ಇಂದಿನಿಂದ ಒನ್‌ಪ್ಲಸ್ 'ರೆಡ್ ರಶ್' ಸೇಲ್ ಆರಂಭ!..ಏನೆಲ್ಲಾ ಆಫರ್‌ಗಳಿವೆ ನೋಡಿ!
ಯುವಕರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್‌ಪ್ಲಸ್ (OnePlus) ತನ್ನ 'ರೆಡ್ ರಶ್' (Red Rush) ಮಾರಾಟವನ್ನು ಘೋಷಿಸಿದೆ. ಮಾರ್ಚ್ 4 ರಿಂದ ಮಾರ್ಚ್ 9, 2025 ರವರೆಗೆ ನಡೆಯುವ ಈ ಮಾರಾಟದಲ್ಲಿ, ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಒನ್‌ಪ್ಲಸ್ 13 ಸರಣಿ, ಒನ್‌ಪ್ಲಸ್ 12 ಸರಣಿ ಮತ್ತು ನಾರ್ಡ್ ಸಿಇ 4 ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಒನ್‌ಪ್ಲಸ್‌ನ ಅಧಿಕೃತ ವೆಬ್‌ಸೈಟ್ OnePlus.in, ಅಮೆಜಾನ್, ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾ ಸೇರಿದಂತೆ ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಮಾರಾಟದ ಡೀಲ್‌ಗಳನ್ನು ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೋಡೋಣ ಬನ್ನಿ.
ಒನ್‌ಪ್ಲಸ್ 13, 13R
ಒನ್‌ಪ್ಲಸ್ ರೆಡ್ ರಶ್ ಸೇಲ್‌ನಲ್ಲಿ ಸ್ನಾಪ್‌ಡ್ರಾಗನ್® 8 ನೇ ಜನರೇಷನ್ 3 ಪ್ರೊಸೆಸರ್, ಹೆಚ್ಚಿನ ಬ್ಯಾಟರಿ ಬಾಳಿಕೆ ಮತ್ತು 1.5K 120Hz ProXDR ಡಿಸ್‌ಪ್ಲೆಯಂತಹ ವೈಶಿಷ್ಟ್ಯಗಳನ್ನು ಹೊಂದಿರುವ 'ಒನ್‌ಪ್ಲಸ್ 13 'ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಇದೀಗ 5,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಮತ್ತು ಹಳೆಯ ಸಾಧನವನ್ನು ವಿನಿಮಯ ಮಾಡಿಕೊಂಡರೆ 7,000 ರೂಪಾಯಿಗಳ ವಿನಿಮಯ ಬೋನಸ್ ಪಡೆಯಬಹುದು. ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ, ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 2,000 ರೂಪಾಯಿಗಳ ಬೆಲೆ ಕಡಿತ ಮತ್ತು 3,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಸೌಲಭ್ಯ ಲಭ್ಯವಿದೆ.
ಒನ್‌ಪ್ಲಸ್ 12, 12R
ಒನ್‌ಪ್ಲಸ್ ರೆಡ್ ರಶ್ ಸೇಲ್‌ನಲ್ಲಿ 5500 mAh ಬ್ಯಾಟರಿ ಜೊತೆಗೆ ಅಲ್ಟ್ರಾ-ಫಾಸ್ಟ್ 100W SUPERVOOC ಚಾರ್ಜಿಂಗ್ ಸಪೋರ್ಟ್ ಮಾಡುವ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಇದೀಗ 8,000 ರೂಪಾಯಿಗಳ ಬೆಲೆ ಕಡಿತ ಮತ್ತು 4,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯ ಲಾಭಗಳು ಲಭ್ಯವಿದೆ. ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು 10,000 ರೂಪಾಯಿಗಳ ಭರ್ಜರಿ ರಿಯಾಯಿತಿ ಮತ್ತು ಹೆಚ್ಚುವರಿ 3,000 ರೂಪಾಯಿಗಳ ಬ್ಯಾಂಕ್ ಕೊಡುಗೆಯನ್ನು ಪಡೆಯಬಹುದು.

ಒನ್‌ಪ್ಲಸ್ ನಾರ್ಡ್ ಸೀರಿಸ್
ಒನ್‌ಪ್ಲಸ್ ರೆಡ್ ರಶ್ ಸೇಲ್‌ನಲ್ಲಿ 6.74 ಇಂಚಿನ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 7+ ಜೆನ್ 3 ಚಿಪ್‌ಸೆಟ್, 5500 mAh ಬ್ಯಾಟರಿ ವೈಶಿಷ್ಟ್ಯಗಳನ್ನು ಹೊಂದಿರುವ ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ 1,000 ರೂಪಾಯಿಗಳ ಬೆಲೆ ಕಡಿತ ಮತ್ತು 4,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಇತ್ತ ಒನ್‌ಪ್ಲಸ್ ನಾರ್ಡ್ ಸಿಇ 4 ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ 2,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಮತ್ತು ಸಿಇ 4 ಲೈಟ್ ಖರೀದಿಸುವ ಗ್ರಾಹಕರಿಗೆ 1,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಸೌಲಭ್ಯಗಳು ಲಭ್ಯವಿದೆ.
ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್ ಆಫರ್‌ಗಳನ್ನು ಒನ್‌ಪ್ಲಸ್‌ನ ಅಧಿಕೃತ ವೆಬ್‌ಸೈಟ್, ಸ್ಟೋರ್ ಅಪ್ಲಿಕೇಶನ್, ಅಮೆಜಾನ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ವಿಜಯ್ ಸೇಲ್ಸ್ ಸೇರಿದಂತೆ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಂದ ಪಡೆಯಬಹುದು. ಆಯ್ದ ಫೋನ್‌ಗಳಲ್ಲಿ ಗ್ರಾಹಕರು 24 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಸೌಲಭ್ಯವನ್ನು ಪಡೆಯಬಹುದು. ಈ ಮಾರಾಟವು ಗ್ರಾಹಕರಿಗೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಬಹುದು.


Click it and Unblock the Notifications








