ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ಯಕ್ಕೆ ಈ ವೈಶಿಷ್ಟ್ಯಗಳು ಸಿಗಲ್ಲ..!

By GizBot Bureau
|

ಒನ್ ಪ್ಲಸ್ ಸ್ಮಾರ್ಟ್ ಫೋನ್ ಗಳಿಗೆ ಬಹಳಷ್ಟು ಪ್ರಶಂಸೆ ಲಭಿಸಿದೆ. ಹೆಚ್ಚು ಮಾರಾಟ ಕಾಣುವ ಫೋನ್ ಗಳಲ್ಲಿ ಒನ್ ಪ್ಲಸ್ ಕಂಪೆನಿಯ ಫೋನ್ ಗಳೂ ಸೇರಿವೆ. ಈ ಸ್ಮಾರ್ಟ್ ಫೋನ್ ಗಳು ಉನ್ನತ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಹೊಂದಿದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಣೀಯವಾಗಿರುವ ಬೆಲೆಯನ್ನೂ ಕೂಡ ಹೊಂದಿದೆ.

ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಎಲ್ಲಾ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದೆ. ಅದೇ ಕಾರಣಕ್ಕೆ ಇದುವರೆಗೂ 3.5 ಎಂಎಂ ನ ಆಡಿಯೋ ಜಾಕ್ ನ್ನು ಕಂಪೆನಿ ತೆಗೆದುಹಾಕಿಲ್ಲ. ಆದರೆ ಹೊಸ ವೈಶಿಷ್ಟ್ಯತೆಗಳಾದ ಬೆರಳಚ್ಚು ತಂತ್ರಜ್ಞಾನ ಮತ್ತು ವಯರ್ ಲೆಸ್ ಚಾರ್ಜಿಂಗ್ ಅಳವಡಿಸಿಕೊಳ್ಳುವ ವಿಚಾರದಲ್ಲಿ ಕಂಪೆನಿ ಹಿಂದೇಟು ಹಾಕುತ್ತಿದೆ. ಒನ್ ಪ್ಲಸ್ ಫೋನ್ ಗಳಲ್ಲಿ ಈ ಎರಡು ತಂತ್ರಜ್ಞಾನಗಳು ಸದ್ಯಕ್ಕೆ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ಯಕ್ಕೆ ಈ ವೈಶಿಷ್ಟ್ಯಗಳು ಸಿಗಲ್ಲ..!

ಈ ವಿಚಾರದಲ್ಲಿ ಕಂಪೆನಿಯು ಈಗ ಮುಕ್ತವಾಗಿ ಮಾತನಾಡಲು ಸಿದ್ಧವಾಗಿದೆ ಮತ್ತು ಕಂಪೆನಿ ಸಿಇಓ ಪಿಟೆ ಲೋ ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ವಯರ್ ಲೆಸ್ ಚಾರ್ಜಿಂಗ್ ನ್ನು ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಪರಿಚಯಿಸಲು ನಾವು ತಯಾರಿದ್ದೇವೆ ಆದರೆ ಸದ್ಯ ನಮ್ಮ ಫೋನ್ ಗಳ ಡಿಸೈನಿನ ಕಾಂಪ್ಲಿಕೇಷನ್ ಗಳು ಇರುವುದರಿಂದಾಗಿ ಇದನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಫಾಸ್ಟ್ ವಯರ್ ಲೆಸ್ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಒನ್ ಪ್ಲಸ್ ಕಂಪೆನಿ ಈಗಲೂ ಟೆಸ್ಟಿಂಗ್ ನಡೆಸುತ್ತಿದೆ ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾವು ನಿರೀಕ್ಷಿಸುವ ವೇಗ ಮತ್ತು ಅನುಕೂಲತೆಗಳು ವಯರ್ ಲೆಸ್ ಚಾರ್ಜಿಂಗ್ ನಲ್ಲಿ ನಗೆ ಲಭ್ಯವಾಗುತ್ತಿಲ್ಲ.ಚಾರ್ಜಿಂಗ್ ಪ್ರೊಸೆಸ್ ನಲ್ಲಿ ಫೋನಿನ ದಪ್ಪವನ್ನು ಹೆಚ್ಚಿಸಬೇಕಾದ ಅಗತ್ಯತೆ ಕಂಡುಬರುತ್ತಿದೆ ಮತ್ತು ಡಿವೈಸ್ ಬಿಸಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಅದೆಲ್ಲವೂ ಪರಿಣಾಮಕಾರಿಯಾಗಿ ನಿವಾರಣೆಯಾದ ನಂತರ ಆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು ಎಂಬುದನ್ನು ಅವರು ತಿಳಿಸಿದ್ದಾರೆ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ಯಕ್ಕೆ ಈ ವೈಶಿಷ್ಟ್ಯಗಳು ಸಿಗಲ್ಲ..!

ಇದುವರೆಗೂ ಯಾವುದೇ ಒನ್ ಪ್ಲಸ್ ಸ್ಮಾರ್ಟ್ ಫೋನ್ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುವುದಿಲ್ಲ.

ಇದೇ ಸಂದರ್ಬದಲ್ಲಿ ಬುಲೆಟ್ ವಯರ್ ಲೆಸ್ ಇಯರ್ ಫೋನ್ ಬಗ್ಗೆ ಕೂಡ ಪ್ರಸ್ತಾಪಿಸಲಾಯಿತು ಮತ್ತು ಇದು ಒನ್ ಪ್ಲಸ್ ಸಂಸ್ಥೆ ಸೃಷ್ಟಿಸಿದ ಮೊದಲ ಬ್ಲೂಟೂತ್ ಇಯರ್ ಫೋನ್ ಆಗಿದೆ ಮತ್ತು ಇದಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹೊಸ ಪ್ರೊಡಕ್ಟಿಗೆ ಎಲ್ಲರಿಂದಲೂ ಉತ್ತಮ ಬೆಂಬಲ ಸಿಕ್ಕಿದೆ. ಈ ಧನಾತ್ಮಕ ಪ್ರತಿಕ್ರಿಯೆಯು ನಮಗೆ ಹೆಚ್ಚಿನ ಧೈರ್ಯ ತುಂಬಿದ್ದು, ಭವಿಷ್ಯದಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂಬುದನ್ನು ಅವರು ತಿಳಿಸಿದ್ದಾರೆ.

Best Mobiles in India

English summary
OnePlus smartphones may not get this feature anytime soon. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X