Home
ಮೊಬೈಲ್

ಈ OnePlus ಫೋನ್ ಖರೀದಿಸಿದ್ರೆ.. 28,000 ರೂ.ನ OnePlus Watch 2 ಉಚಿತ

ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ಪ್ರಸ್ತುತ ಒನ್‌ಪ್ಲಸ್ ಕಂಪನಿಯು ತನ್ನ ಫೋಲ್ಡಬಲ್ ಸ್ಮಾರ್ಟ್‌ಫೋನ್ OnePlus Open ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್‌ಗಳನ್ನು ಘೋಷಿಸಿದೆ. ನೀವು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ (OnePlus Smartphones) ಪ್ರಿಯರಾಗಿದ್ರೆ ಈ OnePlus ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಆ ಮೂಲಕ ಬರೋಬ್ಬರಿ 43,000 ರೂ.ಗಳ ರಿಯಾಯಿತಿಗಳನ್ನು ಪಡೆಯಬಹುದು. Vivo X Fold 3 Pro ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರ ಈ ರಿಯಾಯಿತಿ ಆಫರ್‌ಗಳನ್ನು ಘೋಷಿಸಲಾಗಿದೆ ಎನ್ನುವುದು ವಿಶೇಷ ಸಂಗತಿಯಾಗಿದೆ.

ಹೌದು, ಒನ್‌ಪ್ಲಸ್ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದೆ. ತನ್ನ ವಿಶಿಷ್ಟ ಹಾಗೂ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುವ ಈ ಸ್ಮಾರ್ಟ್‌ಫೋನ್‌ ಸಂಸ್ಥೆ, ಆಗಾಗ ನೂತನ ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಈ ಫೋನ್‌ಗಳೆಲ್ಲವೂ ಗ್ರಾಹಕರ ಹಾಟ್‌ ಫೇವರಿಟ್‌ ಆಗಿವೆ. ಕೆಲವೊಮ್ಮೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತದೆ. ಇದೀಗ, OnePlus Open ಸ್ಮಾರ್ಟ್‌ಫೋನ್ ಮೆಲೆಯೂ ರಿಯಾಯಿತಿ ಘೋಷಿಸಿದೆ.

ಈ OnePlus ಫೋನ್ ಖರೀದಿಸಿದ್ರೆ.. 28,000 ರೂ.ನ OnePlus Watch 2 ಉಚಿತ

OnePlus Open ಫೋನ್‌ ಆಫರ್‌ಗಳು

OnePlus Open ಸ್ಮಾರ್ಟ್‌ಫೋನ್‌ನಲ್ಲಿ ಈ ಕೊಡುಗೆಗಳು ಈ ಜೂನ್ 4 ರಿಂದ ಪ್ರಾರಂಭವಾಗಿದೆ. ಈ ಆಫರ್‌ಗಳು ಜೂನ್ 30 ರವರೆಗೆ ಲಭ್ಯವಿರುತ್ತದೆ. OnePlus Open ಮೊಬೈಲ್‌ ಅನ್ನು ಖರೀದಿಸುವ ಆಸಕ್ತ ಗ್ರಾಹಕರು OnePlus ಘೋಷಿಸಿದಂತೆ ಎಲ್ಲಾ ಇಕಾಮರ್ಸ್ ಸ್ಟೋರ್‌ಗಳ ಮೂಲಕ OnePlus Watch 2 ಅನ್ನು ಉಚಿತವಾಗಿ ಪಡೆಯಬಹುದು. ಪ್ರಸ್ತುತ ಈ OnePlus Open ಸ್ಮಾರ್ಟ್‌ಫೋನ್ ಬೆಲೆ ಭಾರತದಲ್ಲಿ 1,39,999 ರೂ. ಇದೆ. ಇದರಲ್ಲಿ ನೀವು 27,999 ರೂ. ಮೌಲ್ಯದ ಈ ವಾಚ್‌ ಫ್ರೀಯಾಗಿ ನೀಡಲಾಗುತ್ತದೆ.

ಇದರ ಜೊತೆಗೆ ICICI, HDFC ಬ್ಯಾಂಕ್, OneCard, BOBCARD ಮತ್ತು IDFC ಫಸ್ಟ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ OnePlus Open ಖರೀದಿಸುವಾಗ 5,000 ರೂ. ಬ್ಯಾಂಕ್ ರಿಯಾಯಿತಿಯನ್ನು ನೀಡಲಾಗುತ್ತದೆ. OnePlus Open ಖರೀದಿಸಲು ಬಯಸುವವರು Amazon, OnePlus Online, OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಬಜಾಜ್ ಎಲೆಕ್ಟ್ರಾನಿಕ್ಸ್‌ನಂತಹ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ 12 ತಿಂಗಳವರೆಗೆ ಯಾವುದೇ ಶುಲ್ಕವಿಲ್ಲದೆ EMI ಸೌಲಭ್ಯವನ್ನು ಪಡೆಯಬಹುದು.

OnePlus Open ಫೀಚರ್‌ಗಳ ವಿವರಗಳು

OnePlus Open 2440 x 2268 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 7.82-ಇಂಚಿನ ProXDR ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 2,800 nits ಬ್ರೈಟ್‌ನೆಸ್ ಮತ್ತು 1440Hz PMW ಫ್ರೀಕ್ವೆನ್ಸಿ ಡಿಮ್ಮಿಂಗ್ ಅನ್ನು ಹೊಂದಿದೆ. ಹೊರಭಾಗದಲ್ಲಿ, ಇದು 2384×1116 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಡೈನಾಮಿಕ್ ಸ್ಕ್ರೀನ್ ರಿಫ್ರೆಶ್ ರೇಟ್, 2,800 nits ಬ್ರೈಟ್‌ನೆಸ್ ಮತ್ತು 1440Hz PMW ಫ್ರೀಕ್ವೆನ್ಸಿ ಮಬ್ಬಾಗಿಸುವುದರೊಂದಿಗೆ 6.31-ಇಂಚಿನ ProXDR ಕವರ್ ಡಿಸ್‌ಪ್ಲೇಯನ್ನು ಹೊಂದಿದೆ.

ಈ ಕವರ್ ಡಿಸ್ಪ್ಲೇ ಅನ್ನು ಸೆರಾಮಿಕ್ ಶೀಲ್ಡ್‌ನಿಂದ ರಕ್ಷಿಸಲಾಗಿದೆ. ಅಲ್ಲದೆ, ಮುಖ್ಯ ಪ್ರದರ್ಶನವು ಅಲ್ಟ್ರಾ-ತೆಳುವಾದ ಗಾಜಿನನ್ನು ಹೊಂದಿದೆ. ಈ ಸಾಧನವು ಫ್ಲೆಕ್ಸ್ ಹಿಂಜ್ ವಿನ್ಯಾಸವನ್ನು ಹೊಂದಿದೆ. ಇದು ಡಿಸ್ಲ್ಪೇನ ಎರಡು ಭಾಗಗಳನ್ನು ವಾಟರ್‌ಡ್ರಾಪ್ ಆಕಾರಕ್ಕೆ ಮಡಚುತ್ತದೆ. ಎರಡು ಭಾಗಗಳ ನಡುವಿನ ಕ್ರೀಸ್ ಮತ್ತು ಅಂತರವನ್ನು ಕಡಿಮೆ ಮಾಡುತ್ತದೆ. ಟೈಟಾನಿಯಂ ಮಿಶ್ರಲೋಹ, ಜಿರ್ಕೋನಿಯಮ್ ಅಮಾರ್ಫಸ್ ಮಿಶ್ರಲೋಹ ಮತ್ತು ಕಾರ್ಬನ್ ಫೈಬರ್ ಬಳಸಿ ವಿನ್ಯಾಸಗೊಳಿಸಲಾದ ಕೀಲುಗಳಿಂದ ಫೋನ್ ಅನ್ನು ತಯಾರಿಸಲಾಗಿದೆ.

OnePlus Openನ ಪ್ರೊಸೆಸರ್ ಏನಿದೆ?

ಇನ್ನೂ, OnePlus Open ಫೋನ್ Qualcomm Snapdragon 8 Gen 2 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್‌ನಿಂದ ಚಾಲಿತವಾಗಿದೆ. ಇದು Android 13 ಆಧಾರಿತ Oxygen OS ನಲ್ಲಿ ಕೆಲಸ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಹಗುರವಾಗಿ ಮತ್ತು ಹೆಚ್ಚು ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ನೀವು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ ಪ್ರಿಯರಾಗಿದ್ರೆ ಈ ಫೋನ್‌ ನಿಮಗೆ ಪರ್ಫೆಕ್ಟ್ ಆಯ್ಕೆಯಾಗಿದೆ.

ಭರ್ಜರಿ ಆಫರ್‌ ಘೋಷಣೆಗೆ ಕಾರಣವೇನು?

ಇತ್ತೀಚೆಗೆ ವಿವೋ ಕಂಪನಿ ತನ್ನ ಮೊದಲ ಮಡಚಬಹುದಾದ Vivo X Fold 3 Pro ಮೊಬೈಲ್‌ ಬಿಡುಗಡೆ ಮಾಡಿದೆ. ಈ ಫೋನ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಓಪನ್‌ ಜೊತೆಗೆ ಪೈಪೋಟಿ ನಡೆಸುತ್ತಿದೆ. ಬೆಲೆಯನ್ನು ಗಮನಿಸಿದಾಗ Vivo X Fold 3 Pro ಒನ್‌ಪ್ಲಸ್‌ ಓಪನ್‌ ಸ್ಮಾರ್ಟ್‌ಫೋನ್‌ ಜೊತೆಗೆ ನೇರವಾಗಿ ಸ್ಪರ್ಧೆ ಮಾಡುವಂತಿದೆ. ಹೀಗಾಗಿ, ಒನ್‌ಪ್ಲಸ್ ಕಂಪನಿಯು ತನ್ನ OnePlus Open ಮೊಬೈಲ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್‌ಗಳನ್ನು ಘೋಷಿಸಿದೆ.

Best Mobiles in India

English summary
OnePlus has announced huge discount offers on its foldable smartphone OnePlus Open. You can avail discounts of Rs 43,000 on the purchase of OnePlus foldable smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+