Home
ಮೊಬೈಲ್

ಬಿಡುಗಡೆಗೆ ಸಜ್ಜಾಯ್ತು 'ಒಪ್ಪೊ ಎ3ಎಸ್'!..ಶಿಯೋಮಿ ಬಿಟ್ಟು ಈ ಫೋನ್ ಖರೀದಿಸಲು 5 ಕಾರಣಗಳು!!

By Bhaskar N J

ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಲ್ಲಿ ಹೇಗಾದರೂ ಕಾಲೂರಬೇಕೆಂದು ಪಣತೊಟ್ಟಿರುವ ಒಪ್ಪೊ ಇತ್ತೀಚಿಗೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚಿಗಷ್ಟೆ ಬಿಡುಗಡೆ ಮಾಡಿದ್ದ 'ರಿಯಲ್ ಮಿ' ಸ್ಮಾರ್ಟ್‌ಪೋನ್ ಯಶಸ್ಸಿನಲ್ಲಿ ತೇಲುತ್ತಿರುವ ಒಪ್ಪೊ ಇದೀಗ ನೂತನ ಮಾದರಿಯ 'ಒಪ್ಪೊ ಎ3ಎಸ್' ಸ್ಮಾರ್ಟ್‌ಪೋನ್ ಲಾಂಚ್ ಮಾಡಿ ಗಮನಸೆಳೆದಿದೆ.

ಈ ವರೆಗೂ 2GB ಮತ್ತು 16GB ಮಾದರಿಯ ಸ್ಮಾರ್ಟ್‌ಫೋನ್‌ಗಳಿಗಷ್ಟೆ ಸೀಮಿತವಾಗಿದ್ದ 'ಒಪ್ಪೊ ಎ3ಎಸ್' ಸ್ಮಾರ್ಟ್‌ಪೋನ್ ಈಗ ಅಪ್‌ಡೇಟ್ ಆಗಿ ಮಾರುಕಟ್ಟೆಗೆ ಕಾಲಿಟ್ಟಿದೆ. ಒಪ್ಪೊವಿನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ನೂತನ ಮಾದರಿಯ 'ಒಪ್ಪೊ ಎ3ಎಸ್' ಸ್ಮಾರ್ಟ್‌ಪೋನ್ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಈ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವುದಾಗಿ ಕಂಪೆನಿ ತಿಳಿಸಿದೆ.

ಶಿಯೋಮಿ ಬಿಟ್ಟು 'ಒಪ್ಪೊ ಎ3ಎಸ್' ಸ್ಮಾರ್ಟ್‌ಫೋನ್ ಖರೀದಿಸಲು 5 ಕಾರಣಗಳು!!

10,990 ರೂ,ಗಳಿಗೆ 2GB ಮತ್ತು 16GB ಮಾದರಿಯ 'ಒಪ್ಪೊ ಎ3ಎಸ್' ಫೋನ್ ಅನ್ನು ಮಾರಾಟ ಮಾಡುತ್ತಿದ್ದ ಒಪ್ಪೊ ಕಂಪೆನಿ ಈಗ ನೂತನ ಸ್ಮಾರ್ಟ್‌ಫೋನ್ ಬೆಲೆಯನ್ನು ಕೂಡ ಅದೇ ಬೆಲೆಯಲ್ಲಿ ಮಾರಾಟ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಹಾಗಾದರೆ, 'ಒಪ್ಪೊ ಎ3ಎಸ್' ನೂತನ ಮಾದರಿ ಸ್ಮಾರ್ಟ್‌ಫೋನ್ ಹೊಂದಿರುವ ಇನ್ನಿತರೆ ಎಲ್ಲಾ ಫೀಚರ್ಸ್ ಯಾವುವು ಎಂಬ ಮಾಹಿತಿಯನ್ನು ಮುಂದೆ ತಿಳಿಯಿರಿ.

ಒಪ್ಪೊ ಎ3ಎಸ್' ಡಿಸ್‌ಪ್ಲೇ!

ಒಪ್ಪೊ ಎ3ಎಸ್' ಡಿಸ್‌ಪ್ಲೇ!

ನೂತನ ಮಾದರಿ 'ಒಪ್ಪೊ ಎ3ಎಸ್' ಸ್ಮಾರ್ಟ್‌ಫೋನ್ 6.2 ಇಂಚಿನ ಹೆಚ್‌ಡಿ ಪ್ಲಸ್ 'ಸೂಪರ್ ಫುಲ್ ಸ್ಕ್ರೀನ್' ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. 720x1520p ರೆಸೊಲ್ಯೂಷನ್ ಮತ್ತು 19:9 ಆಸ್ಪೆಕ್ಟ್ ರೆಶ್ಯೂನೊಂದಿಗೆ ಬಂದಿರುವ ಡಿಸ್‌ಪ್ಲೇ ಶೇ. 88.8 ಪರದೆಯ ದೇಹದ ಅನುಪಾತ ಹೊಂದಿದೆ. ವಿಡಿಯೋ ವೀಕ್ಷಣೆಗೆ ಈ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಒಪ್ಪೊ ಎ3ಎಸ್' ಸ್ಮಾರ್ಟ್‌ಫೋನಿನಲ್ಲಿ ಅಡ್ರೆನೊ 506ಜಿಪಿಯು ಜೊತೆಗೆ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಈ ಮೊದಲು 2GB RAM ಮತ್ತು 16GB ಮಾದರಿಯ ಸಾಮರ್ಥ್ಯದ ಬದಲಾಗಿ 3GB RAM ಮತ್ತು 32GB ಮಾದರಿಯ ಸ್ಮಾರ್ಟ್‌ಫೋನ್ ಈಗ ಮಾರುಕಟ್ಟೆಗೆ ಕಾಲಿಟ್ಟಿದೆ.ಮೆಮೊರಿಯನ್ನು 256GB ವರೆಗೂ ವರ್ಧಿಸುವ ಆಯ್ಕೆ ಇದರ ಹೆಗ್ಗಳಿಕೆಯಾಗಿದೆ.

ಕ್ಯಾಮೆರಾ ಮತ್ತು ತಂತ್ರಜ್ಞಾನ!

ಕ್ಯಾಮೆರಾ ಮತ್ತು ತಂತ್ರಜ್ಞಾನ!

ಸ್ಮಾರ್ಟ್‌ಫೋನ್ ಕ್ಯಾಮೆರಾಗಳಿಗೆ ಹೆಚ್ಚು ಒತ್ತು ನೀಡುವ ಒಪ್ಪೊ ಕಂಪೆನಿ, ಈ ಸ್ಮಾರ್ಟ್‌ಫೋನಿನಲ್ಲಿ 13MP + 2MP ಸಾಮರ್ಥ್ಯದ ರಿಯರ್ ಡ್ಯುಯಲ್ ಕ್ಯಾಮೆರಾಗಳನ್ನು ನೀಡಿದೆ. ಇನ್ನು 8MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಬ್ಯೂಟಿ ಟೆಕ್ನಾಲಜಿ 2.0 ತಂತ್ರಜ್ಞಾನದೊಂದಿಗೆ ಬಂದಿದೆ. ಹಾಗಾಗಿ, ಅತ್ಯುತ್ತಮ ಸೆಲ್ಫಿ ಸ್ಮಾರ್ಟ್‌ಪೋನ್‌ಗಳಲ್ಲಿ ಇದು ಕೂಡ ಒಂದು ಎನ್ನಬಹುದು.

ಬ್ಯಾಟರಿ ಸಾಮರ್ಥ್ಯಕ್ಕೆ ಬೆರಗು!

ಬ್ಯಾಟರಿ ಸಾಮರ್ಥ್ಯಕ್ಕೆ ಬೆರಗು!

'ಒಪ್ಪೊ ಎ3ಎಸ್' ಸ್ಮಾರ್ಟ್‌ಪೋನ್ ಎಲ್ಲಾ ಫೀಚರ್ಸ್‌ಗಳಿಗಿಂತಲೂ ಒಂದು ಕೈ ಹೆಚ್ಚಿದೆ ಎಂದರೆ ಅದು ಬ್ಯಾಟರಿ ಸಾಮರ್ಥ್ಯ. ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆದು 4,230mAh ಬ್ಯಾಟರಿ ಶಕ್ತಿಯನ್ನು 'ಒಪ್ಪೊ ಎ3ಎಸ್' ಸ್ಮಾರ್ಟ್‌ಪೋನ್ ಹೊಂದಿದೆ. ಹಾಗಾಗಿ, ಈ ಸ್ಮಾರ್ಟ್‌ಪೋನ್ ಬ್ಯಾಟರಿ ಕನಿಷ್ಟ ಎಂದರೂ 2 ದಿನಗಳು ಪೂರ್ತಿ ಬಾಳಿಕೆಯನ್ನು ನೀಡುತ್ತದೆ.

ಇತೆರೆ ಏನೆಲ್ಲಾ ಫೀಚರ್ಸ್?

ಇತೆರೆ ಏನೆಲ್ಲಾ ಫೀಚರ್ಸ್?

ಆಂಡ್ರಾಯ್ಡ್ ಓರಿಯೋ ಸಪೋರ್ಟ್, ಫೇಸ್‌ ಅನ್‌ಲಾಕ್‌, ಡೆಡಿಕೇಟೆಡ್ ಮೆಮೊರಿ ಫೀಚರ್ಸ್‌ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಸಾಮಾನ್ಯ ಬಜೆಟ್ ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ. ಬ್ಯಾಟರಿ ಬಾಳಿಗೆಕಾಗಿ ವಿಶೇಷ ತಂತ್ರಜ್ಞಾನವನ್ನು ಸಹ ಹೊಂದಿರುವುದು ಈ ಮೊಬೈಲ್ ವಿಶೇಷತೆಯೇ ಸರಿ.

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಈಗಷ್ಟೆ ನೂತನ ಮಾದರಿಯಲ್ಲಿ ಕಾಣಿಸಿಕೊಂಡಿರುವ 'ಒಪ್ಪೊ ಎ3ಎಸ್' ಸ್ಮಾರ್ಟ್‌ಫೋನ್ ಬೆಲೆಯನ್ನು ಒಪ್ಪೊ ಈವರೆಗೂ ಬಹಿರಂಗಪಡಿಸಿಲ್ಲ. ಆದರೆ, ಶಿಯೋಮಿ ಕಂಪೆನಿ ಬಜೆಟ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುವಂತೆ 10,990 ರೂ,ಗಳ ಹಳೆ ಬೆಲೆಯ ಆಸುಪಾಸಿನಲ್ಲಿಯೇ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುವ ಲಕ್ಷಣಗಳಿವೆ.

Best Mobiles in India

English summary
Oppo A3s with 3GB RAM, 32GB storage announced in India, could be priced under Rs?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+