OnePlus Turbo 6 ಸರಣಿ ಲಾಂಚ್ ಡೇಟ್ ಫಿಕ್ಸ್: 9,000mAh ಬ್ಯಾಟರಿ ಖಚಿತ!
ಜನವರಿ 8 ರಂದು ಚೀನಾದಲ್ಲಿ ಬಹುನಿರೀಕ್ಷಿತ OnePlus Turbo 6 ಸರಣಿ ಫೋನ್‌ಗಳು ಬಿಡುಗಡೆಯಾಗುವುದು ಅಧಿಕೃತವಾಗಿ ಖಚಿತವಾಗಿದೆ. OnePlus ತನ್ನ ಹೊಸ Turbo 6 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಜನವರಿ 8ರಂದು ಬಿಡುಗಡೆ ಮಾಡಲು ಸಜ್ಜಾಗಿರುವುದಾಗಿ ತಿಳಿಸಿದ್ದು, ಈ ಸರಣಿಯಲ್ಲಿ OnePlus Turbo 6 ಮತ್ತು OnePlus Turbo 6V ಎಂಬ ಎರಡು ಫೋನ್‌ಗಳು ಇರುವುದನ್ನು ಖಚಿತಪಡಿಸಿದೆ. ಇಲ್ಲಿಯವರೆಗೂ ವದಂತಿಯ ಸುದ್ದಿಗಳಿದಂಲೇ ಭಾರೀ ಸುದ್ದಿ ಮಾಡಿದ್ದ ಈ OnePlus Turbo 6 ಸರಣಿ ಫೋನ್‌ಗಳ ವಿನ್ಯಾಸ, ಡಿಸ್‌ಪ್ಲೇ ಹಾಗೂ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಹಾಗಾದರೆ, ಮುಂಬರಲಿರುವ OnePlus Turbo 6 ಸರಣಿ ಫೋನ್‌ಗಳು ಹೇಗಿರಲಿವೆ ಎಂಬುದನ್ನು ನೋಡೋಣ ಬನ್ನಿ.
OnePlus Turbo 6 ಸರಣಿ: ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳ ಆಯ್ಕೆ
OnePlus Turbo 6 ಸರಣಿಯಲ್ಲಿನ OnePlus Turbo 6 ಮತ್ತು OnePlus Turbo 6V ಎರಡೂ ಫೋನ್‌ಗಳಲ್ಲಿ ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ LED ಫ್ಲ್ಯಾಶ ಹೊಂದಿರುವ ಈ ವಿನ್ಯಾಸವು ಪ್ರೀಮಿಯಂ ಲುಕ್ ನೀಡುತ್ತದೆ. ಮ್ಯಾಟ್ ಫಿನಿಷ್‌ನ ಫ್ರೇಮ್ ಮತ್ತು ಬಣ್ಣಕ್ಕೆ ಹೊಂದಿಕೊಂಡ ಅಂಚುಗಳು ಫೋನ್‌ನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ. OnePlus Turbo 6 ಕಪ್ಪು, ಬೆಳ್ಳಿ ಮತ್ತು ಟರ್ಕಾಯಿಸ್ ಬಣ್ಣಗಳಲ್ಲಿ ಲಭ್ಯವಾಗಲಿದ್ದು, OnePlus Turbo 6V ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲೇ ಪರಿಚಯವಾಗಲಿದೆ.

OnePlus Turbo 6 ಸರಣಿ: ಡಿಸ್‌ಪ್ಲೇ ಮತ್ತು ಕಾರ್ಯಕ್ಷಮತೆ
OnePlus Turbo 6 ನಲ್ಲಿ 1.5K ರೆಸಲ್ಯೂಶನ್ ಡಿಸ್‌ಪ್ಲೇ ನೀಡಲಾಗಿದ್ದು, ಇದು 165Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಪ್ಲಾಸ್ಟಿಕ್ ಫ್ರೇಮ್ ಇದ್ದರೂ, ಫೋನ್‌ಗೆ IP68, IP69 ಮತ್ತು IP69K ರೇಟಿಂಗ್‌ಗಳನ್ನು ನೀಡಲಾಗಿದ್ದು, ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ. Android 16 ಆಧಾರಿತ ಸಾಫ್ಟ್‌ವೇರ್ ಮತ್ತು Snapdragon 8s Gen 4 ಪ್ರೊಸೆಸರ್ ಈ ಫೋನ್‌ನ ಪ್ರಮುಖ ಶಕ್ತಿಯಾಗಿವೆ.
ಇತ್ತ OnePlus Turbo 6V ಕೂಡ ಬಹುತೇಕ Turbo 6 ಮಾದರಿಯಂತೆಯೇ ವಿನ್ಯಾಸ ಮತ್ತು ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ 6.8 ಇಂಚಿನ 1.5K OLED ಡಿಸ್‌ಪ್ಲೇ ನೀಡಲಾಗಿದ್ದು, 144Hz ರಿಫ್ರೆಶ್ ರೇಟ್ ಇದೆ. ಕಾರ್ಯಕ್ಷಮತೆಗೆ Snapdragon 7s Gen 4 ಪ್ರೊಸೆಸರ್ ಬಳಸಲಾಗಿದೆ. ಬ್ಯಾಟರಿ ಸಾಮರ್ಥ್ಯ, ಕ್ಯಾಮೆರಾ ಮತ್ತು ಸಂಪರ್ಕ ವೈಶಿಷ್ಟ್ಯಗಳು Turbo 6 ಮಾದರಿಯಂತೆಯೇ ಇರಲಿವೆ ಎಂದು ಕಂಪನಿ ಸೂಚಿಸಿದೆ.
OnePlus Turbo 6 ಸರಣಿ: ಕ್ಯಾಮೆರಾ, ಬ್ಯಾಟರಿ ಮತ್ತು ಸ್ಟೋರೇಜ್
ಈ ಸರಣಿಯ ಎರಡೂ ಮಾದರಿಗಳಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಒಳಗೊಂಡ ಡ್ಯುಯಲ್ ರಿಯರ್ ಸೆಟ್‌ಅಪ್ ಇದೆ. ಸೆಲ್ಫಿಗಳಿಗೆ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ, ಎರಡೂ ಫೋನ್‌ಗಳು 9,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರಲಿವೆ. ದಕ್ಕೆ 80W ವೇಗದ ವೈರ್‌ಡ್ ಚಾರ್ಜಿಂಗ್ ಬೆಂಬಲವಿದ್ದು, ಜೊತೆಗೆ 27W ರಿವರ್ಸ್ ಚಾರ್ಜಿಂಗ್ ಕೂಡ ಲಭ್ಯವಿದೆ. ಈ ಸರಣಿಯಲ್ಲಿ LPDDR5X RAM ಮತ್ತು UFS 4.1 ಸ್ಟೋರೇಜ್ ನೀಡಲಾಗಿದ್ದು, ವೇಗವಾದ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
OnePlus Turbo 6 ಸರಣಿ: ಬಿಡುಗಡೆ ಮಾಹಿತಿ
OnePlus ಈಗಾಗಲೇ Turbo 6 ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶಿಸಿ, ಅದರ ಪ್ರಮುಖ ತಾಂತ್ರಿಕ ವಿವರಗಳನ್ನು ಹಂಚಿಕೊಂಡಿದೆ. ಜನವರಿ 8ರ ಲಾಂಚ್ ವೇಳೆ ಸಂಪೂರ್ಣ ಫೀಚರ್ಸ್, ಬೆಲೆ ಮತ್ತು ಚೀನಾದ ಮಾರಾಟ ವಿವರಗಳು ಅಧಿಕೃತವಾಗಿ ಪ್ರಕಟವಾಗಲಿವೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಈ Turbo 6 ಸರಣಿಯ ಲಭ್ಯತೆ ಕುರಿತು ಕಂಪನಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ದೊಡ್ಡ ಬ್ಯಾಟರಿ, ಹೈ ರಿಫ್ರೆಶ್ ರೇಟ್ ಡಿಸ್‌ಪ್ಲೇ ಮತ್ತು ಶಕ್ತಿಶಾಲಿ ಪ್ರೊಸೆಸರ್‌ಗಳೊಂದಿಗೆ ಪ್ರೀಮಿಯಂ ಅನುಭವವನ್ನು ಗುರಿಯಾಗಿಸಿಕೊಂಡಿರುವ ಈ ಫೋನ್‌ಗಳ ಮೇಲೆ ಭಾರತೀಯ ಬಳಕೆದಾರರು ಕೂಡ ಹೆಚ್ಚು ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications








