Home
ಮೊಬೈಲ್

OnePlus Turbo ಫಸ್ಟ್ ಲುಕ್ ಔಟ್: ವಿಭಿನ್ನ ಮತ್ತು ಆಕರ್ಷಕ!

OnePlus ತನ್ನ ಗೇಮಿಂಗ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಹೊಸ OnePlus Turbo ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಚೀನಾದ ಮಾರುಕಟ್ಟೆಗೆ ಮೊದಲು ಪರಿಚಯವಾಗುವ ಸಾಧ್ಯತೆ ಇರುವ ಈ ಫೋನ್, ಲಾಂಚ್‌ಗೂ ಮುನ್ನವೇ ಲೈವ್ ಚಿತ್ರಗಳ ಮೂಲಕ ಇದೀಗ ಸುದ್ದಿಯಲ್ಲಿದೆ. ಲೀಕ್ ಆದ ಈ ಚಿತ್ರಗಳು OnePlus Turbo ವಿನ್ಯಾಸ, ಬಣ್ಣ ಆಯ್ಕೆಗಳು ಮತ್ತು ಪ್ರಮುಖ ಸ್ಪೆಸಿಫಿಕೇಶನ್‌ಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡುತ್ತಿದ್ದು, ಇದು ಅಗ್ರೆಸಿವ್ ಬೆಲೆಯ ಗೇಮಿಂಗ್ ಫೋನ್ ಆಗಿ ಕಾಣಿಸಿಕೊಳ್ಳಬಹುದು ಎಂಬ ಸೂಚನೆ ನೀಡುತ್ತಿದೆ.

ಹೌದು, ಆಂಡ್ರಾಯ್ಡ್ ಹೆಡ್‌ಲೈನ್ಸ್ (Android Headlines) ವರದಿಯಲ್ಲಿ ಮುಂಬರುವ OnePlus Turbo ಸ್ಮಾರ್ಟ್‌ಫೋನಿನ ಲೈವ್ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ OnePlus Turbo ವಿನ್ಯಾಸವು ಇತ್ತೀಚೆಗೆ ಬಿಡುಗಡೆಗೊಂಡ OnePlus 15 ಮತ್ತು OnePlus 15R ಮಾದರಿಗಳಿಗೆ ಹೋಲಿಕೆಯಾಗಿದೆ. ಹಿಂಭಾಗದ ಎಡ ಮೇಲ್ಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದ್ದು, ಅದರಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆನ್ಸರ್‌ಗಳು ಮತ್ತು LED ಫ್ಲ್ಯಾಶ್ ಸೇರಿವೆ. ಸೈಡ್ ಫ್ರೇಮ್‌ನ ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಇರಿಸಲಾಗಿದ್ದು, ಗೇಮಿಂಗ್ ಸ್ನೇಹಿ ವಿನ್ಯಾಸವಿದೆ.

ಈ OnePlus Turbo ಸ್ಮಾರ್ಟ್‌ಫೋನ್‌ನ ಹಿಂಭಾಗ ಗ್ಲಾಸಿ ಫಿನಿಶ್ ಹೊಂದಿದ್ದು, ಪ್ಲಾಸ್ಟಿಕ್ ಮೆಟೀರಿಯಲ್ ಬಳಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಬಳಕೆದಾರರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಫೋನ್ ಒದಗಿಸುವುದು OnePlus ಉದ್ದೇಶವಾಗಿರಬಹುದು. ಇನ್ನು OnePlus ಕಂಪನಿಯು ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಫೋನ್ ಅನ್ನು ಪರೀಕ್ಷಿಸುತ್ತಿದ್ದು, ಲೀಕ್ ಆದ ನೀಲಿ ಬಣ್ಣ ಸ್ವಲ್ಪ ಹಸಿರು ಛಾಯೆ ಹೊಂದಿರುವುದು ಗಮನ ಸೆಳೆಯುತ್ತದೆ. ಒಟ್ಟಾರೆಯಾಗಿ, OnePlus Turbo ಸ್ಮಾರ್ಟ್‌ಫೋನ್ ಒಂದು ವಿಭಿನ್ನ ಮತ್ತು ಆಕರ್ಷಕ ಲುಕ್ ಪಡೆಯುವುದು ಖಾತ್ರಿಯಾಗಿದೆ.

OnePlus Turbo ಫಸ್ಟ್ ಲುಕ್ ಔಟ್: ವಿಭಿನ್ನ ಮತ್ತು ಆಕರ್ಷಕ!
Photo credits: android headlines

OnePlus Turbo: ಸೋರಿಕೆಯಾಗಿವೆ ಪ್ರಮುಖ ವೈಶಿಷ್ಟ್ಯಗಳು
ವರದಿಯ ಪ್ರಕಾರ, OnePlus Turbo ನಲ್ಲಿ 6.8 ಇಂಚಿನ ದೊಡ್ಡ 1.5K AMOLED ಡಿಸ್‌ಪ್ಲೇ ಹೊಂದಿರುಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಬೆಂಬಲಿಸುವ ಸಾಧ್ಯತೆ ಇದೆ. ಮೊದಲು 165Hz ರಿಫ್ರೆಶ್ ರೇಟ್ ಬಗ್ಗೆ ಊಹೆಗಳು ಇದ್ದರೂ, ಇತ್ತೀಚಿನ ಲೀಕ್‌ಗಳು 144Hz ರಿಫ್ರೆಶ್ ರೇಟ್ ಇರುವ ಬಗ್ಗೆ ಹೇಳಿವೆ. ಕಾರ್ಯಕ್ಷಮತೆಯ ವಿಭಾಗದಲ್ಲಿ, OnePlus Turbo ಗೆ Snapdragon 7s Gen 4 ಪ್ರೊಸೆಸರ್ ನೀಡುವ ಸಾಧ್ಯತೆ ಇದೆ. ಜೊತೆಗೆ, ಇನ್ನೊಂದು ಹೈ-ಎಂಡ್ ರೂಪಾಂತರವನ್ನು Snapdragon 8s Gen 4 ಚಿಪ್‌ಸೆಟ್‌ನೊಂದಿಗೆ OnePlus ಪರೀಕ್ಷಿಸುತ್ತಿದೆ ಎಂಬ ವರದಿಗಳೂ ಹೊರಬಿದ್ದಿವೆ. ಇದರಿಂದ OnePlus Turbo ಸರಣಿಯು ವಿಭಿನ್ನ ಬಳಕೆದಾರ ವರ್ಗಗಳನ್ನು ಗುರಿಯಾಗಿರಿಸಬಹುದು ಎಂಬ ಅಂದಾಜು ಮಾಡಬಹುದು.

ಬ್ಯಾಟರಿ ಸಾಮರ್ಥ್ಯವು OnePlus Turbo ಫೋನಿನ ಪ್ರಮುಖ ಹೈಲೈಟ್ ಆಗಬಹುದು. ಲೀಕ್ ಮಾಹಿತಿಯ ಪ್ರಕಾರ, ಈ ಫೋನ್‌ನಲ್ಲಿ 9,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇರಲಿದೆ. ಜೊತೆಗೆ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವೂ ದೊರೆಯುವ ಸಾಧ್ಯತೆ ಇದೆ. ಇದು ದೀರ್ಘಕಾಲ ಗೇಮಿಂಗ್ ಮಾಡುವವರು ಮತ್ತು ಹೆಚ್ಚಿನ ಬ್ಯಾಟರಿ ಬ್ಯಾಕ್‌ಅಪ್ ನಿರೀಕ್ಷಿಸುವ ಬಳಕೆದಾರರಿಗೆ ದೊಡ್ಡ ಲಾಭವಾಗಲಿದೆ. ಇನ್ನು OnePlus Turbo ಅನ್ನು 2026ರ ಮಾರ್ಚ್ ವೇಳೆಗೆ ಅಧಿಕೃತವಾಗಿ ಪರಿಚಯಿಸುವ ಸಾಧ್ಯತೆ ಇದೆ. ಮಾರ್ಚ್ 2ರಿಂದ 5ರವರೆಗೆ ನಡೆಯುವ Mobile World Congress (MWC) ಕಾರ್ಯಕ್ರಮದ ವೇಳೆ OnePlus ಈ ಫೋನ್ ಅನ್ನು ಘೋಷಿಸಬಹುದು ಎಂಬ ಊಹೆಯೂ ಇದೆ.

ಕೆಲವು ವರದಿಗಳು 'Turbo' ಎಂಬ ಹೆಸರು ಚೀನಾದ ಮಾರುಕಟ್ಟೆಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ ಎಂದು ಹೇಳಿವೆ. ಹೀಗಾದಲ್ಲಿ, ಭಾರತದಲ್ಲಿ ಮಾರುಕಟ್ಟೆಯ ಇದೇ ಸ್ಮಾರ್ಟ್‌ಫೋನ್ ಅನ್ನು OnePlus Nord ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ಒಟ್ಟಾರೆಯಾಗಿ, ಗೇಮಿಂಗ್ ಫೋಕಸ್, ದೊಡ್ಡ ಬ್ಯಾಟರಿ, ಹೈ ರಿಫ್ರೆಶ್ ರೇಟ್ AMOLED ಡಿಸ್‌ಪ್ಲೇ ಮತ್ತು ಶಕ್ತಿಶಾಲಿ ಪ್ರೊಸೆಸರ್‌ಗಳೊಂದಿಗೆ ಬರುವ OnePlus Turbo, ಫೋನ್ 2026ರಲ್ಲಿ ಮಧ್ಯಮ-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ದೊಡ್ಡ ಸ್ಪರ್ಧೆ ಸೃಷ್ಟಿಸುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OnePlus is gearing up to launch its new gaming-focused smartphone, the OnePlus Turbo, with a China-first debut expected. Leaked live images shared by Android Headlines reveal a design similar to the OnePlus 15 series, dual rear cameras, glossy finish, and bold color options, hinting at an aggressively priced gaming-centric phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+