20,000 ಡಿಸ್ಕೌಂಟ್! ಆ.10ಕ್ಕೆ OnePlusನ ದುಬಾರಿ ಫೋನ್ ಸೇಲ್; ಬೆಲೆ ನೋಡಿ
ಒನ್‌ಪ್ಲಸ್ ಪ್ರಿಯರಿಗೆ ಸರ್ಪ್ರೈಸ್ ಗಿಫ್ಟ್ ಇದೆ. ಸದ್ದಿಲ್ಲದ್ದೆ ಹೊಸ ದುಬಾರಿ ಫೋನ್ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಹೌದು, ಟೆಕ್ ದೈತ್ಯ ಒನ್‌ಪ್ಲಸ್ (OnePlus) ಕಂಪನಿಯು ತನ್ನ ಮಡಚಬಹುದಾದ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಓಪನ್‌ನ ವಿಶೇಷ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಒನ್‌ಪ್ಲಸ್ ಓಪನ್ ಅಪೆಕ್ಸ್ ಎಡಿಷನ್ (OnePlus Open Apex Edition) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ, ಈ ಫೋನ್ ಆಗಸ್ಟ್ 10 ರಿಂದ ಮಾರಾಟ ಪ್ರಾರಂಭಿಸಲಿದೆ.
ಕಂಪನಿಯು ಈ ಫೋಲ್ಡಬಲ್ ಫೋನನ್ನು 1TB ಸ್ಟೋರೇಜ್, ಎಐ (AI) ಇಮೇಜ್ ಎಡಿಟಿಂಗ್ ಮತ್ತು ಇನ್ನಿತರ ವಿಶೇಷತೆಗಳೊಂದಿಗೆ ಪರಿಚಯಿಸಿದೆ. ಈ ಫೋನ್‌ನಲ್ಲಿ ಹೊಸ ತಂತ್ರಜ್ಞಾನ ಎಐ (AI) ಎರೇಸರ್ ಮತ್ತು ಎಐ ಸ್ಮಾರ್ಟ್ ಕಟೌಟ್ ಅನ್ನು ಬಳಸಿದೆ. ಅಂದರೆ, ಫೋನ್ ಸ್ವಯಂಚಾಲಿತವಾಗಿ ಕೆಲವು ಕೆಲಸವನ್ನು ಮಾಡಬಹುದು. ಉದಾಹರಣೆಗೆ, ಫೋಟೋದಿಂದ ಏನನ್ನಾದರೂ ಅಳಿಸಿ ಹಾಕುವುದು ಅಥವಾ ಏನನ್ನಾದರೂ ಬೇರ್ಪಡಿಸುತ್ತದೆ. ಬನ್ನಿ ಈ ಫೋನಿನ ಬೆಲೆ, ಆಫರ್ ಮತ್ತು ಇನ್ನಿತರ ಫೀಚರ್ಸ್ ತಿಳಿಯೋಣ.

ಹೊಸ ಒನ್‌ಪ್ಲಸ್ ಫೋನಿನ ಬೆಲೆ ಮತ್ತು ಆಫರ್
ಒನ್‌ಪ್ಲಸ್ ಓಪನ್ ಅಪೆಕ್ಸ್ ಆವೃತ್ತಿಯು ಒಂದೇ 16GB RAM ಮತ್ತು 1TB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 1,49,999 ರೂ.ಇದೆ. ಈ ಫೋನ್ ಆಗಸ್ಟ್ 10 ರಿಂದ ಕಂಪನಿಯ ವೆಬ್‌ಸೈಟ್, ಅಮೆಜಾನ್ ಮತ್ತು ದೇಶಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಕಡುಗೆಂಪು ಕೆಂಪು ಬಣ್ಣದಲ್ಲಿ ಖರೀದಿಗೆ ಲಭ್ಯವಿರುತ್ತದೆ. ICICI ಬ್ಯಾಂಕ್ ಕಾರ್ಡ್‌ದಾರರು ಈ ಫೋನಿನ ಖರೀದಿಯ ಮೇಲೆ 20,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
ಇದಲ್ಲದೆ, RCC ಗ್ರಾಹಕರು 5,000 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಜೊತೆಗೆ, ಹಳೆಯ ಫೋನಿನ ವ್ಯಾಪಾರದ ಮೇಲೆ ಎಕ್ಸ್‌ಚೇಂಜ್ ಆಫರ್ ಮತ್ತು ಬೋನಸ್ ಸಹ ಲಭ್ಯವಿದೆ. ಕಂಪನಿಯು ಅಪೆಕ್ಸ್ ಆವೃತ್ತಿಯ ಖರೀದಿಯೊಂದಿಗೆ ಉಚಿತ 3 ತಿಂಗಳ Microsoft 365 ಚಂದಾದಾರಿಕೆ ಯೋಜನೆಯನ್ನು ಸಹ ನೀಡುತ್ತದೆ. ಜಿಯೋದ 699 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ 15,000 ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು.
ಒನ್‌ಪ್ಲಸ್ ಓಪನ್ ಫೋನಿನ ಫೀಚರ್ಸ್
ಡಿಸ್ಲ್ಪೇ: ಒನ್‌ಪ್ಲಸ್ ಓಪನ್ ಫೋನ್ 7.82 ಇಂಚಿನ 2K AMOLED ಪ್ರಾಥಮಿಕ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 2,800 nits ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಇದು ಉತ್ತಮ ಬಾಳಿಕೆಗಾಗಿ ಅಲ್ಟ್ರಾ ಥಿನ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಇದು 6.31 ಇಂಚಿನ 2K AMOLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು ಸೆರಾಮಿಕ್ ಗಾರ್ಡ್ ರಕ್ಷಣೆಯನ್ನು ಪಡೆದಿದೆ.
ಪ್ರೊಸೆಸರ್: ಈ ಒನ್‌ಪ್ಲಸ್ ಫೋಲ್ಡಬಲ್ ಫೋನ್ Adreno 740 GPU ನೊಂದಿಗೆ Qualcomm Snapdragon 8 Gen 2 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ನೀವು 16GB RAM ಮತ್ತು 1TB ಸ್ಟೋರೇಜ್ ಪಡೆಯಬಹುದು.

ಸಾಫ್ಟ್‌ವೇರ್: ಇದು Android 14 ಅನ್ನು ಆಧರಿಸಿ OxygenOS 14.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಮೂರು ಪ್ರಮುಖ Android OS ನವೀಕರಣಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯುತ್ತದೆ. ಈ ಫೋನಿನಲ್ಲಿ ವಿಶೇಷ ವಿಐಪಿ ಮೋಡ್ ನೀಡಲಾಗಿದೆ.
ಕ್ಯಾಮೆರಾ: ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 48MP ಮುಖ್ಯ ಕ್ಯಾಮೆರಾ, 64MP ಟೆಲಿಫೋಟೋ ಕ್ಯಾಮೆರಾ ಮತ್ತು 48MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಇದು 20MP ಪ್ರೈಮರಿ ಸ್ನ್ಯಾಪರ್ ಮತ್ತು 32MP ಸೆಕೆಂಡರಿ ಶೂಟರ್ ಅನ್ನು ಹೊಂದಿದೆ.
ಬ್ಯಾಟರಿ: ಈ ಫೋನ್ 4,805mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 67W ಚಾರ್ಜಿಂಗ್‌ಗೆ ಬೆಂಬಲವಿದೆ. ನೀವು ಬಾಕ್ಸ್‌ನಲ್ಲಿ 80W SuperVOOC ಪವರ್ ಅಡಾಪ್ಟರ್ ಅನ್ನು ಪಡೆಯಬಹುದು.


Click it and Unblock the Notifications








