ನಾಳೆ OnePlus Open Apex Edition ಫಸ್ಟ್ ಸೇಲ್; ಭಾರೀ ಡಿಸ್ಕೌಂಟ್ ಲಭ್ಯ!
ನೀವು ಹೊಸ ಫೋಲ್ಡಬಲ್ ಫೋನ್ ಖರೀದಿಸುವ ಬಯಸಿದರೆ, ನಿಮಗಿದೆ ಒಳ್ಳೆಯ ಸುದ್ದಿ. ಅದರಲ್ಲೂ ಒನ್‌ಪ್ಲಸ್ ಕಂಪನಿಯ ದುಬಾರಿ ಸ್ಮಾರ್ಟ್‌ಫೋನ್ ಕೊಳ್ಳುವ ಮನಸ್ಸು ಇದ್ದರೆ, ಭರ್ಜರಿ ಡಿಸ್ಕೌಂಟ್ ಕೂಡ ಸಿಗುತ್ತದೆ. ಹೌದು, ಟೆಕ್ ದೈತ್ಯ ಒನ್‌ಪ್ಲಸ್ (OnePlus) ಕಂಪನಿಯು ಇತ್ತೀಚೆಗೆ ಒನ್‌ಪ್ಲಸ್ ಓಪನ್ ಅಪೆಕ್ಸ್ ಎಡಿಷನ್ (OnePlus Open Apex Edition) ಫೋಲ್ಡಬಲ್ ಫೋನನ್ನು ಪರಿಚಯಿಸಿದೆ. ಅಂದಹಾಗೆ, ನಾಳೆಯಿಂದ (ಆಗಸ್ಟ್ 10) ಈ ಫೋನಿನ ಸೇಲ್ ಶುರುವಾಗಲಿದೆ. ಮೊದಲ ದಿನವೇ ಬರೋಬ್ಬರಿ 20,000 ಡಿಸ್ಕೌಂಟ್ ನೀಡಲಾಗುತ್ತಿದೆ.
ಹೌದು, ಒನ್‌ಪ್ಲಸ್ ಓಪನ್ ಫೋನಿನ ಲಾಂಚ್ ಅಂಗವಾಗಿ ಕಂಪನಿಯು ಹಲವು ಆಫರ್‌ಗಳನ್ನು ಘೋಷಿಸಿದೆ. ಈ ಫೋನ್ 7.82 ಇಂಚಿನ AMOLED ಡಿಸ್ಲ್ಪೇ ಮತ್ತು 6.31 ಇಂಚಿನ AMOLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. Qualcomm Snapdragon 8 Gen 2 SoC ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಈ ಫೋನ್ 4,805mAh ಬ್ಯಾಟರಿ ಮತ್ತು 67W ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಈ ಫೋನಿನ ಬೆಲೆ ಮತ್ತು ಇನ್ನುಳಿದ ಫೀಚರ್ಸ್ ತಿಳಿಯೋಣ ಬನ್ನಿ.

ಒನ್‌ಪ್ಲಸ್ ಓಪನ್ ಫೋನಿನ ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್ ಓಪನ್ ಫೋನ್ 16GB RAM ಮತ್ತು 1TB ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಇದರ ಬೆಲೆ 1,49,999 ರೂ. ಇದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೆ 20,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಇದಲ್ಲದೆ, RCC ಗ್ರಾಹಕರು 5,000 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಲು ಅವಕಾಶವಿದೆ. ಇದಲ್ಲದೆ, ಹಳೆಯ ಫೋನ್ ಎಕ್ಸ್‌ಚೇಂಜ್ ಮೇಲೆ ವಿಶೇಷ ಆಫರ್ ಮತ್ತು ಬೋನಸ್ ಕೂಡ ಲಭ್ಯವಿರಲಿದೆ.
ಕಂಪನಿಯು ಈ ಫೋನಿನ ಖರೀದಿಯೊಂದಿಗೆ ಉಚಿತವಾಗಿ 3 ತಿಂಗಳ Microsoft 365 ಚಂದಾದಾರಿಕೆ ಯೋಜನೆಯನ್ನು ಘೋಷಿಸಿದೆ. ಜಿಯೋದ 699 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ 15,000 ರೂ.ಗಳ ಲಾಭವನ್ನು ಪಡೆಯಬಹುದು. ಈ ಫೋನ್ ನಾಳೆಯಿಂದ (ಆಗಸ್ಟ್ 10) ಕಂಪನಿಯ ವೆಬ್‌ಸೈಟ್, ಅಮೆಜಾನ್ ಮತ್ತು ದೇಶಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಕಡುಗೆಂಪು ಕೆಂಪು ಬಣ್ಣದಲ್ಲಿ ಖರೀದಿಗೆ ಲಭ್ಯವಿರುತ್ತದೆ.
OnePlus Open Apex Edition ಫೀಚರ್ಸ್
ಒನ್‌ಪ್ಲಸ್ ಓಪನ್ ಸ್ಮಾರ್ಟ್ ಫೋನ್ 7.82 ಇಂಚಿನ 2K AMOLED ಪ್ರಾಥಮಿಕ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 2,800 nits ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಇದು ಉತ್ತಮ ಬಾಳಿಕೆಗಾಗಿ ಅಲ್ಟ್ರಾ ಥಿನ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಫೋನ್ 6.31 ಇಂಚಿನ 2K AMOLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು ಸೆರಾಮಿಕ್ ಗಾರ್ಡ್ ರಕ್ಷಣೆಯನ್ನು ಪಡೆದಿದೆ.
OnePlus Open Apex Edition ಫೋನ್ Adreno 740 GPU ಜೊತೆಗೆ Qualcomm Snapdragon 8 Gen 2 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನಿನಲ್ಲಿ 16GB RAM ಮತ್ತು 1TB ಸ್ಟೋರೇಜ್ ಪಡೆಯಬಹುದು. ಇದು Android 14 ಅನ್ನು ಆಧರಿಸಿ OxygenOS 14.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಮೂರು ಪ್ರಮುಖ Android OS ನವೀಕರಣಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯುತ್ತದೆ. ಈ ಫೋನಿನಲ್ಲಿ ವಿಶೇಷ ವಿಐಪಿ ಮೋಡ್ ನೀಡಲಾಗಿದೆ.
ಟ್ರಿಪಲ್ ಕ್ಯಾಮೆರಾ, 4,805mAh ಬ್ಯಾಟರಿ
ಒನ್‌ಪ್ಲಸ್ ಓಪನ್ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯೊಂದಿಗೆ ಬರುತ್ತದೆ. ಇದರಲ್ಲಿ 48MP ಮುಖ್ಯ ಕ್ಯಾಮೆರಾ, 64MP ಟೆಲಿಫೋಟೋ ಕ್ಯಾಮೆರಾ ಮತ್ತು 48MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಕಾಣಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 20MP ಪ್ರೈಮರಿ ಸ್ನ್ಯಾಪರ್ ಮತ್ತು 32MP ಸೆಕೆಂಡರಿ ಶೂಟರ್ ಇದೆ. ಈ ಫೋನ್ 67W ಚಾರ್ಜಿಂಗ್ ಬೆಂಬಲದೊಂದಿಗೆ 4,805mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ನೀವು ಬಾಕ್ಸ್‌ನಲ್ಲಿ 80W SuperVOOC ಪವರ್ ಅಡಾಪ್ಟರ್ ಅನ್ನು ಪಡೆಯಬಹುದು.


Click it and Unblock the Notifications








