OnePlus Nord CE 4 ಫೋನ್ ಮೇಲೆ ಬಂಪರ್ ಆಫರ್: ಇಂಥ ಸೂಪರ್ ಡಿಸ್ಕೌಂಟ್ ಮತ್ತೆ ಸಿಗಲ್ಲ!
ನೀವು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರಿಯರಾಗಿದ್ರೆ ನಿಮಗಿದು ಭರ್ಜರಿ ಸಿಹಿ ಸುದ್ದಿ. 2,000 ರೂ. ಡಿಸ್ಕೌಂಟ್, ಇಎಂಐ ಸೌಲಭ್ಯ ಮತ್ತು ಕ್ಯಾಶ್‌ಬ್ಯಾಕ್ ಕೂಡ ಸಿಗುತ್ತದೆ. ಹೌದು, ಒನ್‌ಪ್ಲಸ್ ನಾರ್ಡ್ CE 4 ಸ್ಮಾರ್ಟ್‌ಫೋನ್ ಅನ್ನು Amazonನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಡಿಸ್ಕೌಂಟ್ ಪಡೆಯಬಹುದು. ಈ Oneplus Nord CE 4 ಮೂಲ ಬೆಲೆ 24,999 ರೂ. ಆಗಿದೆ. ನೀವು ಬ್ಯಾಂಕ್ ಕಾರ್ಡ್‌ಗಳ ಮೂಲಕ 2,000 ರೂ. ವರೆಗೆ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.
ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್, ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದೆ. ಜೊತೆಗೆ, ಹೊಸ ಹೊಸ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್‌ಗಳೆಲ್ಲವೂ ಗ್ರಾಹಕರ ಹಾಟ್ ಫೇವರಿಟ್ ಆಗಿವೆ. ಕೆಲವೊಮ್ಮೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತದೆ. ಇದೀಗ, ಒನ್‌ಪ್ಲಸ್ ನಾರ್ಡ್ CE 4 (Oneplus Nord CE 4) ಸ್ಮಾರ್ಟ್‌ಫೋನ್ ಮೆಲೆಯೂ ರಿಯಾಯಿತಿ ಘೋಷಿಸಿದೆ. ಈ ಡಿಸ್ಕೌಂಟ್ Amazon ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

ಒನ್‌ಪ್ಲಸ್ ನಾರ್ಡ್ CE 4 ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. 8GB RAM + 128GB ಇಂಟರ್ನಲ್ ಸ್ಟೋರೇಜ್‌ನ ಬೆಲೆ 24,999 ರೂ. ಆಗಿದೆ. ಅದೇ 8GB RAM + 256GB ಇಂಟರ್ನಲ್ ಸ್ಟೋರೇಜ್ ಬೆಲೆ 26,999 ರೂ. ಇದೆ. HDFC EMI ಮೇಲೆ 2,000 ರೂ. ರಿಯಾಯಿತಿ ಪಡೆಯಬಹುದು. ಐಸಿಐಸಿಐ ಕ್ರೆಡಿಟ್ ಕಾರ್ಡ್‌ಗಳು, ಬಿಒಬಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೂ 2,000 ರೂ. ಡಿಸ್ಕೌಂಟ್ ನಿಮ್ಮದಾಗುತ್ತದೆ.
ಒನ್‌ಪ್ಲಸ್ ನಾರ್ಡ್ CE 4 ಫೀಚರ್ಸ್‌ಗಳು
ನಾರ್ಡ್ ಸರಣಿಯ ಈ ಸ್ಮಾರ್ಟ್‌ಫೋನ್ ಹಳೆಯ ಒನ್‌ಪ್ಲಸ್ CE 3ಗೆ ಉತ್ತರಾಧಿಕಾರಿಯಾಗಿದೆ. ಇದು 6.7 ಇಂಚಿನ ಪೂರ್ಣ HD+ (1,080×2,412 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ಹೊಂದಿದೆ. ಜೊತೆಗೆ 394ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 93.40 ಪ್ರತಿಶತ ಸ್ಕ್ರೀನ್ ಅನುಪಾತ, 120Hz ವರೆಗೆ ರಿಫ್ರೆಶ್ ದರ, HDR10+ ಬೆಂಬಲವನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 7 Gen 3 SoC, ಜೊತೆಗೆ 8GB LPDDR4x RAM ಅನ್ನು ಹೊಂದಿದೆ. ಹ್ಯಾಂಡ್‌ಸೆಟ್ ಗೇಮಿಂಗ್‌ಗಾಗಿ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟರ್ ಒಳಗೊಂಡಿದೆ.
ಫೋಟೋಗಳು ಮತ್ತು ವಿಡಿಯೋಗಳಿಗಾಗಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50MP Sony LYT600 ಸಂವೇದಕ, 8MP Sony IMX355 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಒನ್‌ಪ್ಲಸ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. ಇದು ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ವಿಸ್ತರಿಸಬಹುದು.
ಒನ್‌ಪ್ಲಸ್ ನಾರ್ಡ್ CE 4 ಪ್ರೊಸೆಸರ್ ಏನು?
ಡ್ಯುಯಲ್ ಸಿಮ್‌ನ OnePlus Nord CE 4 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14ನಲ್ಲಿ OxygenOS 14 ಜೊತೆಗೆ ರನ್ ಆಗುತ್ತದೆ. ಮತ್ತು ಇದು Qualcomm Snapdragon 7 Gen 3 SoC ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಪ್ರೊಸೆಸರ್ ಅನ್ನು Adreno 720 GPU ನೊಂದಿಗೆ ಜೋಡಿಸಲಾಗಿದೆ. ಮತ್ತು 8GB LDDR4X RAM, 256GB UFS 3.1 ಸಂಗ್ರಹಣೆಯನ್ನು ಹೊಂದಿದೆ. ಇದು IP54 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದೆ.
29 ನಿಮಿಷಗಳಲ್ಲಿ 100% ಚಾರ್ಜಿಂಗ್
ಒನ್‌ಪ್ಲಸ್ ನಾರ್ಡ್ CE 4 ಮೊಬೈಲ್ 100W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿ ಬ್ಯಾಕಪ್ ಹೊಂದಿದೆ. 15 ನಿಮಿಷಗಳ ಚಾರ್ಜಿಂಗ್ ಸಮಯವು ಒಂದು ದಿನದ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಕೇವಲ 29 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತ ದಷ್ಟು ಚಾರ್ಜಿಂಗ್ ಪೂರ್ಣಗೊಳಿಸುತ್ತದೆ. ಕಂಪನಿಯ ಇತ್ತೀಚಿನ ಬ್ಯಾಟರಿ ಹೆಲ್ತ್ ಇಂಜಿನ್ ತಂತ್ರಜ್ಞಾನವು ಸಾಧನಕ್ಕೆ ನಾಲ್ಕು ವರ್ಷಗಳ ಬ್ಯಾಟರಿ ಚಾರ್ಜಿಂಗ್ ಸೈಕಲ್‌ಗಳನ್ನು ಒದಗಿಸುತ್ತದೆ.
ಒನ್‌ಪ್ಲಸ್ ನಾರ್ಡ್ CE 4 ಕನೆಕ್ಟಿವಿಟಿಗಳು
ಇನ್ನೂ, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.4, GPS, GLONASS, BDS, ಗೆಲಿಲಿಯೋ, QZSS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹ್ಯಾಂಡ್ಸೆಟ್ IP54-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ. ಒಟ್ಟಾರೆ, ಒನ್‌ಪ್ಲಸ್ ಕಂಪನಿ ಅತ್ಯಾಕರ್ಷಕ ಬೆಲೆ, ಅತ್ಯಾಧುನಿಕ ಫೀಚರ್ಸ್, ಹೆಚ್ಚು ಬ್ಯಾಟರಿ ಲೈಫ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಕೆಲವೊಮ್ಮೆ ಡಿಸ್ಕೌಂಟ್ ಕೂಡ ನೀಡುತ್ತದೆ.


Click it and Unblock the Notifications








