Home
ಮೊಬೈಲ್

OnePlus ಫೋನ್ ಬಿಡುಗಡೆ ದಿನಾಂಕ ಬಹಿರಂಗ.. ಅತ್ಯಂತ ದುಬಾರಿ ಫೋನ್! ಬೆಲೆ ನೋಡಿ

ಒನ್‌ಪ್ಲಸ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಒನ್‌ಪ್ಲಸ್ (OnePlus) ಕಂಪನಿಯ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಯಾವುದು? ಎಂಬ ಪ್ರಶ್ನೆಗೆ ಉತ್ತರ ಸಹ ಇಲ್ಲಿದೆ. ಬಹು ದಿನಗಳ ನಿಮ್ಮ ಈ ಪ್ರಶ್ನೆಗೆ ಇದೇ ಆಗಸ್ಟ್ 7 ರಂದು ಉತ್ತರ ಸಿಗಲಿದೆ. ಹೌದು, ಒನ್‌ಪ್ಲಸ್‌ನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಆಗಸ್ಟ್ 7 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್ ಓಪನ್ ಅಪೆಕ್ಸ್ ಎಡಿಷನ್ (OnePlus Open Apex Edition) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಭಾರತ ಮಾತ್ರವಲ್ಲದೇ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಹೌದು, ಒನ್‌ಪ್ಲಸ್ ಓಪನ್ ಅಪೆಕ್ಸ್ ಆವೃತ್ತಿಯ ಸ್ಮಾರ್ಟ್‌ಫೋನ್ ಆಗಸ್ಟ್ 7 ರಂದು ಬಿಡುಗಡೆಯಾಗಲಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಈ ವಿಶೇಷ ಆವೃತ್ತಿಯ ಸ್ಮಾರ್ಟ್‌ಫೋನ್ ಪ್ರೀಮಿಯಂ ವೆಗಾನ್ ಲೆದರ್ ಫಿನಿಶ್ ಮತ್ತು ಕ್ರಿಮ್ಸನ್ ರೆಡ್ ಬಣ್ಣವನ್ನು ಹೊಂದಿದೆ. ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಇಮೇಜ್ ಎಡಿಟಿಂಗ್ ಟೂಲ್ ಫೀಚರ್ ಸೇರಿದಂತೆ ಉತ್ತಮ ಸ್ಟೋರೇಜ್ ಮತ್ತು ಭದ್ರತಾ ಫೀಚರ್ಸ್‌ಗಳೊಂದಿಗೆ ಈ ಫೋನ್ ಲಾಂಚ್ ಆಗಲಿದೆ.

OnePlus ಫೋನ್ ಬಿಡುಗಡೆ ದಿನಾಂಕ ಬಹಿರಂಗ.. ಅತ್ಯಂತ ದುಬಾರಿ ಫೋನ್! ಬೆಲೆ ನೋಡಿ

ವಿಕ್ಟರ್ ರೆಡ್ ಆವೃತ್ತಿಯ 60 ವರ್ಷಗಳ ಸ್ಮರಣಾರ್ಥವಾಗಿ ಲಾಂಚ್

ಒನ್‌ಪ್ಲಸ್ ಓಪನ್ ಅಪೆಕ್ಸ್ ಆವೃತ್ತಿಯು ಕಳೆದ ವರ್ಷ ಬಿಡುಗಡೆಯಾದ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನ ಅಪ್‌ಗ್ರೇಡ್ ಆವೃತ್ತಿಯಾಗಿರಲಿದೆ. ಒನ್‌ಪ್ಲಸ್ ಓಪನ್ ಪೋನನ್ನು ಭಾರತದಲ್ಲಿ ಅಕ್ಟೋಬರ್‌ (2023) ತಿಂಗಳಲ್ಲಿ 16GB RAM ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಲಾಗಿತ್ತು. ವಿಕ್ಟರ್ ರೆಡ್ ಆವೃತ್ತಿಯ 60 ವರ್ಷಗಳ ಗೌರವಾರ್ಥವಾಗಿ ಹ್ಯಾಸೆಲ್‌ಬ್ಲಾಡ್ 503CW ಈ ವಿಶೇಷ ಆವೃತ್ತಿಯನ್ನು ಪ್ರಾರಂಭಿಸುತ್ತಿದೆ ಎಂದು ಕಂಪನಿ ತಿಳಿಸಿದೆ. ಫೋನಿನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿರುವ ಸಾಧ್ಯತೆಯಿದೆ.

ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್! ಬೆಲೆ ಎಷ್ಟು?

ಅಪೆಕ್ಸ್ ಆವೃತ್ತಿಯ ಸ್ಮಾರ್ಟ್‌ಫೋನಿನ ಇತರ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಆವೃತ್ತಿಯು ಆಂಡ್ರಾಯ್ಡ್ 14 ಆಧಾರಿತ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮೂರು OS ನವೀಕರಣಗಳನ್ನು ಪಡೆಯುತ್ತದೆ. ಈ ಫೋನ್ ಸಿಂಗಲ್ ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ ಎನ್ನಲಾಗಿದೆ. ಈ ವಿಶೇಷ ಆವೃತ್ತಿಯ ಬೆಲೆ 1,39,999 ರೂ. ಆಗಿರುವ ಸಾಧ್ಯತೆಯಿದೆ. ಆದರೆ, ಈವರೆಗೆ ಕಂಪನಿಯು ಈ ಫೋನಿನ ಫೀಚರ್ಸ್‌ ಮತ್ತು ಬೆಲೆ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ.

ಒನ್‌ಪ್ಲಸ್ ಓಪನ್ ಫೋನಿನ ನೀರಿಕ್ಷಿತ ಫೀಚರ್ಸ್

ಡಿಸ್ಪ್ಲೇ: ಲಭ್ಯವಾಗಿರುವ ಮಾಹಿತಿ ಪ್ರಕಾರ, ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ 7.82 ಇಂಚಿನ Flexi Fluid AMOLED ಮುಖ್ಯ ಡಿಸ್ಲ್ಪೇಯನ್ನು ಹೊಂದಿರಲಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 2800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ಇದು 2k ರೆಸಲ್ಯೂಶನ್, 431ppi ಜೊತೆಗೆ 6.31 ಇಂಚಿನ ಕವರ್ ಡಿಸ್ಪ್ಲೇ ಹೊಂದಿರಲಿದೆ.

ಪ್ರೊಸೆಸರ್ ಮತ್ತು ಸ್ಟೋರೇಜ್‌: ಈ ಒನ್‌ಪ್ಲಸ್ ಫೋಲ್ಡಬಲ್ ಫೋನ್ Qualcomm Snapdragon 8 Gen 2 ಪ್ರೊಸೆಸರ್‌ ಹೊಂದಿರಲಿದೆ. ಇದು OxygenOS 13.2 ಆಧಾರಿತ Android 13 ಅನ್ನು ರನ್ ಮಾಡುತ್ತದೆ. ಈ ಒನ್‌ಪ್ಲಸ್ ಓಪನ್ ಫೋನನ್ನು 16 GB RAM ಮತ್ತು 512 GB ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದು 16 GB RAM ಮತ್ತು 1 TB ಸ್ಟೋರೇಜ್‌ನೊಂದಿಗೆ ಬರುವ ಸಾಧ್ಯತೆಯಿದೆ.

OnePlus ಫೋನ್ ಬಿಡುಗಡೆ ದಿನಾಂಕ ಬಹಿರಂಗ.. ಅತ್ಯಂತ ದುಬಾರಿ ಫೋನ್! ಬೆಲೆ ನೋಡಿ

ಕ್ಯಾಮೆರಾ: ಈ ಒನ್‌ಪ್ಲಸ್ ಫೋಲ್ಡಬಲ್ ಸ್ಮಾರ್ಟ್‌ಫೋನ್ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಫೀಚರ್‌ ಹೊಂದಿರಲಿದೆ. CMOS ಸಂವೇದಕ, 48MP Sony LYT T808 ಮುಖ್ಯ ಕ್ಯಾಮೆರಾ, 64MP ಟೆಲಿಫೋಟೋ ಕ್ಯಾಮೆರಾ, 48MP ಅಲ್ಟ್ರಾ ವೈಡ್ ಕ್ಯಾಮೆರಾಗಳೊಂದಿಗೆ ಬರಲಿದೆ. 4K ಗುಣಮಟ್ಟದ ವಿಡಿಯೋಗಳನ್ನು 60fps ನಲ್ಲಿ ರೆಕಾರ್ಡ್ ಮಾಡಬಹುದು. ಸೆಲ್ಫಿಗಾಗಿ 20MP ಮತ್ತು 32MP ಫ್ರಂಟ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌: ಒನ್‌ಪ್ಲಸ್ ಓಪನ್ ಫೋನನ್ನು 4,805mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 67W SUPERVOOC ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಕೇವಲ 42 ನಿಮಿಷಗಳಲ್ಲಿ 1 ರಿಂದ 100 ರಷ್ಟು ಚಾರ್ಜಿಂಗ್‌ ಪೂರ್ಣಗೊಳಿಸಬಹುದು ಎಂದು ಕಂಪನಿ ಹೇಳಿದೆ.

Best Mobiles in India

English summary
OnePlus Open Apex Edition in Crimson Shadow Color to Launch Globally on August 7: know the all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+