ಅಭಿಮಾನಿಗಳಿಗೆ ಒನ್‌ಪ್ಲಸ್‌ನಿಂದ ಭರ್ಜರಿ ಕೊಡುಗೆ

Written By:

ಒನ್ ಪ್ಲಸ್ ಅಭಿಮಾನಿಗಳು ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಇದ್ದಿರುವಂತೆ ಕಂಡುಬಂದಿದ್ದು ತನ್ನ ಇನ್ನೊಂದು ಹೊಸ ಡಿವೈಸ್‌ನೊಂದಿಗೆ ಅಭಿಮಾನಿಗಳ ಕಾತರವನ್ನು ಹೆಚ್ಚಿಸುವಲ್ಲಿ ಕಂಪೆನಿ ಕಂಡುಬರುತ್ತಿದೆ.

ಕಂಪೆನಿಯು ಭಾರತೀಯ ಮಾರುಕಟ್ಟೆಯನ್ನು ತನ್ನ ಅಧಿಕೃತ ಫಾರ್ಮ್ ಮೂಲಕ ಪ್ರವೇಶಿಸಲಿರುವ ಇದು ಯಾವುದೇ ಘೋಷಣೆಯನ್ನು ಇದುವರೆಗೆ ಮಾಡಿಲ್ಲ. ಆದರೆ ಒನ್ ಪ್ಲಸ್ ಭಾರತದಲ್ಲಿರುವ ತನ್ನ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆಯನ್ನು ನೀಡಲಿದೆ. ತನ್ನ ಹೊಸ ಫೋನ್ ಆದ ಒನ್‌ಪ್ಲಸ್ ಒನ್ ಸ್ಮಾರ್ಟ್‌ಫೋನ್‌ನೊಂದಿಗೆ ಇದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಇನ್ನೇನು ಸ್ವಲ್ಪ ದಿನಗಳು ಮಾತ್ರ.

ಶಯೋಮಿ ಫೋನ್‌ಗಳ ಬದ್ಧ ಸ್ಪರ್ಧಿ ಒನ್‌ಪ್ಲಸ್‌

ತಮ್ಮ ವೆಬ್ ಟ್ರಾಫಿಕ್‌ನಲ್ಲಿ ಎಂಟನೇ ಸ್ಥಾನವನ್ನು ಭಾರತಕ್ಕೆ ನೀಡಿರುವ ಈ ಚೀನಾದ ಕಂಪೆನಿ, ತನ್ನ ಒನ್‌ಪ್ಲಸ್ ಫೋನ್ ಅನ್ನು ಕಂಪೆನಿ ಭಾರತದಲ್ಲಿ ಯಾವಾಗ ಲಾಂಚ್ ಮಾಡಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಯುವ ಕಂಪೆನಿಯಾಗಿರುವ ಒನ್‌ಪ್ಲಸ್ ಭಾರತದಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸುವ ಹಂಬಲದಲ್ಲಿದೆ. ಒನ್ ಪ್ಲಸ್ ಒನ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಆದಷ್ಟು ಬೇಗನೇ ಬರಲಿದ್ದು, ಕೆಲವೊಂದು ಅತ್ಯುತ್ತಮ ವೈಶಿಷ್ಟ್ಯಗಳ ಮೂಲಕ ಬರಲಿದೆ.

ಒನ್‌ಪ್ಲಸ್ ಒನ್: ಪ್ರಮುಖ ವಿಶೇಷತೆ
5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ, 1920 ×1080 ಪಿಕ್ಸೆಲ್ ರೆಸಲ್ಯೂಶನ್
ಗೋರಿಲ್ಲಾ ಗ್ಲಾಸ್ 3
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801, 2.5GHz ಕ್ವಾಡ್ ಕೋರ್ CPU
3 ಜಿಬಿ RAM
CyanogenMod 11S ಓಎಸ್ ಆಧಾರಿತ ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಪ್ಲಾಟ್‌ಫಾರ್ಮ್
16/64ಜಿಬಿ ಆಂತರಿಕ ಮೆಮೊರಿ
13 ಮೆಗಾಪಿಕ್ಸೆಲ್ ಕ್ಯಾಮೆರಾ Sony's IMX214 ಸೆನ್ಸಾರ್, 6-ಎಲಿಮೆಂಟ್ ಲೆನ್ಸ್, f/2.0 ಅಪಾರ್ಚರ್, ಡ್ಯುಯಲ್ LED flash 4K ವೀಡಿಯೊ ದಾಖಲಿಸುವಿಕೆ
5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4G LTE / 3G, ವೈ-ಫೈ 802.11 ac (2.4/5 GHz), ವೈಫೈ ಡೈರೆಕ್ಟ್, ಬ್ಲ್ಯೂಟೂತ್ 4.1, GPS and NFC
3100 mAh ಬ್ಯಾಟರಿ

Read more about:
English summary
This article tells about that OnePlus One: Another Xiaomi Competitor to Launch in India Soon.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot