ಒನ್‌ಪ್ಲಸ್‌ನಲ್ಲೂ ಬಂತು ಇನ್‌ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌..!

|

ಇನ್‌ಪ್ರಿಂಟ್‌ ಫಿಂಗರ್ ಪ್ರಿಂಟ್‌ ಸೆನ್ಸಾರ್‌ ಫೀಚರ್‌ನಿಂದಲೇ ಜಾಹೀರಾತು ಮಾಡಿಕೊಳ್ಳುತ್ತಿರುವ ವಿವೋಗೆ ಮತ್ತೊಂದು ಎದುರಾಳಿ ಹುಟ್ಟಿಕೊಂಡಿದೆ. ಸ್ಮಾರ್ಟ್‌ಫೋನ್‌ ಲೋಕದಲ್ಲಿ ದಿನಕ್ಕೊಂದು ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುತ್ತಿವೆ. ಪ್ರತಿ ಕಂಪನಿಗಳು ಗ್ರಾಹಕರಿಗೆ ಹೊಸ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ನೀಡಲು ಮುಂದಾಗುತ್ತಿವೆ. ನೋಚ್‌, ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್, ಡ್ಯುಯಲ್‌ ಲೆನ್ಸ್‌ ಕ್ಯಾಮೆರಾ, ವಾಟರ್‌ಡ್ರಾಪ್‌ನಂತಹ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿವೆ.

ಒನ್‌ಪ್ಲಸ್‌ನಲ್ಲೂ ಬಂತು ಇನ್‌ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌..!

ಆಪಲ್‌ಗೆ ಎದುರಾಳಿಯಾಗಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಒನ್‌ಪ್ಲಸ್‌ ಇತ್ತೀಚೆಗೆ ತಾನೇ ಭಾರತದಲ್ಲಿ ನಂ.1 ಸ್ಥಾನ ಅಲಂಕರಿಸಿತ್ತು. ತನ್ನ ಮುಂದಿನ ಸ್ಮಾರ್ಟ್‌ಫೋನ್ ಒನ್‌ಪ್ಲಸ್‌ 6Tನಲ್ಲಿ ಹೊಸ ಫೀಚರ್‌ಗಳನ್ನು ಅಳವಡಿಸಲು ಮುಂದಾಗಿರುವ ಚೀನಾ ಕಂಪನಿ, ಇನ್‌ಸ್ಕ್ರೀನ್‌ ಫಿಂಗರ್ ಪ್ರಿಂಟ್ ಸೆನ್ಸಾರ್‌ ಅಳವಡಿಸುವ ಕುರಿತು ಸುಳಿವನ್ನು ಬಿಟ್ಟುಕೊಟ್ಟಿದೆ.

ಟ್ವಿಟ್ಟರ್‌ನಲ್ಲಿ ಸುಳಿವು ಬಿಟ್ಟ ಒನ್‌ಪ್ಲಸ್‌

ಟ್ವಿಟ್ಟರ್‌ನಲ್ಲಿ ಸುಳಿವು ಬಿಟ್ಟ ಒನ್‌ಪ್ಲಸ್‌

ಹೌದು, ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಒನ್‌ಪ್ಲಸ್, ಟೀಸರ್‌ನಿಂದಲೇ ವಿವೋಗೆ ಸವಾಲನ್ನು ಹಾಕಿದೆ. ಹೀಗಾಗಲೇ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಗ್ಗೆ ಹಲವು ಗಾಸಿಫ್‌ಗಳು, ಸೋರಿಕೆಗಳು ಸೃಷ್ಟಿಯಾಗಿದ್ದು, ಈ ಸ್ಮಾರ್ಟ್‌ಫೋನ್‌ಗೆ ಬಹಳಷ್ಟು ಹೈಪ್‌ ಸಿಕ್ಕಂತಾಗಿದೆ.

ಏನೀದು ಫೀಚರ್..?

ಏನೀದು ಫೀಚರ್..?

ಸಾಮಾನ್ಯವಾಗಿ ಸದ್ಯ ಬಿಡುಗಡೆಯಾಗುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುತ್ತವೆ. ಆದರೆ, ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್‌ ಸೆನ್ಸಾರ್‌ನ್ನು ಕೆಲವೇ ಕೆಲವು ಸ್ಮಾರ್ಟ್‌ಫೋನ್‌ಗಳು ಮಾತ್ರ ಒಳಗೊಂಡಿದ್ದು, ಅತ್ಯಾಧುನಿಕ ಫೀಚರ್‌ ಆಗಿದೆ. ಇಲ್ಲಿ ಡಿಸ್‌ಪ್ಲೇನಲ್ಲಿಯೇ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಇದ್ದು, ಫಿಂಗರ್ ಪ್ರಿಂಟ್‌ ಸ್ಕ್ಯಾನಿಂಗ್ ಮತ್ತು ಗುರುತಿಸುವಿಕೆಗೆ ಸಹಾಯಕವಾಗಲಿದೆ. OLED ಡಿಸ್‌ಪ್ಲೇನಲ್ಲಿ ಫಿಂಗರ್‌ಪ್ರಿಂಟ್‌ ಬಟನ್‌ ಇರಲಿದ್ದು, ಪ್ರತ್ಯೇಕವಾದ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಬಟನ್‌ ಅಳವಡಿಸುವುದು ತಪ್ಪುತ್ತದೆ.

ಏನೀದೆ ಒನ್‌ಪ್ಲಸ್ ಟೀಸರ್‌ನಲ್ಲಿ..?

ಒನ್‌ಪ್ಲಸ್‌ ಟ್ವೀಟ್‌ ಮಾಡಿರುವ ಟೀಸರ್‌ನಲ್ಲಿ ‘Incoming: Top Secret Message' ಎಂಬುದನ್ನು ಬಳಸಿದ್ದು, ಹೊಸ ಫೀಚರ್ ಸದ್ಯದಲ್ಲಿಯೇ ಬರಲಿದೆ. ಅದು ಬಹಳ ರಹಸ್ಯವಾದುದು ಎಂದು ಹೇಳಿದೆ. ಅಂದರೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್‌ ಬರುವುದು ಖಚಿತವಾಗಿದ್ದು, ಸ್ಕ್ರೀನ್ ಅನ್‌ಲಾಕ್ ಫೀಚರ್‌ ಆಗಲಿದ್ದು, ಡಿಸ್‌ಪ್ಲೇ ಕೆಳಗಡೆ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಅಳವಡಿಸುವ ಕಾರ್ಯದಲ್ಲಿ ಚೀನಾ ಕಂಪನಿ ನಿರತವಾಗಿದೆ.

ವಾಟರ್‌ಡ್ರಾಪ್‌ ವಿನ್ಯಾಸ

ವಾಟರ್‌ಡ್ರಾಪ್‌ ವಿನ್ಯಾಸ

ಮತ್ತೊಂದು ಊಹೆಯ ಪ್ರಕಾರ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್‌ ವಿನ್ಯಾಸದ ಡಿಸ್‌ಪ್ಲೇ ನೋಚ್ ಹೊಂದಿರಲಿದೆ. ಅದಲ್ಲದೇ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಲೆನ್ಸ್‌ ವ್ಯವಸ್ಥೆಯನ್ನು ಹೊಂದಿರುವ ಬಗ್ಗೆ ಸುದ್ದಿ ಹೊರಬಿದ್ದಿದ್ದು, ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ ಒಪ್ಪೋ R17 ಪ್ರೋ ಸ್ಮಾರ್ಟ್‌ಫೋನ್‌ನ ವಿನ್ಯಾಸದಲ್ಲಿ ಹೋಲಿಕೆಯಾಗುವ ಸಾಧ್ಯತೆಯಿದೆ.

ಹೊಸ ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌

ಹೊಸ ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್ ಜತೆಗೆ ಹೊಸ ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಒನ್‌ಪ್ಲಸ್‌ ಯೋಚಿಸುತ್ತಿದೆ. ಹೀಗಾಗಲೇ FCC ಪಟ್ಟಿ ಮಾಡಿರುವ ಆಡಿಯೋ ಡಿವೈಸ್‌ಗಳ ಪಟ್ಟಿಯಲ್ಲಿ ಸ್ಪಷ್ಟವಾಗಿ ಒನ್‌ಪ್ಲಸ್‌ ಬುಲೆಟ್‌ ವೈರ್‌ಲೆಸ್‌ ಎಂದು ಬರೆಯಲಾಗಿದ್ದು, ಬಿಡುಗಡೆ ಖಚಿತವಾಗಿದೆ. ಒನ್‌ಪ್ಲಸ್‌ 6 ಜತೆ ಹಿಂದಿನ ಆವೃತ್ತಿಯ ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿತ್ತು, ಅದರ ಬೆಲೆ 3,990 ರೂ. ಆಗಿತ್ತು. ಈಗ ಬಿಡುಗಡೆಯಾಗುವ ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು ಅದೇ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ.

ಯಾವಾಗ ಬಿಡುಗಡೆ..?

ಯಾವಾಗ ಬಿಡುಗಡೆ..?

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್ ಮೊದಲಾರ್ಧದಲ್ಲಿ ಬಿಡುಗಡೆಗೊಳಿಸುವ ಇರಾದೆಯಲ್ಲಿ ಒನ್‌ಪ್ಲಸ್ ಇದೆ. ಹೀಗಾಗಲೇ ಆಪಲ್‌ ತನ್ನ ಐಫೋನ್‌ಗಳಲ್ಲಿ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಇರುವುದಿಲ್ಲವೆಂದು ಹೇಳಿಕೊಂಡಿದೆ. ಇದು ಒನ್‌ಪ್ಲಸ್‌ಗೆ ವರದಾನವಾಗುವ ಸಾಧ್ಯತೆಯಿದ್ದು, ಎಲ್ಲಾ ಗೊಂದಲಗಳಿಗೂ ಬಿಡುಗಡೆಯಾಗುವವರೆಗೂ ಕಾಯಬೇಕು.

Best Mobiles in India

English summary
OnePlus teaser hints at in-display fingerprint sensor on OnePlus 6T.To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X