'ಒನ್‌ಪ್ಲಸ್ 6T' ಪ್ರೀ ಬುಕ್ಕಿಂಗ್ ಮಾಡಲು ಜನರು ಮುಗಿಬೀಳುತ್ತಿರುವುದು ಏಕೆ?

|

ಒನ್‌ಪ್ಲಸ್ ಕಂಪೆನಿಯ ಬಹುನಿರೀಕ್ಷಿತ 'ಒನ್‌ಪ್ಲಸ್ 6T' ಸ್ಮಾರ್ಟ್‌ಫೋನ್ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಒನ್‌ಪ್ಲಸ್ 6T ಬಿಡುಗಡೆಗೂ ಮುಂಚೆಯೇ ಮತ್ತೊಮ್ಮೆ ಕಂಪನವನ್ನು ಉಂಟುಮಾಡಿದೆ. ಏಕೆಂದರೆ, ಅಮೆಜ್‌ನ್‌ನಲ್ಲಿ ಈಗಾಗಲೇ 600 ಕೋಟಿಗೂ ಹೆಚ್ಚು ಮೊತ್ತದ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಪ್ರೀ ಬುಕ್ ಕಂಡಿವೆ. ಸ್ಮಾರ್ಟ್‌ಫೋನ್ ಅನ್ನು ಪ್ರೀ ಬುಕ್ ಮಾಡುವವರಿಗೆ 1490 ರೂ.ಬೆಲೆಯ ಟೈಪ್-ಸಿ ಬುಲೆಟ್ಸ್ ಇಯರ್‌ಫೋನ್ ಜೊತೆಗೆ ಹಲವು ಕೊಡುಗೆಗಳು ಈಗ ಉಚಿತವಾಗಿ ಸಿಗುತ್ತಿವೆ.

ಹೌದು, ಅಮೆಜಾನ್ ಇಂಡಿಯಾ (ಅಮೆಜಾನ್.ಇನ್)ದಲ್ಲಿ ನೀವು ಈಗಲೂ 'ಒನ್‌ಪ್ಲಸ್ 6T' ಪ್ರೀ ಬುಕ್ ಮಾಡುವ ಅವಕಾಶವಿದ್ದು, ಪ್ರೀ ಬುಕ್ಕಿಂಗ್ ಕೊಡುಗೆಗಳಾಗಿ 1490 ರೂ.ಬೆಲೆಯ ಟೈಪ್-ಸಿ ಬುಲೆಟ್ಸ್ ಇಯರ್‌ಫೋನ್, 1000 ರೂಪಾಯಿಗಳ ಪ್ರೀಬುಕ್ ಗಿಫ್ಟ್ ಓಚರ್ ಹಾಗೂ ಅಮೆಜಾನ್ ಪೇ ಬ್ಯಾಲೆನ್ಸ್ ನಿಂದ 500ರೂ. ಇನ್‌ಸ್ಟಂಟ್ ಡಿಸ್ಕೌಂಟ್ಸ್ ದೊರೆಯಲಿದೆ. ಒಮ್ಮೆ ಪ್ರೀ ಬುಕ್ ಮಾಡಿದ ನಂತರ ಸ್ಮಾರ್ಟ್‌ಫೋನ್ ಮೇಲೆ ಮತ್ತೆ 2000 ವರೆಗೂ ಅಡಿಷನಲ್ ಡಿಸ್‌ಕೌಂಟ್ಸ್ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.

'ಒನ್‌ಪ್ಲಸ್ 6T' ಪ್ರೀ ಬುಕ್ಕಿಂಗ್ ಮಾಡಲು ಜನರು ಮುಗಿಬೀಳುತ್ತಿರುವುದು ಏಕೆ?

ಅಮೆಜಾನ್‌ ಇಂಡಿಯಾದಲ್ಲಿ ಬುಕ್ಕಿಂಗ್ ಆರಂಭವಾದ ಮೊದಲ 36 ಗಂಟೆಗಳಲ್ಲೇ 400 ಕೋಟಿ ಮೊತ್ತದ 'ಒನ್‌ಪ್ಲಸ್ 6T' ಸ್ಮಾರ್ಟ್‌ಫೋನ್‌ಗಳು ಪ್ರೀ ಬುಕ್ ಆದ ನಂತರ ಕಂಪೆನಿ ಮತ್ತೊಂದು ದೊಡ್ಡ ಕೊಡುಗೆಯನ್ನು ಘೋಷಿಸಿದೆ. ಒನ್‌ಪ್ಲಸ್ 6T ಖರೀದಿದಾರರಿಗೆ ಮೂರು ತಿಂಗಳವರೆಗೆ ನೋ ಕಾಸ್ಟ್ ಇಎಮ್‌ಐ ಹಾಗೂ ಒಂದು ವರ್ಷದ ಕಾಲ ಸ್ಮಾರ್ಟ್‌ಫೋನ್ ಪ್ರೊಟೆಕ್ಷನ್ ಗ್ಯಾರಂಟಿಯನ್ನು ಸಹ ನೀಡಿದೆ. ಹಾಗಾದರೆ, ಬಿಡುಗಡೆಗೂ ಮುನ್ನವೇ 'ಒನ್‌ಪ್ಲಸ್ 6T' ಹುಟ್ಟಿಹಾಕಿರುವ ಹವಾ ಎಂತದ್ದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಒನ್‌ಪ್ಲಸ್‌ 6Tಯನ್ನು ನೀವೇ ಮೊದಲು ಪಡೆಯಿರಿ

ಒನ್‌ಪ್ಲಸ್‌ 6Tಯನ್ನು ನೀವೇ ಮೊದಲು ಪಡೆಯಿರಿ

ಒನ್‌ಪ್ಲಸ್‌ ಕಂಪನಿಯು ಮತ್ತೊಂದು ರೀತಿಯಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ವೈಭವೀಕರಿಸಿದ್ದು, ಅಧಿಕೃತ ಬಿಡುಗಡೆಗೂ ಮುಂಚೆಯೇ ಅಭಿಮಾನಿಗಳು OnePlus 6Tಯನ್ನು ಪ್ರೀಬುಕ್‌ ಮಾಡಬಹುದೆಂದು ಕಂಪನಿ ಘೋಷಿಸಿದೆ. ಈ ಮೂಲಕ ನೀವು ಸ್ಮಾರ್ಟ್‌ಫೋನ್‌ನ್ನು ಮೊದಲು ಖರೀದಿಸುವುದು ಮಾತ್ರವಲ್ಲದೇ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಿರಿ. ಅಮೆಜಾನ್‌ ಇಂಡಿಯಾ, ಕ್ರೋಮಾ ಔಟ್‌ಲೇಟ್‌ಗಳಲ್ಲಿ ಮತ್ತು ಒನ್‌ಪ್ಲಸ್‌ನ ಎಕ್ಸ್‌ಕ್ಲೂಸಿವ್‌ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಅಕ್ಟೋಬರ್‌ 9, ಮಧ್ಯಾಹ್ನ 12 ಗಂಟೆಯಿಂದ ಪ್ರೀ ಬುಕ್ಕಿಂಗ್‌ ಪ್ರಾರಂಭವಾಗಿದೆ. ಇನ್ನು ಮೂರು ದಿನಗಳು ಮಾತ್ರ ಪ್ರೀ ಬುಕ್ಕಿಂಗ್‌ಗೆ ಲಭ್ಯವಿದೆ.

ಅನುಭವಿಸಿ ನಂತರ ಖರೀದಿಸಿ!

ಅನುಭವಿಸಿ ನಂತರ ಖರೀದಿಸಿ!

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ನಂತರ ನವೆಂಬರ್ 2, 2018 ರಂದು ದೇಶದ 12 ಸ್ಥಳಗಳಲ್ಲಿ 9 ನಗರಗಳಲ್ಲಿ ಸ್ಮಾರ್ಟ್‌ಪೋನ್ ಎಕ್ಸ್‌ಪೀರಿಯನ್ಸ್ ಶೋ ನಡೆಸುವುದಾಗಿ ಘೋಷಿಸಿದೆ. ಗ್ರಾಹಕರು ಹೊಸ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಳಸಿದ ನಂತರ ನಿರ್ಧಾರ ತೆಗೆದುಕೊಳ್ಳಲು ಈ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ಬೆಂಗಳೂರು, ಮುಂಬೈ, ಪುಣೆ, ಕೊಲ್ಕತ್ತಾ, ದೆಹಲಿ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 9 ನಗರಗಳಲ್ಲಿ ಬೆಳಗ್ಗೆ 11:00 ರಿಂದ ರಾತ್ರಿ 10:00 ರವರೆಗೆ ಒನ್‌ಪ್ಲಸ್‌ 6T ಎಕ್ಸ್‌ಪೀರಿಯನ್ಸ್ ಕಾರ್ಯಕ್ರಮದಲ್ಲಿ ಒನ್‌ಪ್ಲಸ್‌ 6T ಸಾಧನ ಪ್ರದರ್ಶನವಾಗಲಿದೆ.

ಪ್ರೀ ಬುಕ್ಕಿಂಗ್ ಆಫರ್ ಪಡೆಯುವುದು ಹೇಗೆ..?

ಪ್ರೀ ಬುಕ್ಕಿಂಗ್ ಆಫರ್ ಪಡೆಯುವುದು ಹೇಗೆ..?

ಅಕ್ಟೋಬರ್ 9 ಅಂದರೆ, ಇಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್‌ನಲ್ಲಿ ಪ್ರಾರಂಭವಾಗಿರುವ ಪ್ರೀ ಬುಕ್ಕಿಂಗ್‌ನಲ್ಲಿ ₹1000 ಮೌಲ್ಯದ ಇ-ಗಿಫ್ಟ್‌ ಕಾರ್ಡ್‌ನ್ನು ಖರೀದಿಸಬೇಕಾಗಿದ್ದು, ಇದು ನವೆಂವರ್‌ 2, 2018ರಂದು ನಡೆಯುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಮೊದಲ ಸೇಲ್‌ನಲ್ಲಿ ಬಳಕೆಯಾಗಲಿದೆ. ಇದು ಉತ್ತಮವಾಗಿದ್ದು, ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಮುಂಚಿತವಾಗಿ ಬುಕ್ ಮಾಡುವ ಗ್ರಾಹಕರು ₹1490 ಮೌಲ್ಯದ ಒನ್‌ಪ್ಲಸ್‌ನ ಎಲ್ಲಾ ಹೊಸ ಟೈಪ್‌-ಸಿ ಬುಲೆಟ್‌ ಇಯರ್‌ಫೋನ್‌ಗಳನ್ನು ಪಡೆಯಲಿದ್ದು, ಜತೆಗೆ ಅಮೆಜಾನ್‌ ಪೇ ಬ್ಯಾಲೆನ್ಸ್‌ನಲ್ಲಿ ಹೆಚ್ಚುವರಿ ₹500 ಸೇರಲಿದೆ. ಇದರಿಂದ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಪ್ರೀ ಬುಕ್‌ ಮಾಡಿದ ಗ್ರಾಹಕರಿಗೆ ಪರಿಣಾಮಕಾರಿಯಾಗಿ ₹1,000 ಗಿಫ್ಟ್‌ ಕಾರ್ಡ್‌ನ ಮೌಲ್ಯ ₹1,500 ಆಗುತ್ತದೆ.

ಅತ್ಯಾಧುನಿಕ ಸ್ಕ್ರೀನ್ ಅನ್‌ಲಾಕ್‌

ಅತ್ಯಾಧುನಿಕ ಸ್ಕ್ರೀನ್ ಅನ್‌ಲಾಕ್‌

ಒನ್‌ಪ್ಲಸ್‌ ಹೀಗಾಗಲೇ ಖಚಿತಪಡಿಸಿರುವಂತೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ತಂತ್ರಜ್ಞಾನವನ್ನು ಹೊಂದಿರಲಿದೆ. ಕಂಪೆನಿಯು ಬಹು ನಿರೀಕ್ಷಿತ ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿ ಭವಿಷ್ಯದ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನದ ಸುಳಿವು ನೀಡುವ ಸಣ್ಣ ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ ಒನ್‌ಪ್ಲಸ್‌ ಹೊಸ ಫೀಚರ್‌ ಬಗ್ಗೆ ಕುತೂಹಲ ಮೂಡಿಸಿದೆ. ಈ ತಂತ್ರಜ್ಞಾನ ಸ್ಮಾರ್ಟ್‌ಫೋನ್‌ನ್ನು ಹೆಚ್ಚು ಸುರಕ್ಷಿತಗೊಳಿಸಿದೆ. ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದು ಗೌಪ್ಯತೆಗಾಗಿರುವ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

ಯಾವಾಗಲೂ ನಿಮ್ಮನ್ನು ಸಕ್ರಿಯರನ್ನಾಗಿಸುವ ಬ್ಯಾಟರಿ

ಯಾವಾಗಲೂ ನಿಮ್ಮನ್ನು ಸಕ್ರಿಯರನ್ನಾಗಿಸುವ ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ 3300 mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್‌ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ. ಹಾಗಾದರೆ ತಡವೇಕೆ> ಈಗಲೇ ಸ್ಮಾರ್ಟ್‌ಫೋನ್ ಅನ್ನು ಬುಕ್ ಮಾಡಿಬಿಡಿ.

Most Read Articles
Best Mobiles in India

English summary
OnePlus will hold pop-ups in 9 cities across 12 locations in the country on November 2, 2018, two days after the flagship has been launched. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more