ಒನ್‌ಪ್ಲಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ!!

|

ಆಪಲ್ ಕಂಪೆನಿ ನಂತರ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ 'ಒನ್‌ಪ್ಲಸ್' ಕಂಪೆನಿ ಭಾರತದಲ್ಲಿ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಕೆಲವೇ ವರ್ಷಗಳಲ್ಲಿ ದೇಶದ ಪ್ರೀಮಿಯಮ್ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಒನ್‌ಪ್ಲಸ್ ಇದೀಗ ದೇಶದ ಎಲೆಕ್ಟ್ರಾನಿಕ್ ದಿಗ್ಗಜ 'ರಿಲಾಯನ್ಸ್ ಡಿಜಿಟಲ್' ಜೊತೆಗೆ ಕೈಜೋಡಿಸಿದೆ.

ದೇಶದಾದ್ಯಂತ ಮಳಿಗೆಗಳನ್ನು ಹೊಂದಿರುವ ಚಿಲ್ಲರೆ ದಿಗ್ಗಜ ಕಂಪೆನಿ 'ರಿಲಾಯನ್ಸ್ ಡಿಜಿಟಲ್' ಜೊತೆ ಕೈಜೋಡಿಸಿರುವ ಒನ್‌ಪ್ಲಸ್ ಈ ಮೂಲಕ ದೇಶದಲ್ಲಿ ಹೆಚ್ಚು ಜನರನ್ನು ತಲುಪಲು ಮುಂದಾಗಿದೆ. ಈ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಒಂದೇ ದರದಲ್ಲಿ ರಿಲಯನ್ಸ್ ಡಿಜಿಟಲ್ ಅಂಗಡಿಗಳಲ್ಲಿಯೇ ದೊರೆಯಲಿವೆ ಎಂದು ಕಂಪೆನಿ ತಿಳಿಸಿದೆ.

ಒನ್‌ಪ್ಲಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ!!

ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಮಾತ್ರ ಆಫ್‌ಲೈನಿನಲ್ಲಿ ಖರೀದಿಸಲು ಲಭ್ಯವಿದ್ದ ಒನ್‌ಪ್ಲಸ್ ಸ್ಮಾರ್ಟ್‌ಪೋನ್‌ಗಳನ್ನು ಗ್ರಾಹಕರೀಗ ಸಣ್ಣ ಸಗರಗಳಲ್ಲಿಯೂ ಖರೀದಿಸಬಹುದಾಗಿದೆ. ಜೊತೆಗೆ ರಿಲಾಯನ್ಸ್ ಡಿಜಿಟಲ್ ಘೋಷಿಸುವ ಪ್ರಮೋಷನಲ್ ಆಫರ್‌ಗಳು ಸಹ ಒನ್‌ಪ್ಲಸ್ ಗ್ರಾಹಕರಿಗೆ ಸಿಗಲಿವೆ.

ಹೆಚ್ಚು ಜನರನ್ನು ತಲುಪುವ ಗುರಿ!

ಹೆಚ್ಚು ಜನರನ್ನು ತಲುಪುವ ಗುರಿ!

ನಗರ ಪ್ರದೇಶಗಳನ್ನು ಹೆಚ್ಚು ತಲುಪಿರುವ ಒನ್‌ಪ್ಲಸ್ ಕಂಪೆನಿ ಈಗ ಸಣ್ಣ ಸಗರಗಳ ಜೊತೆ ಗ್ರಾಮೀಣ ಪ್ರದೇಶಗಳನ್ನು ಸಹ ತಲುಪುವ ಗುರಿಯನ್ನು ಹಾಕಿಕೊಂಡಿದೆ. ಸಣ್ಣ ಸಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆನ್‌ಲೈನ್ ಹೆಚ್ಚು ಪ್ರಚಲಿತವಲ್ಲದಿರುವುದರಿಂದ 'ರಿಲಾಯನ್ಸ್ ಡಿಜಿಟಲ್' ಮೂಲಕ ಜನರನ್ನು ತಲುಪಲು ಮುಂದಾಗಿದೆ. ಇದರಿಂದ ಸಣ್ಣ ನಗರಗಳ ಜನರೂ ಕೂಡ ಒನ್‌ಪ್ಲಸ್ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ಸಾಧ್ಯ ಎಂದು ಒನ್‌ಪ್ಲಸ್ ಕಂಪೆನಿಯ ಯೋಜನೆ.

ಕ್ರೋಮಾದಲ್ಲಿಯೂ  ಒನ್‌ಪ್ಲಸ್!

ಕ್ರೋಮಾದಲ್ಲಿಯೂ ಒನ್‌ಪ್ಲಸ್!

ಕೇವಲ ಆನ್‌ಲೈನ್ ಬ್ರ್ಯಾಂಡ್ ಆಗಿ ಉಳಿದಿದ್ದ ಒನ್‌ಪ್ಲಸ್ ಕಂಪೆನಿ ಆಫ್‌ಲೈನ್ ಮಾರುಕಟ್ಟೆಯನ್ನು ಬಿಡಲು ಸಾಧ್ಯವಿಲ್ಲ. ರಿಲಾಯನ್ಸ್ ಡಿಜಿಟಲ್' ಮಾತ್ರವಲ್ಲದೆ, ದೇಶದಾಧ್ಯಂತ 110 ಸ್ಟೋರ್‌ಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಮಾರಾಟಗಾರ ಸಂಸ್ಥೆ ಕ್ರೋಮಾ ಸ್ಟೋರ್‌ಗಳಲ್ಲಿಯೂ ಒನ್‌ಪ್ಲಸ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದಾಗಿದೆ. ಇದರಿಂದ ಮನೆಬಾಗಿಲಿನಲ್ಲಿಯೇ ಇನ್ನು ಒನ್‌ಪ್ಲಸ್ ಸ್ಮಾರ್ಟ್‌ಪೋನ್‌ಗಳು ಲಭ್ಯವಾಗಲಿವೆ.

ಎಲ್ಲೆಲ್ಲಿ ಲಭ್ಯ ಒನ್‌ಪ್ಲಸ್ ಫೋನುಗಳು?

ಎಲ್ಲೆಲ್ಲಿ ಲಭ್ಯ ಒನ್‌ಪ್ಲಸ್ ಫೋನುಗಳು?

ಒನ್‌ಪ್ಲಸ್ ಕಂಪೆನಿಯ ಆಫ್‌ಲೈನ್ ಮಾರುಕಟ್ಟೆ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಒನ್‌ಪ್ಲಸ್ 'ಎಕ್ಸ್‌ಪೀರಿಯನ್ಸ್ ಸ್ಟೋರ್' ಯಶಸ್ಸು ಈಗ ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾ ಪಾಲುದಾರಿಕೆಗಳಿಗೆ ಸಹಾಯಕವಾಗಿದೆ. ಎರಡು ಕಡೆ ಮಾತ್ರ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳನ್ನು ಹೊಂದಿದ್ದ ಬೆಂಗಳೂರಿನಲ್ಲಿ ಇನ್ಮುಂದೆ ಹತ್ತಾರು ಮಳಿಗೆಗಳು ಕಾಣಿಸಿಕೊಳ್ಳಲಿವೆ. ಇದಲ್ಲದೆ, ಮಂಗಳೂರು, ಮೈಸೂರು ಹಾಗೂ ಹುಬ್ಬಳಿಯಲ್ಲಿಯೂ ಒನ್‌ಪ್ಲಸ್ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಬಹುದು.

ಯಾವಾಗಿನಿಂದ ಆರಂಭ?

ಯಾವಾಗಿನಿಂದ ಆರಂಭ?

ಅಕ್ಟೋಬರ್ 29 ರಂದು ಒನ್‌ಪ್ಲಸ್ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಭವಿಷ್ಯದ 'ಸ್ಕ್ರೀನ್ ಅನ್ಲಾಕ್' ತಂತ್ರಜ್ಞಾನ ಸೇರಿದಂತೆ ಹತ್ತಾರು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಬಿಡುಗಡೆ 20 ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ನೇರ ಪ್ರಸಾರವಾಗುತ್ತದೆ. ಅಂದರೆ, ಒನ್‌ಪ್ಲಸ್ 6T ಮಾರಾಟಕ್ಕೆ ಬಂದ ನಂತರ 'ರಿಲಾಯನ್ಸ್ ಡಿಜಿಟಲ್' ಅಂಗಡಿಗಳಲ್ಲಿಯೇ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ಕೇವಲ 5 ದಿನಗಳು ಮಾತ್ರ

ಕೇವಲ 5 ದಿನಗಳು ಮಾತ್ರ

ಬಿಡುಗಡೆಗೂ ಮುನ್ನವೇ ಅಮೆಜಾನ್‌ನಲ್ಲಿ 400 ಕೋಟಿ ರೂ. ಮೊತ್ತಕ್ಕೂ ಹೆಚ್ಚು ಬೆಲೆಯ ಪ್ರೀ ಬುಕ್ ಆಗಿರುವ ಸ್ಮಾರ್ಟ್‌ಪೋನ್ ಅನುಭವಕ್ಕಾಗಿ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ಒನ್‌ಪ್ಲಸ್ ಕಂಪೆನಿ ತನ್ನ ಆನ್‌ಲೈನ್ ಉಪಸ್ಥಿತಿಯನ್ನು ಆಫ್‌ಲೈನಿಗೂ ವಿಸ್ತರಣೆ ಮಾಡುತ್ತಿರುವುದು ಗ್ರಾಹಕರಿಗೂ ಸಂತಸದ ವಿಷಯ ಎನ್ನಬಹುದು. ಈಗ ಗ್ರಾಹಕರು ಒನ್‌ಪ್ಲಸ್ 6T ಫೋನ್ ಅನ್ನು ಒಮ್ಮೆ ಬಳಸಿ ಅದರ ಫೀಲ್ ಪಡೆದ ನಂತರ ಸ್ಮಾರ್ಟ್‌ಫೋನ್ ಖರೀದಿಗೆ ಮುಂದಾಗಬಹುದು.

Most Read Articles
Best Mobiles in India

English summary
OnePlus has joined hands with Reliance Digital to create more retail touch points for customers to experience and purchase OnePlus products across cities in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more