OPPO A3 5G: ಭಾರತಕ್ಕೆ ಹೊಸ 5G ಫೋನ್ ಎಂಟ್ರಿ; ಅದೂ ಕಡಿಮೆ ಬೆಲೆಗೆ!
ನೀವು ಬಜೆಟ್ ಬೆಲೆಯಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ ನಿಮಗಿದೆ ಒಳ್ಳೆಯ ಸುದ್ದಿ. ಸದ್ದಿಲ್ಲದೇ, ಕಡಿಮೆ ಬೆಲೆಯಲ್ಲಿ ಒಪ್ಪೋ 5G ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ಪ್ರಸಿದ್ಧ ಟೆಕ್ ಬ್ರ್ಯಾಂಡ್ ಒಪ್ಪೋ (Oppo) ಭಾರತದಲ್ಲಿ ಹೊಸ ಮೊಬೈಲ್ ಅನ್ನು ಲಾಂಚ್ ಮಾಡಿದೆ. ಇದುವೇ ಒಪ್ಪೋ A3 5G (Oppo A3 5G) ಸ್ಮಾರ್ಟ್‌ಫೋನ್. ಕಂಪನಿಯು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಈ ಫೋನನ್ನು ಪರಿಚಯಿಸಿದೆ. ಈ ಹೊಸ ಫೋನಿನ ಬೆಲೆ, ಆಫರ್‌ಗಳು ಮತ್ತು ಫೀಚರ್ಸ್ ತಿಳಿಯೋಣ ಬನ್ನಿ.
ಒಪ್ಪೋ A3 5G (Oppo A3 5G) ಫೋನ್ 6.67 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸೆರ್, 6GB ವರ್ಚುವಲ್ RAM ಮತ್ತು 128GB ಸ್ಟೋರೇಜ್ ಒಳಗೊಂಡಿದೆ. ಇದು 50MP ಮುಖ್ಯ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ, 5100 mAh ಬ್ಯಾಟರಿ ಹಾಗೂ 45W ಸೂಪರ್‌ವೋಕ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಭಾರತಕ್ಕೆ ಎಂಟ್ರಿ ಕೊಟ್ಟಿದೆ.

ಒಪ್ಪೋ A3 5G ಬೆಲೆ ಮತ್ತು ಆಫರ್
ಒಪ್ಪೋ A3 5G ಫೋನ್ ಓಷನ್ ಬ್ಲೂ ಮತ್ತು ನೆಬ್ಯುಲಾ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯು ಕೇವಲ 6GB RAM ಮತ್ತು 128GB ಸ್ಟೋರೇಜ್‌ನಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಇದರ ಬೆಲೆ 15,999 ರೂ. ಆಗಿದೆ. ನೀವು Oppo ಇಂಡಿಯಾ ಇ-ಸ್ಟೋರ್‌ನಿಂದ ಈ ಫೋನನ್ನು ಖರೀದಿಸಬಹುದು. ಒನ್‌ಕಾರ್ಡ್, ಬ್ಯಾಂಕ್ ಆಫ್ ಬರೋಡಾ ಮತ್ತು ಎಸ್‌ಬಿಐ ಬ್ಯಾಂಕ್ ಕಾರ್ಡ್ ಪಾವತಿಗಳ ಮೇಲೆ ಶೇ.10 ರಷ್ಟು ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು.
ಒಪ್ಪೋ A3 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಒಪ್ಪೋ A3 5G ಫೋನ್ 6.67-ಇಂಚಿನ HD + LCD ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1,000 nits ಗರಿಷ್ಠ ಬ್ರೈಟ್‌ನೆಸ್ ಒಳಗೊಂಡಿದೆ.
ಪ್ರೊಸೆಸರ್: ಒಪ್ಪೋ A3 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು 1,072 MHz ನಲ್ಲಿ ಮಾಲಿ-G57 MC2 GPU ನೊಂದಿಗೆ ಬರುತ್ತದೆ. ಈ ಹೊಸ ಫೋನ್ Android 14 ಆಧಾರಿತ ColorOS 14.0.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಹೊಸ ಒಪ್ಪೋ ಫೋನ್ 6GB LPDDR4X RAM, 6GB ವರ್ಚುವಲ್ RAMನ ಸೌಲಭ್ಯವನ್ನು ಹೊಂದಿದೆ. ನೀವು 12GB RAMನ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದು 128GB eMMC 5.1 ಸ್ಟೋರೇಜ್ ಸಹ ಒಳಗೊಂಡಿದೆ.
ಕ್ಯಾಮೆರಾ: ಈ ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50MP AF ಮುಖ್ಯ ಕ್ಯಾಮೆರಾ ಮತ್ತು 2MP ಪೋಟ್ರೇಟ್ ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಒಪ್ಪೋ A3 5G ಸ್ಮಾರ್ಟ್‌ಫೋನ್ 5100mAh ಬ್ಯಾಟರಿಯನ್ನು ಹೊಂದಿದೆ. ಇದು 45W SUPERVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 165.7 × 76 × 7.7 ಮಿಮೀ ಮತ್ತು 187 ಗ್ರಾಂ ತೂಕ ಹೊಂದಿದೆ.
ಕನೆಕ್ಟಿವಿಟಿ ಆಯ್ಕೆಗಳು: ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, Wi-Fi 5, ಬ್ಲೂಟೂತ್ 5.3, USB ಟೈಪ್-C ಮತ್ತು 3.5 mm ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಮಿಲಿಟರಿ ದರ್ಜೆಯ ಆಘಾತ ಪ್ರತಿರೋಧ (MIL-STD 810H) ಮತ್ತು ಕೆಲವು ದ್ರವ ಪ್ರತಿರೋಧ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಫೇಸ್ ರೆಕಗ್ನಿಷನ್ (Face Recognition) ಬೆಂಬಲವನ್ನು ಸಹ ಹೊಂದಿದೆ.


Click it and Unblock the Notifications








