Home
ಮೊಬೈಲ್

ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ OnePlusನ ಈ ಫೋನ್!: ಬೆಲೆ ಹಾಗೂ ಫೀಚರ್ಸ್‌ ಡಿಟೇಲ್ಸ್ ಇಲ್ಲಿದೆ

ದಿ ವೇಟ್ ಈಸ್ ಓವರ್..! ಒನ್‌ಪ್ಲಸ್ ಮೊಬೈಲ್ ಪ್ರಿಯರು ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿದೆ. ಹೌದು, OnePlus Nord CE 4 Lite ಬಹುನಿರೀಕ್ಷಿತ ಸ್ಮಾರ್ಟ್‌ಫೋನ್. ಈ OnePlus Nord CE 4 Lite ಸ್ಮಾರ್ಟ್‌ಫೋನ್ ನಾಳೆ (ಜೂನ್ 18) ಭಾರತದಲ್ಲಿ ಬಿಡುಗಡೆಯಾಗಲಿದೆ. ವಿಶೇಷವಾಗಿ 20 ಸಾವಿರ ರೂಪಾಯಿಗಳ ಬಜೆಟ್‌ನಲ್ಲಿ OnePlus ಫೋನ್‌ಗಾಗಿ ಹುಡುಕುತ್ತಿರುವ ಮೊಬೈಲ್‌ ಪ್ರಿಯರಿಗೆ ಈ ಮುಂಬರುವ ಸ್ಮಾರ್ಟ್‌ಫೋನ್‌ನ ಬಗ್ಗೆ ಕುತೂಲವಿದೆ. OnePlus Nord CE 4 Lite ಖರೀದಿಗೆ ಅದೆಷ್ಟೋ ಜನರು ಕಾದು ಕುಳಿತಿದ್ದಾರೆ. ಹಾಗಿದ್ರೆ, ಈ ಫೋನ್‌ನ ಬಿಡುಗಡೆಯ ವಿವರ ಮತ್ತು ಫೀಚರ್‌ಗಳ ಬಗ್ಗೆ ತಿಳಿಯೋಣ ಬನ್ನಿ.

OnePlus ಅಧಿಕೃತವಾಗಿ ತನ್ನ ಮುಂಬರುವ ಈ ಹೊಸ ಮೊಬೈಲ್ ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಈ ದಿನ, OnePlus Nord CE 4 Lite ಫೋನ್ ಅನ್ನು ಕಂಪನಿಯು ಅನಾವರಣಗೊಳಿಸುತ್ತಿದೆ. ಫೋನ್ ಲಾಂಚ್ ಕಾರ್ಯಕ್ರಮವು ಜೂನ್ 18 ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಈ ಫೋನ್‌ನ ಲಾಂಚ್‌ ಸಮಾರಂಭವನ್ನು ಶಾಪಿಂಗ್ ಸೈಟ್ Amazonನಲ್ಲಿ ಲೈವ್ ಮಾಡಲಾಗುವುದು.

ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ OnePlusನ ಈ ಫೋನ್!

OnePlus Nord CE 4 Lite ಬೆಲೆ ಎಷ್ಟು?

ಮುಂಬರುವ ಈ OnePlus Nord CE 4 Lite ಮಧ್ಯಮ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಲಿದೆ. ಈ OnePlus Nord CE 4 Lite ಫೋನ್ 20 ಸಾವಿರದೊಳಗೆ ಇರಲಿದೆ. ಮುಂಬರುವ ಫೋನ್‌ನ 8GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ನ ಬೆಲೆಯನ್ನು 18,999 ರೂ.ಗಳಲ್ಲಿ ಇರಿಸಬಹುದು. ಇನ್ನೂ, ಉನ್ನತ ಮಾದರಿಯ ಬೆಲೆ 22,999 ರೂ. ಎಂದು ಹೇಳಲಾಗುತ್ತಿದೆ.

OnePlus Nord CE 4 Lite ಫೀಚರ್ಸ್‌

ಡಿಸ್‌ಪ್ಲೇ: OnePlus Nord CE 4 Lite ಸ್ಮಾರ್ಟ್‌ಫೋನ್ ಅನ್ನು 6.67-ಇಂಚಿನ FHD+ ಡಿಸ್ಪ್ಲೇ ಜೊತೆಗೆ 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಈ ಫೋನ್‌ನ ಡಿಸ್ಲ್ಪೇ AMOLED ಪ್ಯಾನೆಲ್‌ನಿಂದ ಮಾಡಿದ ಪಂಚ್-ಹೋಲ್ ಶೈಲಿಯಾಗಿದೆ ಮತ್ತು 120Hz ರಿಫ್ರೆಶ್ ದರ ಮತ್ತು 1200nits ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. Nord CE 4 Lite ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಪ್ರೊಸೆಸರ್: ಈಗಾಗಲೇ ಈ ಮೊಬೈಲ್‌ನ ಫೀಚರ್‌ಗಳು ಲೀಕ್ ಆಗಿವೆ. ಇದರ ಪ್ರಕಾರ, OnePlus Nord CE 4 Lite ಫೋನ್ 4nm ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾದ Qualcomm Snapdragon 6 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಆಕ್ಟಾ-ಕೋರ್ ಪ್ರೊಸೆಸರ್ 2.2GHz ನಲ್ಲಿ ನಾಲ್ಕು ಕಾರ್ಟೆಕ್ಸ್-A78 ಕೋರ್‌ಗಳನ್ನು ಹೊಂದಿದೆ ಮತ್ತು 1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್-A55 ಕೋರ್‌ಗಳನ್ನು ಒಳಗೊಂಡಿದೆ.

OS: ಲೀಕ್‌ ಆಗಿರುವ ಮಾಹಿತಿಪ್ರಕಾರ, OnePlus Nord CE 4 Lite ಸ್ಮಾರ್ಟ್‌ಫೋನ್ ಅನ್ನು Android 14 ಮತ್ತು OxygenOS 14 ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಈ ಫೋನ್ 2 ವರ್ಷಗಳ Android ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಬರಲಿದೆ ಮತ್ತು Android 16ಗೆ ಸಿದ್ಧವಾಗಿದೆ.

ಸ್ಟೋರೇಜ್: OnePlus Nord CE 4 Lite 5G ಫೋನ್ ಅನ್ನು ಭಾರತದಲ್ಲಿ ಎರಡು ಸ್ಟೋರೇಜ್‌ ವೇರಿಯಂಟ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸ್ಟೋರೇಜ್‌ ವಿಷಯದಲ್ಲಿ, ಮುಂಬರುವ ಈ ಫೋನ್ Nord CE 4 ಫೋನ್‌ನಂತೆಯೇ ಇರಬಹುದು. ಈ ಮೊಬೈಲ್ 8GB RAM + 128GB ಸ್ಟೋರೇಜ್‌ ಮತ್ತು 8GB RAM + 256GB ಸ್ಟೋರೇಜ್‌ ಅನ್ನು ಹೊದಿರಲಿದೆ. ಈ ಫೋನ್ 1TB ಮೆಮೊರಿ ಕಾರ್ಡ್‌ಗೆ ಅವಕಾಶ ಕಲ್ಪಿಸುತ್ತದೆ.

ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ OnePlusನ ಈ ಫೋನ್!

ಕ್ಯಾಮೆರಾ: ಫೋಟೋಗ್ರಫಿಗಾಗಿ ಮುಂಬರುವ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮಾಹಿತಿ ಪ್ರಕಾರ, ಈ ಫೋನ್‌ನ ಹಿಂಭಾಗದ ಫಲಕವು 50MP ಮುಖ್ಯ ಸಂವೇದಕವನ್ನು f/1.8 ಅಪರ್ಚರ್, FOV 77° ಮತ್ತು OIS ವೈಶಿಷ್ಟ್ಯದ ಬೆಂಬಲದೊಂದಿಗೆ ಬರಲಿದೆ. ಹಿಂದಿನ ಸೆಟಪ್ f/2.4 ದ್ಯುತಿರಂಧ್ರದೊಂದಿಗೆ 2MP ಆಳ ಸಂವೇದಕವನ್ನು ಹೊಂದಿದೆ. ಫ್ರಂಟ್‌ ಕ್ಯಾಮರಾವು, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16MP ಹೊಂದಿರಲಿದೆ.

ಬ್ಯಾಟರಿ: ಇನ್ನೂ ಈ ಫೋನ್‌ನ ಬ್ಯಾಟರಿ ಬ್ಯಾಕಪ್‌ ಬಗ್ಗೆ ಮಾತನಾಡುವುದಾದರೆ, OnePlus Nord CE 4 Lite 5G ಫೋನ್ 5,500mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ. 80W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯ ಬೆಂಬಲಿತವಾಗಿರಲಿದೆ.

ಒಟ್ಟಾರೆ, ಒನ್‌ಪ್ಲಸ್ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದೆ. ತನ್ನ ವಿಶಿಷ್ಟ ಹಾಗೂ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಆಗಾಗ ನೂತನ ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಈ ಫೋನ್‌ಗಳೆಲ್ಲವೂ ಗ್ರಾಹಕರ ಹಾಟ್‌ ಫೇವರಿಟ್‌ ಆಗಿವೆ. ಇದೀಗ, OnePlus Nord CE 4 Lite 5G ಸ್ಮಾರ್ಟ್‌ಫೋನ್ ಅನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸುತ್ತಿದೆ.

Best Mobiles in India

English summary
OnePlus will launch its much-awaited OnePlus Nord CE4 Lite smartphone Tomorrow. Now this phone has been spotted by Geekbench website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+