ಭಾರತದಲ್ಲಿ ‘ಒನ್‌ಪ್ಲಸ್ 6’ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಫಿಕ್ಸ್!..ಇಲ್ಲಿದೆ ಫುಲ್ ಡೀಟೇಲ್ಸ್!!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಕುತೋಹಲ ಹುಟ್ಟಿಹಾಕಿರುವ 'ಒನ್‌ಪ್ಲಸ್ 6' ಸ್ಮಾರ್ಟ್‌ಪೋನಿನ ವಿಶೇಷ ಅವತರಣಿಕೆ ಸ್ಮಾರ್ಟ್‌ಫೋನ್ ಮೇ 17 ರಂದು ಮುಂಬೈನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಒನ್ಪ್ಲಸ್ ಕಂಪೆನಿ ಬುಧವಾರ ಅಧಿಕೃತ ಹೇಳಿಕೆ ನೀಡಿದ್ದು, ಈ ಬಗ್ಗೆ ಟೀಸರ್ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.
ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್‌ಗಳ ಬಿಡುಗಡೆಗೂ ಮುನ್ನವೇ ಒನ್‌ಪ್ಲಸ್ ಕಂಪೆನಿ ತನ್ನ ವಿಶೇಷ ಸ್ಟಾರ್ ವಾರ್ಸ್ ಲಿಮಿಟೆಡ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ವಿಶೇಷ ಆವೃತ್ತಿಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್, ಹೊಸ ಬಣ್ಣದಲ್ಲಿ ವಿನ್ಯಾಸಗೊಳಿಸಿದ ವಾಲ್‌ಪೇಪರ್‌ಗಳು ಮತ್ತು ಥೀಮ್‌ಗಳನ್ನು ಹೊಂದಿರುವುದನ್ನು ನಾವು ನಿರೀಕ್ಷಿಸಬಹುದಾಗಿದೆ.

'ಒನ್ ಪ್ಲಸ್ 6' ಸ್ಮಾರ್ಟ್‌ಫೋನ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ 999 ರೂ. ಬೆಲೆಯ ಗಿಫ್ಟ್ ವೋಚರ್, ಕ್ಯಾಶ್ ಕೆನಾನ್, ಕಂಪೆನಿಯ ಬ್ರಾಂಡೆಡ್ ಬ್ಯಾಗ್, ಟೀ-ಶಾರ್ಟ್, ನೋಟ್‌ಬುಕ್ ಎಂದು ನೀಡಲಾಗುತ್ತದೆ. ಮತ್ತು ಕಾರ್ಯಕ್ರಮವನ್ನು ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದೆಂದು ಎಂದು ಒನ್ಪ್ಲಸ್ ಕಂಪೆನಿ ತಿಳಿಸಿದೆ.
ಚೀನಾ ದೇಶದ ಶಿಯೋಮಿ ಮತ್ತು ಒನ್ ಪ್ಲಸ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್‌ಗಳನ್ನು ನೀಡಲು ಹೊಸ ಮಾರಾಟ ನೀತಿ ಅನುಸರಿಸುತ್ತಿರುವದರಿಂದ ಈ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಎಲ್ಲರ ಗಮನ ಸೆಳೆಯುತ್ತಿದೆ. ಹಾಗಾದರೆ, 'ಒನ್ ಪ್ಲಸ್ 6' ಸ್ಮಾರ್ಟ್‌ಪೋನ್ ಫೀಚರ್ಸ್ ಯಾವುವು ಎಂಬೆಲ್ಲಾ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ಒನ್‌ಪ್ಲಸ್ 6 ವಿನ್ಯಾಸ ಹೇಗಿದೆ?
ಇದೇ ಮೊದಲ ಬಾರಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಮೊದಲ ಪೋಟೊ ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಐಫೋನ್ 10 ಮಾದರಿಯ ಡಿಸ್‌ಪ್ಲೇ ನೋಚ್ ,ವುಡನ್ ಬ್ಯಾಕ್ ಪ್ಯಾನಲ್ ವಿನ್ಯಾವನ್ನು ಹೊಂದಿರುವ ಒನ್‌ಪ್ಲಸ್ 6 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಮತ್ತು 3.5mm ಆಡಿಯೋ ಜಾಕ್ ಕೂಡ ಸ್ಮಾರ್ಟ್‌ಫೋನಿನಲ್ಲಿ ಇರಲಿದೆ.!!

ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್!!
ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಹೇಳಿರುವಂತೆ ಒನ್‌ಪ್ಲಸ್ 6 ಫೋನಿನಲ್ಲಿ ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ.! ಪ್ರಸ್ತುತ ಅತ್ಯುತ್ತಮ ಮೊಬೈಲ್ ಚಿಪ್‌ಸೆಟ್ ಎಂದು ಹೆಸರಾಗಿರುವ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅನ್ನು ಗ್ರಾಹಕರು ಕೂಡ ಎದುರು ನೋಡುತ್ತಿದ್ದಾರೆ.!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಫೇಸ್‌ಐಡಿ ಫೀಚರ್ ಅನ್ನು ಹೊಂದಿದ್ದರೂ ಸಹ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಉತ್ತಮದರ್ಜಿಗೇರಿಸಲು ಒನ್‌ಪ್ಲಸ್ ಮುಂದಾಗಿದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ತರುವ ಸೂಚನೆಯನ್ನು ಒನ್‌ಪ್ಲಸ್ ಕಂಪೆನಿ ನೀಡಿದೆ.!!

ವಾಟರ್‌ಪ್ರೂಫ್ ಚಾಲೆಂಜ್!!
ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯದ್ಬುತ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರಲಿದೆ.! ಪ್ರಸ್ತುತ ಇರುವ ವಾಟರ್‌ಪ್ರೂಫ್ ತಂತ್ರಜ್ಞಾನಕ್ಕಿಂತಲೂ ಅತ್ಯುತ್ತಮ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಒನ್‌ಪ್ಲಸ್ ಕಂಪೆನಿ ಹೆಳಿದೆ.!!

ಗಾಜಿನ ಹಿಂಭಾಗವನ್ನು ಹೊಂದಿದೆ ಒನ್‌ಪ್ಲಸ್ 6!!
ಒನ್‌ಪ್ಲಸ್ ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಾಗಿನಿಂದಲೂ ಯಾವಾಗಲೂ ಸುಂದರ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಹಾಗಾಗಿ, ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರಿಯರು ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ವಿನ್ಯಾಸದ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ನಿರೀಕ್ಷೆಯನ್ನು ಹೊತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಪ್ರೀಮಿಯಂ ವಿನ್ಯಾಸದಲ್ಲಿ ಗಾಜಿನ ಹಿಂಭಾಗವನ್ನು ಹೊಂದಿದೆ ಎಂದು ಪೀಟ್ ಲೌ ಅವರು ತಿಳಿಸಿದ್ದಾರೆ.


5 ಪದರದ ನ್ಯಾನೋಟೆಕ್ ಕೋಟಿಂಗ್!!
ಪ್ರೀಮಿಯಂ ವಿನ್ಯಾಸದಲ್ಲಿ ಗಾಜಿನ ಹಿಂಭಾಗವನ್ನು ಹೊಂದಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಮೂರು ಸಾಮಾನ್ಯ ನ್ಯಾನೋಟೆಕ್ ಪದರಗಳ ಬದಲಾಗಿ 5 ಪದರದ ನ್ಯಾನೋಟೆಕ್ ಕೋಟಿಂಗ್ ಹೊಂದಿದೆ ಎಂದು ತಿಳಿದುಬಂದಿದೆ. ಹೆಚ್ಚುವರಿ ಪದರಗಳು ಸಾಧನದ ಹಿಂಭಾಗವನ್ನು ಆವರಿಸಿರುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಪ್ರೀಮಿಯಂ ನೋಟವನ್ನು ಮಾತ್ರವಲ್ಲದೇ, ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುವುದನ್ನು ಕಾಣಬಹುದಾಗಿದೆ.


Click it and Unblock the Notifications