165Hz BOE ಡಿಸ್‌ಪ್ಲೆಯೊಂದಿಗೆ ಗೇಮಿಂಗ್ ಕೇಂದ್ರಿತ OnePlus Turbo ಆಗಮನ!?
OnePlus ತನ್ನ ಗೇಮಿಂಗ್-ಕೇಂದ್ರಿತ Turbo ಶ್ರೇಣಿಯ ಭಾಗವಾಗಿ OnePlus Turbo ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಚೀನಾದಲ್ಲಿ ಬಿಡುಗಡೆ ಮಾಡಲಿದೆ ಎಂಬ ವದಂತಿಗಳಿವೆ. ಈ ಫೋನಿನ ಅಧಿಕೃತ ಬಿಡುಗಡೆಗೂ ಮುನ್ನವೇ ಲೀಕ್ ಆಗಿರುವ ಮಾಹಿತಿಗಳು, OnePlus Turbo ಫೋನ್‌ನ್ನು ಹೈ-ಪರ್ಫಾರ್ಮೆನ್ಸ್ ಗೇಮಿಂಗ್ ಸೆಗ್ಮೆಂಟ್‌ನಲ್ಲಿ ಇರುವುದನ್ನು ಸೂಚಿಸಿವೆ.! ಹೌದು, ಮುಂಬರುವ OnePlus Turbo ಸ್ಮಾರ್ಟ್‌ಫೋನ್ BOE-ಸೋರ್ಸ್ 165Hz ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಮತ್ತು ಸ್ನಾಪ್‌ಡ್ರಾಗನ್ 8s Gen 4 ಚಿಪ್‌ನಿಂದ ಚಾಲಿತವಾಗಿರಬಹುದು ಎಂದು ಸೂಚಿಸಿವೆ.
ಜನಪ್ರಿಯ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ (ಚೈನೀಸ್ ಭಾಷೆಯಿಂದ ಅನುವಾದಿಸಲಾಗಿದೆ) ವೈಬೊ ಪೋಸ್ಟ್ ಪ್ರಕಾರ, OnePlus Turbo ಸ್ಮಾರ್ಟ್‌ಫೋನ್‌ನಲ್ಲಿ 6.78 ಇಂಚಿನ BOE ನಿರ್ಮಿತ LTPS ಫ್ಲಾಟ್ ಡಿಸ್‌ಪ್ಲೇ ಇರಲಿದೆ. ಈ ಡಿಸ್‌ಪ್ಲೇ 1.5K ರೆಸಲ್ಯೂಷನ್ ಜೊತೆಗೆ 165Hz ರಿಫ್ರೆಶ್ ರೇಟ್ ನೀಡಲಿದೆ.
ಡಿಸೈನ್ ಮತ್ತು ಬಣ್ಣ ಆಯ್ಕೆಗಳ ವಿಷಯಕ್ಕೆ ಬಂದರೆ, OnePlus Turbo ಫೋನ್ Lone Wolf Black, Wilderness Green ಮತ್ತು Chasing Light Silver ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಬಹುದು. ಸುಮಾರು 217 ಗ್ರಾಂ ತೂಕ ಹೊಂದಿರುವ ಈ ಫೋನ್, ದೊಡ್ಡ ಬ್ಯಾಟರಿಯಿದ್ದರೂ ಸಹ ಪ್ರೀಮಿಯಂ ಲುಕ್ ಮತ್ತು ಸ್ಟರ್ಡಿ ಬಿಲ್ಡ್ ನೀಡುವ ನಿರೀಕ್ಷೆಯಿದೆ.

ಕಾರ್ಯಕ್ಷಮತೆಯ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ Qualcomm Snapdragon 8s Gen 4 ಪ್ರೊಸೆಸರ್ ಮೂಲಕ ಚಾಲಿತವಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಫೋನ್ 12GB ಮತ್ತು 16GB RAM ಆಯ್ಕೆಗಳೊಂದಿಗೆ, 256GB ಹಾಗೂ 512GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
OnePlus Turbo ಯ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಅದರ ದೊಡ್ಡ ಬ್ಯಾಟರಿ. ಲೀಕ್ ಪ್ರಕಾರ, ಈ ಫೋನ್ ಸುಮಾರು 9,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಬಹುದು. ಇದರಿಂದ ದೀರ್ಘಕಾಲ ಗೇಮಿಂಗ್ ಆಡಲು, ಸ್ಟ್ರೀಮಿಂಗ್ ವೀಕ್ಷಿಸಲು ಹಾಗೂ ದಿನಪೂರ್ತಿ ಬಳಕೆಗೆ ಚಾರ್ಜಿಂಗ್ ಚಿಂತೆಯಿಲ್ಲದ ಅನುಭವ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದೇ Turbo ಸರಣಿಯಲ್ಲಿ ಇನ್ನೊಂದು ವೇರಿಯಂಟ್ ಕೂಡ ಬಿಡುಗಡೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆ ಮಾದರಿಯಲ್ಲಿ ಸಹ 165Hz ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿ ಇರಬಹುದು, ಆದರೆ Snapdragon 8s Gen 4 ಬದಲಿಗೆ Snapdragon 7 ಸರಣಿಯ ಪ್ರೊಸೆಸರ್ ಬಳಸುವ ಸಾಧ್ಯತೆ ಇದೆ. ಈ ವೇರಿಯಂಟ್ Lone Wolf Black, Nova White ಮತ್ತು Fearless Blue ಬಣ್ಣ ಆಯ್ಕೆಗಳಲ್ಲಿ ಬರಬಹುದು ಎಂದು ವರದಿಯಾಗಿದೆ.
AnTuTu ಬೆಂಚ್‌ಮಾರ್ಕ್ ಲಿಸ್ಟಿಂಗ್?
ಇದರ ಜೊತೆಗೆ, OnePlus Turbo ಎಂದು ಹೇಳಲಾಗಿರುವ ಒಂದು ಸ್ಮಾರ್ಟ್‌ಫೋನ್ AnTuTu ಬೆಂಚ್‌ಮಾರ್ಕ್ ಲಿಸ್ಟಿಂಗ್‌ನಲ್ಲಿ ((ಟಿಪ್‌ಸ್ಟರ್ @ZionsAnvin ಗುರತಿಸಿರುವಂತೆ) ಕಾಣಿಸಿಕೊಂಡಿದೆ. PLU110 ಎಂಬ ಮಾದರಿ ಸಂಖ್ಯೆಯೊಂದಿಗೆ ಲಿಸ್ಟ್ ಆಗಿರುವ ಈ ಡಿವೈಸ್ Snapdragon 8s Gen 4 ಚಿಪ್‌ಸೆಟ್, 16GB LPDDR5x RAM ಮತ್ತು 512GB UFS 4.1 ಸ್ಟೋರೇಜ್ ಹೊಂದಿರುವುದಾಗಿ ತಿಳಿದುಬಂದಿದೆ. ಈ ಫೋನ್ Android 16 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್ ಆಗುತ್ತಿರುವುದು ಕೂಡ ಗಮನಾರ್ಹ ಅಂಶವಾಗಿದೆ.
AnTuTu ಬೆಂಚ್‌ಮಾರ್ಕ್ ಪರೀಕ್ಷೆಯಲ್ಲಿ ಈ ಡಿವೈಸ್ ಸುಮಾರು 26 ಲಕ್ಷ ಅಂಕಗಳನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಇದು ಇತ್ತೀಚೆಗೆ ಬಿಡುಗಡೆಯಾದ OnePlus 15R ಗಿಂತ ಸ್ವಲ್ಪ ಕಡಿಮೆ ಇದ್ದರೂ, ವಾಸ್ತವಿಕ ಬಳಕೆಯಲ್ಲಿ ಅತ್ಯಂತ ಸ್ಮೂತ್ ಮತ್ತು ಶಕ್ತಿಶಾಲಿ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.ಇತ್ತೀಚಿನ ದಿನಗಳಲ್ಲಿ ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೈ ರಿಫ್ರೆಶ್ ರೇಟ್ ಡಿಸ್ಪ್ಲೇಗಳು ಹೆಚ್ಚು ಬೇಡಿಕೆಯಲ್ಲಿರುವುದರಿಂದ, ಈ ಮೇಲಿನ ವೈಶಿಷ್ಟ್ಯಗಳು ಯುವ ಬಳಕೆದಾರರನ್ನು ವಿಶೇಷವಾಗಿ ಆಕರ್ಷಿಸುವ ಸಾಧ್ಯತೆ ಇದೆ.


Click it and Unblock the Notifications








