Home
ಮೊಬೈಲ್

ಜಬರ್ದಸ್ತ್ ಆಫರ್! ಸೋನಿ ಕ್ಯಾಮೆರಾ, ಬಿಗ್ ಬ್ಯಾಟರಿ.. 2000 ಡಿಸ್ಕೌಂಟ್.. ಕಡಿಮೆ ಬೆಲೆಗೆ OnePlus 5G ಫೋನ್

ಅಮೆಜಾನ್‌ ಒಂದಿಲ್ಲೊಂದು ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಮುಖ್ಯವಾಗಿ ಪ್ರಸಿದ್ಧ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತದೆ. ಅದರಂತೆ, ಮೊಬೈಲ್‌ ಪ್ರಿಯರ ನೆಚ್ಚಿನ ಈ ಒನ್‌ಪ್ಲಸ್‌ ಫೋನಿನ ಬೆಲೆಯನ್ನು ಕಡಿತ ಮಾಡಿದೆ. ಹೌದು, ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G (OnePlus Nord CE 4 Lite 5G) ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಸ್ಟೈಲಿಶ್‌ ಡಿಸೈನ್ ಜೊತೆಗೆ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನ ಹೊಸ ಬೆಲೆ, ಆಫರ್‌ ಮತ್ತು ವಿಶೇಷತೆಗಳನ್ನು ತಿಳಿಯು ಮುಂದೆ ಓದಿ.

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB + 256GB ಸ್ಟೋರೇಜ್‌, 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ ಈ ಫೋನಿನ ಖರೀದಿ ಮೇಲೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ನೀವು ಹೆಚ್ಚು ಹಣ ಉಳಿತಾಯ ಮಾಡಬಹುದು.

2000 ಅಗ್ಗ.. ಈ OnePlus 5G ಫೋನಿನ ಬೆಲೆ ಇಳಿಕೆ.. ಹೊಸ ಬೆಲೆ ನೋಡಿ

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಹೊಸ ಬೆಲೆ

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವು 19,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ಇದು ಅಮೆಜಾನ್‌ನಲ್ಲಿ ಶೇ.14 ರಷ್ಟು ರಿಯಾಯಿತಿ ಲಭ್ಯವಿದೆ. ನೀವು17,998 ರೂ.ಗೆ ಈ ಮೊಬೈಲ್ ಖರೀದಿಸಬಹುದು. ಆಯ್ದ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಪಾವತಿ ಮೇಲೆ ಹೆಚ್ಚುವರಿಯಾಗಿ 2,000 ರೂ. ಡಿಸ್ಕೌಂಟ್ ಸಿಗುತ್ತದೆ. ಇದರೊಂದಿಗೆ ಈ ಫೋನಿನ ಬೆಲೆ 15,998 ರೂ.ಗೆ ಇಳಿಕೆಯಾಗಲಿದೆ. ಅಮೆಜಾನ್ ಹೊರತಾಗಿ ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್‌ ಮೂಲಕವೂ ಈ ಫೋನ್ ಕೊಳ್ಳಬಹುದು.

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಫೀಚರ್ಸ್

ಡಿಸ್ಪ್ಲೇ ಮತ್ತು ಪ್ರೊಸೆಸರ್ ವಿವರ

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1080 × 2400 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.ಈ ಒನ್‌ಪ್ಲಸ್ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನನ್ನು ಆಂಡ್ರಾಯ್ಡ್ 14 ಆಧಾರಿತ OxygenOS 14.0 ನಲ್ಲಿ ಕೆಲಸ ಮಾಡುತ್ತದೆ.

2000 ಅಗ್ಗ.. ಈ OnePlus 5G ಫೋನಿನ ಬೆಲೆ ಇಳಿಕೆ.. ಹೊಸ ಬೆಲೆ ನೋಡಿ

ಕ್ಯಾಮೆರಾ ಮತ್ತು ಸ್ಟೋರೇಜ್‌

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ OIS ಮತ್ತು EIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಇದೆ. ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಜೊತೆಗೆ 8GB ವರ್ಚುವಲ್ RAM ಸಹ ಹೊಂದಿದೆ. ಈ ಫೋನಿನಲ್ಲಿ 256GB ಸ್ಟೋರೇಜ್ ಇದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮುಲಕ 2TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ 5W ರಿವರ್ಸ್ ಚಾರ್ಜಿಂಗ್ ಸಹ ಲಭ್ಯವಿದೆ.

Best Mobiles in India

English summary
OnePlus Nord CE4 Lite 5G price cut in india: check new price, offers, availability specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+