Home
ಮೊಬೈಲ್

Oppoನ ಹೊಸ ಫೋನ್ ಗ್ರ್ಯಾಂಡ್‌ ಎಂಟ್ರಿ: ಬೆಲೆ 17,999 ರೂ.. ಬೆಚ್ಚಿಬಿತ್ತು ಮಾರುಕಟ್ಟೆ!

ಒಪ್ಪೋ ಪ್ರಿಯರಿಗೆ ಇದು 100 ಪರ್ಸೆಂಟ್ ಒಪ್ಪೋ ಫೋನ್! ಅಂತೂ ಇಂತೂ ಒಪ್ಪೋ ರಾಜ ಭಾರತೀಯ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಈ ಮೊಬೈಲ್‌ನ ಸ್ಟೈಲಿಶ್ ಲುಕ್, ಅದ್ಭುತ ಕ್ಯಾಮೆರಾ, ಆಕರ್ಷಕ ಫೀಚರ್ಸ್‌ಗಳು ಕಣ್ಣು ಕುಕ್ಕುತ್ತಿವೆ. ಹೌದು, ನಾವು ಹೇಳುತ್ತಿರುವುದು ಒಪ್ಪೋನ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ ಬಗ್ಗೆ. ಒಪ್ಪೋ ಕಂಪನಿಯು ತನ್ನ ಇತ್ತೀಚಿನ 5G ಸ್ಮಾರ್ಟ್‌ಫೋನ್ Oppo A3 Pro 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಪುಲ್ HD+ ಡಿಸ್ಪ್ಲೇ ಹೊಂದಿದ್ದು, ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಾಂಚ್ ಆಗಿದೆ. 5100mAh ಬ್ಯಾಟರಿಯನ್ನು ಹೊಂದಿದೆ. ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ.

ಈ ಒಪ್ಪೋ ಎ3 ಪ್ರೋ 5ಜಿ ಮೊಬೈಲ್ 6.67-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 1080*2412 ಪಿಕ್ಸೆಲ್ ರೆಸಲ್ಯೂಶನ್ ಮತ್ತು 1,000 nits ಗರಿಷ್ಠ ಬ್ರೈಟ್‌ನೆಸ್‌ ಪಡೆದಿದೆ. ಇದು MediaTek ಡೈಮೆನ್ಸಿಟಿ 6400 SoC ಯಿಂದ 8GB RAM ಮತ್ತು 8GB ವರ್ಚುವಲ್ RAM ಅನ್ನು ಹೊಂದಿದೆ. 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಪ್ರಾರಂಭಿಸಲಾಗಿದೆ. ಹಾಗಿದ್ರೆ, ಇದು ಏನೆಲ್ಲಾ ವಿಶೇಷತೆ ಒಳಗೊಂಡಿದೆ ತಿಳಿಯೋಣ ಬನ್ನಿ.

Oppoನ ಹೊಸ ಫೋನ್ ಲಾಂಚ್: ಬೆಲೆ 17,999 ರೂ.. ಬೆಚ್ಚಿಬಿತ್ತು ಮಾರುಕಟ್ಟೆ!

Oppo A3 Pro ಫೋನ್‌ನ ವಿಶೇಷತೆಗಳು

ಈ ಸ್ಮಾರ್ಟ್‌ಫೋನ್ Android 14 ಆಧಾರಿತ ColorOS 14 ಅನ್ನು ರನ್ ಮಾಡುತ್ತದೆ. ಮತ್ತು ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 7050 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 45W Supervooc ಫ್ಲಾಶ್ ಚಾರ್ಜಿಂಗ್ ಬೆಂಬಲದೊಂದಿಗೆ 5100mAh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಿದೆ. ಬ್ಯಾಟರಿಯು 1,600 ಚಾರ್ಜ್ ಸೈಕಲ್‌ಗಳ ನಂತರ ಅದರ ಮೂಲ ಸಾಮರ್ಥ್ಯದ 80% ಕ್ಕಿಂತ ಹೆಚ್ಚು ನಿರ್ವಹಿಸುತ್ತದೆ. ದಿನಕ್ಕೆ ಒಮ್ಮೆ ಚಾರ್ಜ್ ಮಾಡಿದರೆ 4 ವರ್ಷಗಳ ಬಳಕೆಗೆ ಸಮನಾಗಿರುತ್ತದೆ.

ಅತ್ಯಾಕರ್ಷಕ ಕ್ಯಾಮೆರಾ ಸೆಟಪ್

ಈ ಒಪ್ಪೋ ಹೊಸ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು LED ಫ್ಲಾಶ್ ಹೊಂದಿದೆ. f/1.7 ದ್ಯುತಿರಂಧ್ರದೊಂದಿಗೆ 64MP ಮುಖ್ಯ ಕ್ಯಾಮೆರಾ, f/2.2 ದ್ಯುತಿರಂಧ್ರದೊಂದಿಗೆ 2MP ಡೆಪ್ತ್ ಸೆನ್ಸಾರ್ ಇದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ f/2.2 ದ್ಯುತಿರಂಧ್ರದೊಂದಿಗೆ 8MP ಕ್ಯಾಮೆರಾವನ್ನು ಹೊಂದಿದೆ. ಇದು ಪೋರ್ಟ್ರೇಟ್ ಮೋಡ್, ಡ್ಯುಯಲ್ ವ್ಯೂ ವಿಡಿಯೋ ಸೇರಿದಂತೆ ಹಲವು ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ.

AI ಲಿಂಕ್ ಬೂಸ್ಟ್, AI ಎರೇಸರ್‌ ಫೀಚರ್ಸ್

ಈ ಫೋನ್ ಕೇವಲ 7.68mm ತೆಳುವಾಗಿದ್ದು, ಬ್ರೈಟ್‌ನೆಸ್‌ ಮಧ್ಯಮ ಫ್ರೇಮ್ ವಿನ್ಯಾಸ ಮತ್ತು ಹಿಂಭಾಗದ ಕವರ್‌ನಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. A3 Pro ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್‌ಗಳನ್ನು ಹೊಂದಿದೆ. ಮತ್ತು SGS ಡ್ರಾಪ್ ಪ್ರತಿರೋಧ ಮತ್ತು ಮಿಲಿಟರಿ ಪ್ರಮಾಣಿತ ಪ್ರಮಾಣೀಕರಣವನ್ನು ಸಹ ಹೊಂದಿದೆ. ಇದು AI ಲಿಂಕ್ ಬೂಸ್ಟ್ ಮತ್ತು AI ಎರೇಸರ್‌ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

Oppoನ ಹೊಸ ಫೋನ್ ಲಾಂಚ್: ಬೆಲೆ 17,999 ರೂ.. ಬೆಚ್ಚಿಬಿತ್ತು ಮಾರುಕಟ್ಟೆ!

Oppo A3 Pro 5G ಫೋನ್‌ನ ಸಂಪೂರ್ಣ ಫೀಚರ್ಸ್‌

ಡಿಸ್ಪ್ಲೇ: 6.67-ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ದರ, 1000 ನಿಟ್ಸ್ ಗರಿಷ್ಠ ಹೊಳಪು, ರಕ್ಷಣೆಗಾಗಿ ಬ್ಲೂ ಗ್ಲಾಸ್ ಡಬಲ್ ಟೆಂಪರ್ಡ್ ಗ್ಲಾಸ್
ಪ್ರೊಸೆಸರ್: ಆರ್ಮ್ ಮಾಲಿ-G57 MC2 GPU ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ (2x ಕಾರ್ಟೆಕ್ಸ್-A76 @ 2.4GHz 6x ಕಾರ್ಟೆಕ್ಸ್-A55 @ 2GHz)
ಸ್ಟೋರೇಜ್: 8GB LPDDR4x RAM, 128GB / 256GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ
ಸಿಮ್: ಎರಡು ಸಿಮ್
ಆಪರೇಟಿಂಗ್ ಸಿಸ್ಟಮ್: ColorOS 14 ಜೊತೆಗೆ Android 14
ಕ್ಯಾಮೆರಾಗಳು: 50MP ಹಿಂಬದಿಯ ಕ್ಯಾಮೆರಾ, LED ಫ್ಲಾಶ್, 2MP ಸೆಕೆಂಡರಿ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
ಅಳತೆ: 165.79×76.14×7.68mm, ತೂಕ: 186g
ರಕ್ಷಣೆ: ಧೂಳು ಮತ್ತು ನೀರಿನ ಪ್ರತಿರೋಧ (IP54)
ಕನೆಕ್ಟಿವಿಟಿ ಆಯ್ಕೆಗಳು: 3.5 ಎಂಎಂ ಆಡಿಯೊ ಜಾಕ್, 5G SA / NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.3, GPS, GLONASS, ಗೆಲಿಲಿಯೋ, QZSS, USB ಟೈಪ್-ಸಿ
ಬ್ಯಾಟರಿ: 45W SuperVOOC ವೇಗದ ಚಾರ್ಜಿಂಗ್‌ನೊಂದಿಗೆ 5100mAh ಸಾಮರ್ಥ್ಯದ ಬ್ಯಾಟರಿ

ಈ ಫೋನ್‌ನ ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು?

OPPO A3 Pro 5G ಫೋನ್‌ ಎರಡು ಸ್ಟೋರೇಜ್‌ ಮಾದರಿಯಲ್ಲಿ ಲಭ್ಯವಿರಲಿದೆ. 128GB ಸ್ಟೋರೇಜ್ ಮಾದರಿಯ ಬೆಲೆ 17,999 ರೂ. ಮತ್ತು 256GB ಸ್ಟೋರೇಜ್ ವೇರಿಯಂಟ್ ಬೆಲೆ 19,999 ರೂ. ಇದೆ. ಇಂದಿನಿಂದ Amazon, Flipkart, OPPO ಸ್ಟೋರ್ ಮತ್ತು ಮುಖ್ಯ ಚಿಲ್ಲರೆ ಅಂಗಡಿಗಳಲ್ಲಿ ಈ ಫೋನ್ ಖರೀದಿಗೆ ಲಭ್ಯವಿದೆ. ಈ ಫೋನ್ ಎರಡು ಬಣ್ಣಗಳಲ್ಲಿ ಲಾಮಚ್ ಆಗಿದೆ. ಸ್ಟಾರ್ರಿ ಬ್ಲ್ಯಾಕ್ ಮತ್ತು ಮೂನ್‌ಲೈಟ್ ಪರ್ಪಲ್ ಬಣ್ಣಗಳಲ್ಲಿ ನೀವು ಖರೀದಿಸಬಹುದು.

ಮೊದಲ ಸೇಲ್‌ನಲ್ಲೇ ಬಂಪರ್‌ ಆಫರ್

ಇನ್ನೂ OPPO A3 Pro 5G ಮೊಬೈಲ್‌ ಖರೀದಿಯ ಮೇಲೆ ನೀವು ಲಾಂಚ್ ಆಫರ್‌ಗಳನ್ನು ಪಡೆಯಬಹುದು. HDFC ಬ್ಯಾಂಕ್, SBI ಕಾರ್ಡ್‌ಗಳು, ಯೆಸ್ ಬ್ಯಾಂಕ್, IDFC ಫಸ್ಟ್ ಬ್ಯಾಂಕ್ ಮತ್ತು ಮತ್ತು ICICI ಬ್ಯಾಂಕ್‌ಗಳಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 10% ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಮತ್ತು ಪ್ರಮುಖ ಪಾಲುದಾರರೊಂದಿಗೆ ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಗ್ರಾಹಕ ಸಾಲ ಲಭ್ಯವಿದೆ.

Best Mobiles in India

English summary
Oppo has launched the OPPO A3 Pro 5G, the company’s latest 5G smartphone, in India. OPPO A3 Pro 5G with 6.67″ 120Hz display, Dimensity 6300, 5100mAh battery and starting at Rs. 17,999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+