Home
ಮೊಬೈಲ್

ಹೊಸ 5G ಫೋನ್ ಬಿಡುಗಡೆ ಮಾಡಿದ Oppo: ಡಿಸೈನ್, ಫೀಚರ್ಸ್‌ ಸೂಪರ್! ಬೆಲೆಯೂ ಕಡಿಮೆ

ಒಪ್ಪೋ (Oppo) ಕಂಪನಿಯು ಸದ್ದಿಲ್ಲದೆ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು, ಒಪ್ಪೋ A3i 5G (Oppo A3i 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರಮುಖ ವಿಷಯವೆಂದರೆ, ಇದು ಭಾರತದಲ್ಲಿ ಈ ಹಿಂದೆ ಬಿಡುಗಡೆಯಾದ Oppo A3 5G ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಿಡಗಡೆಯಾದ Oppo 60 5G ಫೋನನ್ನು ಹೋಲುತ್ತದೆ. ಒಪ್ಪೋ A3i 5G ಅನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಲಾಗಿದೆ. ಬನ್ನಿ, ಈ ಫೋನಿನ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ತಿಳಿಯೋಣ.

ಪ್ರಸ್ತುತ, ಕಂಪನಿಯು ಒಪ್ಪೋ A3i 5G ಫೋನನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮುಂಬರುವ ದಿನಗಳಲ್ಲಿ ಭಾರತ ಸೇರಿದಂತೆ ಇನ್ನಿತರ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ನೂತನ ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 6300 5G ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 6.67 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 12GB RAM, 5100mAh ಬ್ಯಾಟರಿ, ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ 5G ಫೋನ್ ಬಿಡುಗಡೆ ಮಾಡಿದ Oppo: ಡಿಸೈನ್, ಫೀಚರ್ಸ್‌ ಸೂಪರ್! ಕಡಿಮೆ ಬೆಲೆ

ಒಪ್ಪೋ A3i 5G ಫೋನಿನ ಬೆಲೆ

ಹೊಸ ಒಪ್ಪೋ A3i 5G ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನಿನ 8GB + 256GB ಸ್ಟೋರೇಜ್‌ ರೂಪಾಂತರದ ಬೆಲೆ 12,900 ರೂ. (1,099 ಯುವಾನ್‌) ಇದೆ. 12GB + 256GB ಸ್ಟೋರೇಜ್‌ ರೂಪಾಂತರವನ್ನು 15,000 ರೂ.ಗೆ (1,299 ಯುವಾನ್) ಬಿಡುಗಡೆ ಮಾಡಲಾಗಿದೆ. ಇದು ಅಕ್ಟೋಬರ್ 21 ರಿಂದ ಚೀನಾದ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟವಾಗಲಿದೆ. ನೀವು, ಈ ಮೊಬೈಲ್‌ ಅನ್ನು ಸ್ಟಾರ್ ಪರ್ಪಲ್ ಮತ್ತು ಡಾರ್ಕ್ ನೈಟ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು.

ಒಪ್ಪೋ A3i 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ A3i 5G ಸ್ಮಾರ್ಟ್‌ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 89.9 ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತ ಅನ್ನು ಹೊಂದಿದೆ.

ಪ್ರೊಸೆಸರ್‌ ಸಾಮರ್ಥ್ಯ

ಕಂಪನಿಯು ಈ ಬಜೆಟ್‌ ಮೊಬೈಲ್‌ ಅನ್ನು ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಕಲರ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ಒಪ್ಪೋ A3i 5G ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 8GB RAM + 256GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಒಳಗೊಂಡಿದೆ. ಇದರೊಂದಿಗೆ, ವರ್ಚುವಲ್ RAM ಸೌಲಭ್ಯವನ್ನು ಸಹ ಹೊಂದಿದೆ.

ಕ್ಯಾಮೆರಾ ಸೆಟಪ್

ಈ ಬಜೆಟ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಇನ್ನೊಂದು ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಬ್ಯಾಕಪ್

ಒಪ್ಪೋ A3i 5G ಮೊಬೈಲ್‌ 5100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಬೆಂಬಲವಿದೆ. 75 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು.

ಇತರೆ ವೈಶಿಷ್ಟ್ಯಗಳು

ಒಪ್ಪೋ A3i 5G ಫೋನ್ 165.71 × 76.02 × 7.68 ಎಂಎಂ ಅಳತೆ ಮತ್ತು 187 ಗ್ರಾಂ ತೂಕ ಹೊಂದಿದೆ. ನೀರು ಮತ್ತು ಧೂಳಿನ ರಕ್ಷಣೆಗಾಗಿ IP54 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G, ವೈ-ಫೈ, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಮುಂತಾದ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Oppo A3i 5G with MediaTek Dimensity 6300 5G Launched in china: know price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+