ಬಾರ್ಸಿಲೋನಾದಲ್ಲಿ ರಿವೀಲ್ ಆಯ್ತು ಒನ್‌ಪ್ಲಸ್‌ನ 5G ಸ್ಮಾರ್ಟ್‌ಫೋನ್!

|

ಕ್ವಾಲ್ಕಾಮ್ ಕಂಪೆನಿ ಜೊತೆಗೂಡಿ 5ಜಿ ಸ್ಮಾರ್ಟ್‌ಫೋನ್ ಅನಾವರಣ ಮಾಡುವುದಾಗಿ ಮೊದಲೇ ಹೇಳಿಕೊಂಡಿದ್ದ ಪ್ರೀಮಿಯಂ ಮೊಬೈಲ್ ದಿಗ್ಗಜ ಒನ್‌ಪ್ಲಸ್ ತನ್ನ ಮೊಟ್ಟ ಮೊದಲ 5G ಸ್ಮಾರ್ಟ್‌ಫೋನಿನ ಮಾದರಿಯನ್ನು ಜಗತ್ತಿಗೆ ತೋರಿಸಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 2019ನೇ ಮೊಬೈಲ್ ವರ್ಲ್ಡ್ ಕಾಗ್ರೆಂಸ್‌ನಲ್ಲಿ ಸ್ಯಾಮ್ಸಂಗ್, ಹುವಾವೇ ಮತ್ತು ಎಲ್‌ಜಿ ಕಂಪೆನಿಗಳ ನಂತರ 5G ಡಿವೈಸ್ ಅನ್ನು ಅನಾವರಣಗೊಳಿಸಿದೆ. ಆದರೆ, ಈ ಡಿವೈಸ್ ಕೇವಲ ಪ್ರೊಟೊಟೈಪ್ ಡಿವೈಸ್ ಮಾತ್ರ ಆಗಿದೆ.

ಹೌದು, ಸ್ಯಾಮ್ಸಂಗ್, ಹುವಾವೇ ಮತ್ತು ಎಲ್‌ಜಿ ಕಂಪೆನಿಗಳು 5G ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಮಾದರಿಗಳನ್ನು ಈಗಾಗಲೇ ಪರಿಚಯಿಸಿದ ನಂತರ, ಒನ್‌ಪ್ಲಸ್ ಇದೀಗ 5G ಸಾಮರ್ಥ್ಯದ ಪ್ರೊಟೊಟೈಪ್ ಡಿವೈಸ್ ಒಂದನ್ನು ತೋರಿಸಿದೆ. ಮೊಬೈಲ್ ವರ್ಲ್ಡ್ ಕಾಗ್ರೆಂಸ್ ಸಮಾರಂಭದಲ್ಲಿ ಗಾಜಿನ ಆವರಣದ ಅಡಿಯಲ್ಲಿ ಒನ್‌ಪ್ಲಸ್ 5G ಪ್ರೊಟೊಟೈಪ್ ಡಿವೈಸ್ ಪ್ರದರ್ಶನಗೊಂಡಿದ್ದು, ಇದೇ ವರ್ಷಾಂತ್ಯದ ವೇಳೆಗೆ ಒನ್‌ಪ್ಲಸ್ ತನ್ನ ಮೊದಲ 5G ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತರುವ ಆಲೋಚನೆಯಲ್ಲಿದೆ.

ಬಾರ್ಸಿಲೋನಾದಲ್ಲಿ ರಿವೀಲ್ ಆಯ್ತು ಒನ್‌ಪ್ಲಸ್‌ನ 5G ಸ್ಮಾರ್ಟ್‌ಫೋನ್!

ಬಿಡುಗಡೆಗೂ ಮುನ್ನವೇ ತನ್ನ ಮೊದಲ 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಒನ್‌ಪ್ಲಸ್ ಮನಸ್ಸು ಮಾಡಿಲ್ಲ. ಹಾಗಾಗಿ ಒನ್‌ಪ್ಲಸ್ 5G ಪ್ರೊಟೊಟೈಪ್ ಡಿವೈಸ್ ಅನ್ನು ಪ್ರದರ್ಶನಕ್ಕೆ ಇಟ್ಟಿದೆ ಎಂದು ಹೇಳಲಾಗಿದೆ. ಇನ್ನು ಪ್ರದರ್ಶನಕ್ಕೆ ಇಟ್ಟಿದ್ದ ಆ ಡಿವೈಸ್ ಈಗಾಗಲೇ ಲೀಕ್ ಆಗಿರುವ ಒನ್‌ಪ್ಲಸ್ 7 ಅನ್ನು ಹೋಲುತ್ತಿದೆ ಎಂದು ಹೇಳಲಾಗಿದೆ. ಹಾಗಾದರೆ, ಈಗಾಗಲೇ ಲೀಕ್ ಆಗಿರುವ 5G ಸಾಮರ್ಥ್ಯ ಒನ್‌ಪ್ಲಸ್ 7 ಸ್ಮಾರ್ಟ್‌ಪೋನ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡ್ರಾಪ್ ನಾಚ್ ಸ್ಕ್ರೀನ್

ಡ್ರಾಪ್ ನಾಚ್ ಸ್ಕ್ರೀನ್

ಕಂಪನಿ ಈಗಾಗಲೇ ತನ್ನ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ನಾಚ್ ಡಿಸ್‌ಪ್ಲೇಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಹೊಸ ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನಲ್ಲಿ ವಾಟರ್ ಡ್ರಾಪ್ ನಾಚ್ ಹೊಂದಿರುವ ಸ್ಕ್ರೀನ್ ಪರಿಚಯಿಸಲಿದೆ. ಇದು ಸ್ಮಾರ್ಟ್‌ಪೋನ್ ಡಿಸ್‌ಪ್ಲೇಗೆ ಅಂದ ತಂದುಕೊಡಲಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ.

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಮೂಲಕ ಕಂಪನಿ ಮೊದಲ ಬಾರಿಗೆ 'ಪೊಪ್ ಅಪ್ ಸೆಲ್ಫಿ ಕ್ಯಾಮೆರಾ' ವನ್ನು ಪರಿಚಯಿಸುತ್ತಿದ್ದು, ಪೊಪ್ ಅಪ್ ಕ್ಯಾಮೆರಾದ ವಿಶೇಷವೆಂದರೇ, ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಪಾಪ್ಅಪ್ ಸೆಲ್ಫಿ ಕ್ಯಾಮೆರಾಗಳನ್ನು ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುವುದಾಗಿ ಹೇಳಿವೆ.

ಎಚ್‌ಡಿಆರ್ ಸ್ಟ್ರೀಮಿಂಗ್

ಎಚ್‌ಡಿಆರ್ ಸ್ಟ್ರೀಮಿಂಗ್

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿವೆ ಎಂದು ಹೇಳಲಾಗುತ್ತಿದೆ.

ವಾರ್ಪ್ ಚಾರ್ಜ್ 30

ವಾರ್ಪ್ ಚಾರ್ಜ್ 30

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. 'ವಾರ್ಪ್ ಚಾರ್ಜ್ 30' ವೇಗದ ಚಾರ್ಜರ್ ಅನ್ನು ತನ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ನೀಡಲಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎಂದು ತಿಳಿದುಬಂದಿದೆ. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಸೋನಿಯ IMX586 ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.

5G ಇರಲಿದೆ!

5G ಇರಲಿದೆ!

ಒನ್‌ಪ್ಲಸ್ ಕಂಪನಿ ಈ ಮೊದಲೆ ಹೇಳಿರುವಂತೆ ಈ ವರ್ಷ ಅಂದರೇ 2019 ರಲ್ಲಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳು 5G ಸೌಲಭ್ಯ ಬೆಂಬಲಿಸಲಿವೆ. ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್ ಸಹ 5G ನೆಟವರ್ಕ್ ಸೌಲಭ್ಯ ಹೊಂದಿರಲಿದ್ದು, ಆ ಮೂಲಕ ಒನ್‌ಪ್ಲಸ್ 5G ನೆಟವರ್ಕ್ ಫೀಚರ್ ಪರಿಚಯಿಸಿದ ಕೀರ್ತಿ ಪಡೆಯಲಿದೆ.

Best Mobiles in India

English summary
OnePlus shows its 5G phone at MWC 2019, is likely to be OnePlus 7 that will launch in coming months

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X