Home
ಮೊಬೈಲ್

Oppo ಅಬ್ಬರ ಶುರು..! ಸದ್ದಿಲ್ಲದೇ ಹೊಸ ಜಬರ್ದಸ್ತ್‌ ಫೋನ್ ಲಾಂಚ್: ಬೆಲೆ ಎಷ್ಟು?

ಒಪ್ಪೋ (Oppo) ಮೊಬೈಲ್‌ ಎದುರು ನೋಡುತ್ತಿರುವವರಿಗೆ ಭರ್ಜರಿ ಸಿಹಿ ಸುದ್ದಿ. ಸದ್ದಿಲ್ಲದೇ ಒಪ್ಪೋನ ಹೊಚ್ಚ ಹೊಸ ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಇದು ಒಪ್ಪೋ ಪ್ರಿಯರಿಗೆ 100 ಪರ್ಸೆಂಟ್ ಒಪ್ಪುವ ಫೋನ್ ಆಗಿದೆ. ಹೌದು, ವಿಶ್ವದ ದೈತ್ಯ ಟೆಕ್‌ ಕಂಪನಿಗಳಲ್ಲಿ ಒಂದಾಗಿರುವ ಒಪ್ಪೋ ಕಂಪನಿ, ಮತ್ತೊಮ್ಮೆ ತನ್ನ ಹೊಸ ಫೋನ್‌ನಿಂದ ಸುದ್ದಿ ಮಾಡುತ್ತಿದೆ. ಸೈಲೆಂಟ್ ಆಗಿಯೇ ಹೊಸ Oppo A3 ಅನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಇದು 50MP ಮುಖ್ಯ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಎಂಟ್ರಿಯಲ್ಲಿಯೇ ಅಬ್ಬರದ ಸೌಂಡ್‌ ಮಾಡುತ್ತಿದೆ. ಈ ನೂತನ ಮೊಬೈಲ್ ಕುರಿತ ಹೆಚ್ಚಿನ ವಿವರಗಳು ಇಲ್ಲಿದೆ.

ಒಪ್ಪೋ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಮ್ಯಾಜಿಕ್‌ ಮಾಡುವುದು ಹೊಸತೇನಲ್ಲ. ವಿಭಿನ್ನ ಪ್ರೊಸೆಸರ್‌, ಕಾರ್ಯಕ್ಷಮತೆಯ ಕಾರಣಕ್ಕೆ ಒಪ್ಪೋ ಸೈ ಎನಿಸಿಕೊಂಡಿದೆ. ಇದೀಗ, Oppo A3 ಎಂಟ್ರಿಗೆ ಟೆಕ್‌ ವಲಯ ಬೆಚ್ಚಿಬಿದ್ದಿದೆ. ಸದ್ದಿಲ್ಲದೇ ಎಂಟ್ರಿ ನೀಡಿದ್ದರೂ ವಿನೂತನ ಫೀಚರ್ಸ್‌ಗಳ ಮೂಲಕವೇ ಸದ್ದು ಮಾಡುತ್ತಿದೆ. ಪ್ರಸ್ತುತ ಚೀನಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಈ ಫೋನ್‌ ಶೀಘ್ರದಲ್ಲೇ ಭಾರತಕ್ಕೂ ಲಗ್ಗೆ ಇಡಲಿದೆ. ಹಾಗಾದ್ರೆ, Oppo A3 ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್‌ ಹೊಂದಿದೆ? ಅನ್ನೋದನ್ನು ತಿಳಿಯೋಣ ಬನ್ನಿ.

Oppo ಅಬ್ಬರ ಶುರು..! ಸದ್ದಿಲ್ಲದೇ ಹೊಸ ಜಬರ್ದಸ್ತ್‌ ಫೋನ್ ಲಾಂಚ್: ಬೆಲೆ ಎಷ್ಟು?

ಒಪ್ಪೋ ಕಳೆದ ವರ್ಷ ಪರಿಚಯಿಸಿದ್ದ Oppo A2ನ ಉತ್ತರಾಧಿಕಾರಿಯಾಗಿ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ Oppo A3 ಅನ್ನು ಘೋಷಿಸಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.59-ಇಂಚಿನ FHD+ AMOLED ಡಿಸ್ಲ್ಪೇಯನ್ನು ಹೊಂದಿದೆ. 1200nits ಬ್ರೈಟ್‌ನೆಸ್, ಪಂಚ್ ಹೋಲ್ ಒಳಗೆ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಹೊಸ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಜೊತೆಗೆ, 45W SuperVOOC ವೇಗದ ಚಾರ್ಜಿಂಗ್‌ ಬೆಂಬಲ ಪಡೆದಿದೆ.

ಒಪ್ಪೋ ಪ್ರಿಯರಿಗೆ ಒಪ್ಪುವ ಕ್ಯಾಮೆರಾ ಸೆಟಪ್

Oppo A3 ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 12GB RAM ಅನ್ನು ಹೊಂದಿದೆ ಮತ್ತು ಕಲರ್ OS 14 ನೊಂದಿಗೆ Android 14 ಅನ್ನು ರನ್ ಮಾಡುತ್ತದೆ. ಇದು 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಮತ್ತು 2 ಮೆಗಾಪಿಕ್ಸೆಲ್ ಆಳ ಸಂವೇದಕವನ್ನು ಹೊಂದಿದೆ. ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದಲ್ಲದೆ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್‌ ಪಡೆದಿದೆ.

ಈ ಫೋನ್‌ನ ಬೆಲೆ ಎಷ್ಟು? ಮಾರಾಟ ಯಾವಾಗ?

ಈ Oppo A3 ಫೋನ್‌ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 8GB+256GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಸುಮಾರು 18,365 ರೂ. (1599 ಯುವಾನ್/USD 219) ಇದೆ. 12GB+256GB ಮಾದರಿಯ ಬೆಲೆ ಅಂದಾಜು 20,660 ರೂ. (1799 yuan/USD 147) ಮತ್ತು ಟಾಪ್ ಎಂಡ್ 12GB + 512GB ರೂಪಾಂತರದ ಬೆಲೆ ಸುಮಾರು 24,110 ರೂ. ( 2099 ಯುವಾನ್/USD 288) ಇದೆ.

ಕಣ್ಣು ಕುಕ್ಕುವ ಕಲರ್‌ನಲ್ಲಿ ಲಾಂಚ್

Oppo A3 ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಟ್ರ್ಯಾಂಕ್ವಿಲಿಟಿ ಬ್ಲಾಕ್ (Tranquillity Black), ಅರೋರಾ ಪರ್ಪಲ್ (Aurora Purple) ಮತ್ತು ಮೌಂಟೇನ್ ಸ್ಟ್ರೀಮ್ ಗ್ರೀನ್ (Mountain Stream Green) ಬಣ್ಣಗಳಲ್ಲಿ ಬರುತ್ತದೆ. ಇನ್ನೂ ಈ ಹೊಸ ಫೋನ್ ಪ್ರಸ್ತುತ ಆರ್ಡರ್ ಮಾಡಲು ಲಭ್ಯವಿದೆ. ಇದೇ ಜುಲೈ 5 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.

Oppo A3 ಸಂಪೂರ್ಣ ಫೀಚರ್ಸ್‌ಗಳು

  • ಡಿಸ್ಲ್ಪೇ: 6.67-ಇಂಚಿನ (2412 x 1080 ಪಿಕ್ಸೆಲ್‌ಗಳು) ಪೂರ್ಣ HD+ AMOLED ಸ್ಕ್ರೀನ್. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ
  • ರಿಫ್ರೆಶ್ ರೇಟ್: 120Hz ರಿಫ್ರೆಶ್ ದರ, 240Hz ವರೆಗೆ ಸ್ಪರ್ಶ ಮಾದರಿ ದರ.
  • ಬ್ರೈಟ್‌ನೆಸ್: 1200nits ವರೆಗೆ ಗರಿಷ್ಠ ಬ್ರೈಟ್‌ನೆಸ್.
  • ಪ್ರೊಸೆಸರ್: Qualcomm Snapdragon 695 6nm 5G SoC ಜೊತೆಗೆ Adreno 619 GPU
  • ಸ್ಟೋರೇಜ್: 8GB / 12GB LPDDR4X RAM ಜೊತೆಗೆ 256GB / 512GB (UFS 2.2) ಸ್ಟೋರೇಜ್
  • ಮೆಮೊರಿ: ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
  • OS: ಕಲರ್ ಓಎಸ್ 14 ಜೊತೆಗೆ ಆಂಡ್ರಾಯ್ಡ್ 14
  • ಸಿಮ್: ಎರಡು ಸಿಮ್
  • ಕ್ಯಾಮೆರಾ: f/1.8 ದ್ಯುತಿರಂಧ್ರದೊಂದಿಗೆ 50MP ಹಿಂಬದಿಯ ಕ್ಯಾಮೆರಾ, LED ಫ್ಲಾಶ್, f/2.4 ದ್ಯುತಿರಂಧ್ರದೊಂದಿಗೆ 2MP ಡೆಪ್ತ್ ಸೆನ್ಸಾರ್
  • ಫ್ರಂಟ್ ಕ್ಯಾಮೆರಾ: f/2.0 ದ್ಯುತಿರಂಧ್ರದೊಂದಿಗೆ 8MP ಫ್ರಂಟ್ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್
  • ಆಡಿಯೋ: USB ಟೈಪ್-ಸಿ ಆಡಿಯೋ, ಬಾಟಮ್-ಪೋರ್ಟ್ ಮಾಡಲಾದ ಸ್ಪೀಕರ್‌ಗಳು
  • ಅಳತೆ: 162.5×75.4×7.15mm
  • ತೂಕ: 178g ತೂಕ
  • ಬಣ್ಣಗಳು: ಟ್ರ್ಯಾಂಕ್ವಿಲಿಟಿ ಬ್ಲಾಕ್ (Tranquillity Black), ಅರೋರಾ ಪರ್ಪಲ್ (Aurora Purple) ಮತ್ತು ಮೌಂಟೇನ್ ಸ್ಟ್ರೀಮ್ ಗ್ರೀನ್ (Mountain Stream Green)
  • ಬ್ಯಾಟರಿ: 5000mAh ಬ್ಯಾಟರಿ
  • ಚಾರ್ಜಿಂಗ್: 45W SUPERVOOC ಫಾಸ್ಟ್ ಚಾರ್ಜಿಂಗ್
  • ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.1, BeiDou (B1I), GPS (L1), GLONASS (G1), GALILEO (E1), QZSS (L1), ಯುಎಸ್‌ಬಿ ಟೈಪ್-ಸಿ

ಒಟ್ಟಾರೆ, ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಹೊಸ ಮೊಬೈಲ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಟೆಕ್ನಾಲಜಿ ಬೆಳೆದಂತೆಲ್ಲ ಕಂಪನಿಗಳು ವಿನೂತನ ಮಾದರಿಯ ಫೋನ್‌ಗಳನ್ನು ತಯಾರಿಸುತ್ತಿವೆ. ಇವುಗಳಲ್ಲಿ ಎಐ ತಂತ್ರಜ್ಞಾನ ಕೂಡ ಲಭ್ಯವಿರುತ್ತದೆ. ಅಲ್ಲದೇ, ವಿಶಿಷ್ಟವಾದ ಫಿಚರ್ಸ್‌ಗಳು ಇರುತ್ತವೆ. ಒಪ್ಪೋ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, Oppo A3 ಫೋನ್ ಅನ್ನು ಆದಷ್ಟು ಬೇಗ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡುವ ಸಾಧ್ಯತೆಯಿದೆ.

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Oppo has launched the Oppo A3 smartphone in China. This launch comes after the brand debuted the Oppo A3 Pro back in April.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+