Home
ಮೊಬೈಲ್

Oppo A3x 5G: ಅತೀ ಕಮ್ಮಿ ಬೆಲೆಗೆ ಹೊಸ 5G ಫೋನ್ ಬಿಡುಗಡೆ! ಆ.7ಕ್ಕೆ ಸೇಲ್

ಒಪ್ಪೋ ಪ್ರಿಯರಿಗೆ ಸರ್ಪ್ರೈಸ್ ಗಿಫ್ಟ್‌ ಇದೆ. ಸದ್ದಿಲ್ಲದೇ, ಹೊಸ ಒಪ್ಪೋ ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನಿನ ಬೆಲೆ 13 ಸಾವಿರ ರೂ.ಗಿಂತ ಕಡಿಮೆ! ಹೌದು, ಪ್ರಮುಖ ಟೆಕ್ ಬ್ರ್ಯಾಂಡ್ ಒಪ್ಪೋ (Oppo) ಭಾರತದಲ್ಲಿ ಹೊಸ ವಾಟರ್‌ಪ್ರೂಫ್ ಫೋನನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಒಪ್ಪೋ ಎ3X 5G (Oppo A3x 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫೀಚರ್ಸ್‌ಗಳೊಂದಿಗೆ ಬರುತ್ತದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ಇನ್ನಿತರ ಫೀಚರ್ಸ್‌ಗಳನ್ನು ತಿಳಿಯೋಣ.

ನೀವು 12 ರಿಂದ 13 ಸಾವಿರ ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಮನಸ್ಸು ಮಾಡಿದ್ದರೆ, ಈ ಹೊಸ ಒಪ್ಪೋ ಫೋನ್ ನಿಮಗೆ ಫರ್ಪೆಕ್ಟ್ ಆಯ್ಕೆಯಾಗಲಿದೆ. ಈ ಒಪ್ಪೋ ಎ3X 5G (Oppo A3x 5G) ಫೊನ್ 6.67 ಇಂಚಿನ LCD HD+ ಡಿಸ್ಪ್ಲೇ ಹೊಂದಿದೆ. 4GB RAM ಮತ್ತು 128GB ಸ್ಟೋರೇಜ್, 8MP ಮುಖ್ಯ ಕ್ಯಾಮೆರಾ, 5100mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Oppo A3x 5G: ಅತೀ ಕಮ್ಮಿ ಬೆಲೆಗೆ ಹೊಸ 5G ಫೋನ್ ಬಿಡುಗಡೆ! ಆ.7ಕ್ಕೆ ಸೇಲ್

ಒಪ್ಪೋ ಎ3X 5G ಫೋನಿನ ಬೆಲೆ

4GB RAM + 64GB ಸ್ಟೋರೇಜ್ ಬೆಲೆ = ರೂ. 12,499
4GB RAM + 128GB ಸ್ಟೋರೇಜ್ ಬೆಲೆ = ರೂ . 13,499

ಒಪ್ಪೋ ಎ3X 5G ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನನ್ನು ಬಿಳಿ, ಕಪ್ಪು ಮತ್ತು ನೇರಳೆ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಫೋನಿನ ಆರಂಭಿಕ ಬೆಲೆ 13 ಸಾವಿರ ರೂ.ಗಿಂತ ಕಡಿಮೆ ಇದೆ. ಈ ಫೋನಿನ 4GB RAM + 64GB ಸ್ಟೋರೇಜ್ ಬೆಲೆ 12,499 ರೂ. ಇದೆ. 4GB RAM + 128GB ಸ್ಟೋರೇಜ್ ಬೆಲೆ 13,499 ರೂ. ಇದೆ.

ಈ ಫೋನ್ ಆಗಸ್ಟ್ 7 ರಿಂದ ಮಾರಾಟವಾಗಲಿದೆ. ಇದನ್ನು Oppo ಇಂಡಿಯಾ ಇ-ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು. ಲಾಂಚ್ ಆಫರ್‌ ಭಾಗವಾಗಿ, ಈ ಮೊಬೈಲ್ ಖರೀದಿ ಮೇಲೆ ಶೇ.10 ರಷ್ಟು ತ್ವರಿತ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರೊಂದಿಗೆ 6 ತಿಂಗಳ ನೋ-ಕಾಸ್ಟ್ EMI ಆಯ್ಕೆಯನ್ನು ಸಹ ನೀಡಲಾಗುತ್ತದೆ.

ಒಪ್ಪೋ ಎ3X 5G ಫೋನಿನ ಫೀಚರ್ಸ್‌

ಡಿಸ್ಪ್ಲೇ: ಒಪ್ಪೋ ಎ3X 5G ಫೋನ್ 6.67 ಇಂಚಿನ LCD HD+ ಡಿಸ್ಪ್ಲೇ ಹೊಂದಿದೆ. ಇದು 1604 × 720 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 1000nits ಗರಿಷ್ಠ ಬ್ರೈಟ್‌ನೆಸ್ ಮತ್ತು 89.9% ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ.

ಪ್ರೊಸೆಸರ್: ಕಂಪನಿಯು ಒಪ್ಪೋ ಎ3X 5G ಮೊಬೈಲ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಅನ್ನು ಅಳವಡಿಸಿದೆ. 8 ಕೋರ್ CPU ಸ್ಪೀಡ್ ಕೋರ್ ಮತ್ತು ಮಾಲಿ G57 MC2 GPU ನೊಂದಿಗೆ ಪರಿಚಯಿಸಲಾಗಿದೆ.

ಸ್ಟೋರೇಜ್: ಈ ಹೊಸ ಒಪ್ಪೋ ಫೋನ್ 4GB LPDDR4X RAM, 4GB ವಿಸ್ತೃತ RAM ಮತ್ತು 128GB ವರೆಗೆ eMMC 5.1 ಇಂಟರ್ನಲ್ ಸ್ಟೋರೇಜ್‌ ಹೊಂದಿದೆ.

Oppo A3x 5G: ಅತೀ ಕಮ್ಮಿ ಬೆಲೆಗೆ ಹೊಸ 5G ಫೋನ್ ಬಿಡುಗಡೆ! ಆ.7ಕ್ಕೆ ಸೇಲ್

ಕ್ಯಾಮೆರಾ: ಒಪ್ಪೋ ಎ3X 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 8MP ಮುಖ್ಯ ಕ್ಯಾಮೆರಾ, 2MP ಪೋರ್ಟ್ರೇಟ್ ಲೆನ್ಸ್ ಮತ್ತು ಸೆಲ್ಫಿಗಾಗಿ 5MP ಫ್ರಂಟ್‌ ಕ್ಯಾಮೆರಾ ಇದೆ. ಸೆಲ್ಫಿ ಕ್ಯಾಮೆರಾವು ವಿಡಿಯೋ, ಫೋಟೋ, ರಾತ್ರಿ, ಪನೋ, ಟೈಮ್-ಲ್ಯಾಪ್ಸ್, ಸ್ಟಿಕ್ಕರ್, ಹೆಚ್ಚುವರಿ HD ಮೋಡ್‌ನೊಂದಿಗೆ ಬರುತ್ತದೆ.

ಬ್ಯಾಟರಿ: ಒಪ್ಪೋ ಎ3X 5G ಸ್ಮಾರ್ಟ್‌ಫೋನ್ 5100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಸಾಫ್ಟ್‌ವೇರ್: ಈ ಹೊಸ Oppo A3x 5G ಮೊಬೈಲ್ Android 14 ಆಧಾರಿತ ColorOS 14.0.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 0.77 ಸೆಂ.ಮೀ ದಪ್ಪ ಮತ್ತು 187 ಗ್ರಾಂ ತೂಕ ಹೊಂದಿದೆ.

ಇತರೆ ಫೀಚರ್ಸ್: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್, 5G, 4G, ವೈಫೈ 5, ಬ್ಲೂಟೂತ್ ವಿ5.3, ಯುಎಸ್‌ಬಿ ಟೈಪ್-ಸಿ, 3.5 ಎಂಎಂ ಆಡಿಯೊ ಜಾಕ್ ಅನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಸಂವೇದಕ, MIL-STD 810 ಮಿಲಿಟರಿ ದರ್ಜೆಯ ಆಘಾತ ಪ್ರತಿರೋಧ , ಬಹು ದ್ರವ ಪ್ರತಿರೋಧ ಪರೀಕ್ಷೆಗಳು ಮತ್ತು IP54 ರೇಟಿಂಗ್‌ನೊಂದಿಗೆ ತರಲಾಗಿದೆ.

Best Mobiles in India

English summary
OPPO A3x 5G smartphone launched with 5100mah battery in india: Check price, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+