ಮತ್ತೊಂದು ಬೊಂಬಾಟ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ಒಪ್ಪೋ ಸಿದ್ದತೆ..!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟ ಹೊಸತನಗಳಿಗೆ ಕಾರಣವಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ಒಪ್ಪೋ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಈಗಾಗಲೇ ಬಜೆಟ್ ಆವೃತ್ತಿಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದ್ದು, ಸೆಡ್ಡು ಹೊಡೆಯುವ ಮಾದರಿಯಲ್ಲಿ ಒಪ್ಪೋ A3s ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಒಪ್ಪೋ A3 ಸ್ಮಾರ್ಟ್‌ಫೋನಿನ ಪರಿಷ್ಕೃತ ಆವೃತ್ತಿ ಒಪ್ಪೋ A3s ಸ್ಮಾರ್ಟ್‌ಫೋನ್ ಆಗಿದ್ದು, ಹೊಸ ಹೊಸ ಆಯ್ಕೆ ಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ಮಲಾಗಿದೆ. ಮತ್ತೆ ಮಾರುಕಟ್ಟೆ ಯಲ್ಲಿ ಕಡಿಮೆ ಬೆಲೆಗೆ ಸಾಕಷ್ಟು ಸ್ಮಾರ್ಟ್‌ಫೋನ್ ಲಭ್ಯವಿದೆ, ಆದರೆ ಅವುಗಳಿಗಿಂತ ಭಿನ್ನವಾಗಿ ಡ್ಯುಯಲ್ ಕ್ಯಾಮೆರಾ, ಫೇಸ್ ಲಾಕ್ ಸೇರಿದಂತೆ ಹಲವು ಆಯ್ಕೆ ಗಳೊಂದಿಗೆ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಒಪ್ಪೋ A3s ಸ್ಮಾರ್ಟ್‌ಫೋನ್ ಕುರಿತ ಮಾಹಿತಿ ಮುಂದಿದೆ.

ದೊಡ್ಡ ಬ್ಯಾಟರಿ
ಒಪ್ಪೋ A3s ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ 4,230 mAhನ ಬ್ಯಾಟರಿಯನ್ನು ನೀಡಲಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಸಲು ಅವಕಾಶ ಮಾಡಿಕೊಡುವುದಲ್ಲದೆ, ಎರಡು ದಿನಗಳ ಕಾಲ ಬ್ಯಾಕಪ್ ನೀಡಲಿದೆ. ಇದರಿಂದಾಗಿ ಹೆಚ್ಚಿನ ಬ್ಯಾಕಪ್ ಬೇಕು ಎನ್ನುವರಿಗೆ ಇದು ಉತ್ತಮ ಆಯ್ಕೆಯಾಗಲಿದೆ.

ಡ್ಯುಯಲ್ ಕ್ಯಾಮೆರಾ:
ಒಪ್ಪೋ A3s ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ದೊರೆಯುತ್ತಿದ್ದರೂ ಸಹ ಉತ್ತಮ ಆಯ್ಕೆ ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. 13 MP + 2MP ಕ್ಯಾಮರಾ ಸೆಟಪ್ ಅನ್ನು ನೀಡಲಾಗಿದ್ದು, ಇದರಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಅವಕಾಶವನ್ನು ಮಾಡಿಕೊಡಲಾಗಿದೆ.

2GB RAM - 16 GB ROM
ಒಪ್ಪೋ A3s ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 2GB RAM ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ನೀಡಲಾಗಿದೆ. ಇದಲ್ಲದೇ 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, ಮೆಮೊರಿ ಯನ್ನು ವಿಸ್ತರಿಸಲು ಅವಕಾಶವನ್ನು ಮಾಡಿಕೊಡಲಾಗಿದೆ.

6.2 ಇಂಚಿನ ಡಿಸ್ ಪ್ಲೆ
ಒಪ್ಪೋ A3s ಸ್ಮಾರ್ಟ್‌ಫೋನಿನಲ್ಲಿ ದೊಡ್ಡದು ಎನ್ನಲಾಗಿರುವ
6.2 ಇಂಚಿನ ಡಿಸ್ ಪ್ಲೇ ಯನ್ನು ಕಾಣಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾಗಿ ವಿಡಿಯೋ ನೋಡುವ ಸಲುವಾಗಿ ಫುಲ್ ವ್ಯೂ ವಿನ್ಯಾಸ ಮಾಡಲಾಗಿದ್ದು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ.

ಬೆಲೆ
6.2 ಇಂಚಿನ ಡಿಸ್ ಪ್ಲೆ, ಡ್ಯುಯಲ್ ಕ್ಯಾಮೆರಾ ಸೇರಿದಂತೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಒಪ್ಪೋ A3s ಸ್ಮಾರ್ಟ್‌ಫೋನಿನ ಬೆಲೆಯೂ ರೂ.10999 ಆಗಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಉಂಟುಮಾಡಲಿದೆ ಎನ್ನುವ ಮಾತು ಕೇಳಿ ಬಂದಿದೆ.


Click it and Unblock the Notifications




