Home
ಮೊಬೈಲ್

Oppo A3X ಬೆಲೆ ಲೀಕ್! ಅತೀ ಕಮ್ಮಿ ಬೆಲೆಗೆ ಬಿಡುಗಡೆಗೆ ಸಿದ್ಧ: 32MP ಕ್ಯಾಮೆರಾ ಪಕ್ಕಾ!

ಬಿಡುಗಡೆಗೂ ಮುನ್ನವೇ ಹೊಸ ಒಪ್ಪೋ ಫೋನಿನ ಬೆಲೆ ಸೋರಿಕೆಯಾಗಿದೆ. ಇದು 32MP ಕ್ಯಾಮೆರಾ, 5100mAh ಬ್ಯಾಟರಿಯೊಂದಿಗೆ ಬರುವುದು ಖಚಿತ. ಹೌದು, ಒಪ್ಪೋ (Oppo) ಕಂಪನಿಯ ಒಪ್ಪೋ ಎ3X (Oppo A3X) ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಲಗ್ಗೆ ಇಡಲಿದೆ. ಈ ಫೋನಿನ ಬೆಲೆ, ವೈಶಿಷ್ಟ್ಯಗಳು ಮತ್ತು ಇನ್ನಿತರ ವಿವರಗಳು ಸೋರಿಕೆಯಾಗಿವೆ. OPPO A3x ದೇಶದಲ್ಲಿ ಬಜೆಟ್ 5G ಫೋನ್ ಆಗಿ ಬರಲಿದೆ. ಇದು MediaTek Dimension 6300 SoC ಪ್ರೊಸೆಸರ್‌ ಹೊಂದಿರುತ್ತದೆ.

ಹೌದು, Oppo A3X ಸ್ಮಾರ್ಟ್‌ಫೋನ್ ಒಪ್ಫೋ ಕಂಪನಿಯ ಹಳೆಯ ಮಾದರಿಗಳಾದ Oppo A18 ಮತ್ತು Oppo A59 ಫೋನನ್ನು ರೀಪ್ಲೇಸ್ ಮಾಡುತ್ತದೆ. ಈ ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಆರಂಭಿಕ ಬೆಲೆ 12,999 ರೂ. ಇರಲಿದೆ. ಈ ಸ್ಮಾರ್ಟ್‌ಫೋನ್ ರಕ್ಷಣೆಗಾಗಿ ಟ್ಯಾಂಪರಿಂಗ್ ಗ್ಲಾಸ್ ಮತ್ತು ಆಂಟಿ ಡ್ರಾಪ್ ಶೀಲ್ಡ್ ಕೇಸ್ ಅನ್ನು ಹೊಂದಿರಲಿದೆ. ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

Oppo A3X ಬೆಲೆ ಲೀಕ್! ಅತೀ ಕಮ್ಮಿ ಬೆಲೆಗೆ ಲಾಂಚ್: 32MP ಕ್ಯಾಮೆರಾ ಖಚಿತ!

Oppo A3X ಫೋನಿನ ಬೆಲೆ ವಿವರಗಳು ಲೀಕ್!

ಬಿಡುಗಡೆಗೂ ಮೊದಲೇ, Oppo A3x ಫೋನಿನ ಬೆಲೆ ಸೋರಿಕೆಯಾಗಿದೆ. ವರದಿಯ ಪ್ರಕಾರ, Oppo A3X ಫೋನಿನ 4GB RAM + 64GB ಸ್ಟೋರೇಜ್ ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ 12,499 ರೂ. ಇರಲಿದೆ. ಇನ್ನೂ, 4GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 13,499 ರೂ. ಆಗಿರಲಿದೆ. ಟಾಪ್ ವೇರಿಯಂಟ್ ಬೆಲೆ ಲಭ್ಯವಾಗಿಲ್ಲ.

ಈ ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆ

ಇದಲ್ಲದೆ, ಈ ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಸ್ಪಾರ್ಕಲ್ ಬ್ಲ್ಯಾಕ್, ಸ್ಟಾರ್‌ಲೈಟ್ ವೈಟ್ ಮತ್ತು ಸ್ಟಾರಿ ಪರ್ಪಲ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ದಪ್ಪವು ಕೇವಲ 7.68 ಮಿಮೀ ಇರಬಹುದು. ಈ ಒಪ್ಪೋ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರಲಿದೆ. ಸೋರಿಕೆಗಳ ಆಧಾರದ ಮೇಲೆ ಇದು 32MP ಮುಖ್ಯ ಕ್ಯಾಮೆರಾ ಜೊತೆಗೆ 5MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ.

OPPO A3x ಫೋನಿನ ನಿರೀಕ್ಷಿತ ಫೀಚರ್ಸ್

ಡಿಸ್ಪ್ಲೇ: OPPO A3x ಸ್ಮಾರ್ಟ್‌ಫೋನ್ 6.67 ಇಂಚಿನ HD ಪ್ಲಸ್ ಡಿಸ್ಲ್ಪೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಫೋನ್‌ನಲ್ಲಿ 120 Hzನ ಸ್ಕ್ರೀನ್ ರಿಫ್ರೆಶ್ ದರವನ್ನು ಪಡೆಯಬಹುದು. ಕಂಪನಿಯು ಮಿಲಿಟರಿ ದರ್ಜೆಯ ಆಘಾತ ನಿರೋಧಕ ಮತ್ತು ಬಹು ದ್ರವ ನಿರೋಧಕ ಪ್ರಮಾಣೀಕರಣದೊಂದಿಗೆ ಈ ಫೋನನ್ನು ತರುತ್ತಿದೆ.

ಪ್ರೊಸೆಸರ್: ಕಂಪನಿಯು MediaTek ಡೈಮೆನ್ಸಿಟಿ 6300 SoC ಪ್ರೊಸೆಸರ್‌ನೊಂದಿಗೆ Oppo A3X ಫೋನನ್ನು ಬಿಡುಗಡೆ ಮಾಡಬಹುದು. ಇದು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾದ ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಈ ಫೋನಿನಲ್ಲಿ 4GB ಮತ್ತು 6GB RAM ಮೆಮೊರಿಯನ್ನು ಪಡೆಯಬಹುದು. ಅಲ್ಲದೆ, ನೀವು ಇದರಲ್ಲಿ 64GB ಮತ್ತು 128GB ಸ್ಟೋರೇಜ್‌ ಪಡೆಯಬಹುದು.

Oppo A3X ಬೆಲೆ ಲೀಕ್! ಅತೀ ಕಮ್ಮಿ ಬೆಲೆಗೆ ಲಾಂಚ್: 32MP ಕ್ಯಾಮೆರಾ ಖಚಿತ!

ಕ್ಯಾಮೆರಾ: Oppo A3X ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ಕಂಪನಿಯು ಇದನ್ನು 8MP ಫ್ಲಿಕರ್ ಬ್ರೈಟ್‌ನೆಸ್ ಸೆನ್ಸಾರ್‌ನೊಂದಿಗೆ ನೀಡಬಹುದು. ಇದು 32MP ಮುಖ್ಯ ಕ್ಯಾಮೆರಾ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಫ್ರಂಟ್ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ. ಪ್ರಸ್ತುತ ಇತರ ಸಂವೇದಕಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಟರಿ: ಈ ಫೋನಿನ ಬ್ಯಾಟರಿ ಬ್ಯಾಕಪ್ ನೋಡುವುದಾದರೆ, ಕಂಪನಿಯು ಈ ಫೋನಿನಲ್ಲಿ 5100Amh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಇದು 45 ವ್ಯಾಟ್ ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ. IP54 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರು ನಿರೋಧಕವಾಗಿ ಬರುತ್ತದೆ. ಈ ಫೋನ್ Android 14 ಆಧಾರಿತ ColorOS 14ನಲ್ಲಿ ರನ್ ಆಗುತ್ತದೆ.

Best Mobiles in India

English summary
OPPO A3x 5G smartphone price, specs and design details leaked ahead of India launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+