾವಣೆ ಆಗುವ ನಿರೀಕ್ಷೆ ಇದೆ. ಉದಾಹರಣೆಗೆ, OnePlus Nord 5 ಭಾರತದಲ್ಲಿ ₹31,999 ಆರಂಭಿಕ ಬೆಲೆಗೆ (8GB RAM + 128GB ಸ್ಟೋರೇಜ್) ಲಭ್ಯವಾಗಿತ್ತು. ಇತ್ತೀಚಿನ ಚಿಪ್ ಕೊರತೆ ಹಾಗೂ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದರೆ, OnePlus Nord 6 ಬೆಲೆ ಇದಕ್ಕಿಂತ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ
ಕ್ಯಾಮೆರಾ ವಿಚಾರದಲ್ಲಿ OnePlus Turbo 6 ಮಾದರಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಇದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ (f/1.8 ಅಪರ್ಚರ್) ಮತ್ತು 2 ಮೆಗಾಪಿಕ್ಸೆಲ್ ಮೋನೋಕ್ರೋಮ್ ಸೆನ್ಸರ್ ಇದೆ. ಈ ಕ್ಯಾಮೆರಾ ವ್ಯವಸ್ಥೆ 20x ಡಿಜಿಟಲ್ ಜೂಮ್ ಬೆಂಬಲಿಸುತ್ತದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಆದರೆ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಬರಲಿರುವ OnePlus Nord 6 ಸ್ಮಾರ್ಟ್‌ಫೋನಿನಲ್ಲಿ ಮೋನೋಕ್ರೋಮ್ ಸೆನ್ಸರ್ ಬದಲು ಅಲ್ಟ್ರಾ-ವೈಡ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತವೆ. ಜೊತೆಗೆ ಸೆಲ್ಫಿ ಕ್ಯಾಮೆರಾದ ಸೆನ್ಸರ್ ಕೂಡ Turbo 6 ಮಾದರಿಗಿಂತ ವಿಭಿನ್ನವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ದೊಡ್ಡ AMOLED ಡಿಸ್ಪ್ಲೇ ಮತ್ತು 165Hz ರಿಫ್ರೆಶ್ ರೇಟ್
ಸ್ಪೆಸಿಫಿಕೇಷನ್ ವಿಚಾರದಲ್ಲಿ OnePlus Nord 6 ಫೋನ್ 6.78 ಇಂಚಿನ ಫುಲ್-HD+ ಫ್ಲೆಕ್ಸಿಬಲ್ AMOLED ಡಿಸ್ಪ್ಲೇ ಹೊಂದಿರಬಹುದು ಎಂದು ಹೇಳಲಾಗಿದೆ. ಈ ಪರದೆ 450ppi ಪಿಕ್ಸೆಲ್ ಡೆನ್ಸಿಟಿ, 165Hz ರಿಫ್ರೆಶ್ ರೇಟ್ ಹಾಗೂ ಗರಿಷ್ಠ 1,800 ನಿಟ್ಸ್ ಬ್ರೈಟ್‌ನೆಸ್ ನೀಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಗೇಮಿಂಗ್, ವಿಡಿಯೋ ವೀಕ್ಷಣೆ ಮತ್ತು ಸ್ಕ್ರೋಲಿಂಗ್ ಅನುಭವ ಹೆಚ್ಚು ಸ್ಮೂತ್ ಆಗಿರಬಹುದು.
Snapdragon 8s Gen 4 ಪ್ರೊಸೆಸರ್ ಶಕ್ತಿ
ಕಾರ್ಯಕ್ಷಮತೆ ದೃಷ್ಟಿಯಿಂದ ಈ ಫೋನ್‌ನಲ್ಲಿ Snapdragon 8s Gen 4 ಪ್ರೊಸೆಸರ್ ಇರಬಹುದೆಂದು ವರದಿಗಳು ಸೂಚಿಸುತ್ತವೆ. ಜೊತೆಗೆ Adreno 825 GPU ನೀಡಲಾಗಬಹುದು. ಇದರಿಂದ ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್ ಕಾರ್ಯಗಳಲ್ಲಿ ಉತ್ತಮ ಕಾರ್ಯಕ್ಷಮತೆ ಸಿಗುವ ನಿರೀಕ್ಷೆ ಇದೆ.ಮೆಮೊರಿ ಆಯ್ಕೆಗಳಲ್ಲಿ 16GB ವರೆಗೆ LPDDR4X RAM ಹಾಗೂ 512GB ವರೆಗೆ UFS 3.1 ಸ್ಟೋರೇಜ್ ಸೌಲಭ್ಯ ಲಭ್ಯವಾಗಬಹುದು.
9000mAh ದೊಡ್ಡ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್
ಬ್ಯಾಟರಿ ವಿಭಾಗದಲ್ಲಿ OnePlus Turbo 6 ಫೋನ್ 9,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಇದಕ್ಕೆ 80W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ. ಇದೇ ಬ್ಯಾಟರಿ ಸಾಮರ್ಥ್ಯ ಹಾಗೂ ಚಾರ್ಜಿಂಗ್ ತಂತ್ರಜ್ಞಾನ OnePlus Nord 6 ನಲ್ಲೂ ಇರಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ಫೋನ್ ಹೆಚ್ಚು ಸಮಯ ಬ್ಯಾಟರಿ ಬ್ಯಾಕಪ್ ನೀಡುವ ಸಾಧ್ಯತೆ ಇದೆ.
ಒಟ್ಟಾರೆ ನೋಡಿದರೆ, ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ, ಹೈ ರಿಫ್ರೆಶ್ ರೇಟ್ ಡಿಸ್ಪ್ಲೇ ಹಾಗೂ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ OnePlus Nord 6 ಮಿಡ್-ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಇದರ ಅಧಿಕೃತ ಬಿಡುಗಡೆಗೆ ಈಗ ಟೆಕ್ ಅಭಿಮಾನಿಗಳು ಕಾಯುತ್ತಿದ್ದಾರೆ. ನೀವು ಕೂಡ OnePlus Nord 6 ಆಗಮನಕ್ಕಾಗಿ ಎದುರುನೋಡುತ್ತಿದ್ದರೆ, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








