Home
ಮೊಬೈಲ್

ಬಿಡುಗಡೆಗೂ ಮುನ್ನವೇ.. OPPO A3x 5G ಬೆಲೆ ಸೋರಿಕೆ: ರೂ.12,999 ಆರಂಭಿಕ ಬೆಲೆ?

ಒಪ್ಪೋ ಫೋನ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಒಪ್ಪೋ (Oppo) ಶೀಘ್ರದಲ್ಲೇ ಭಾರತದಲ್ಲಿ ಹೊಸ ಬಜೆಟ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದುವೇ OPPO A3x 5G ಸ್ಮಾರ್ಟ್‌ಫೋನ್‌. ಈ ಮೊಬೈಲ್‌ನ ಬೆಲೆ 15,000 ರೂ.ಗಿಂತಲೂ ಕಡಿಮೆ ಇರುತ್ತದೆ. ಈ ಬಗ್ಗೆ ಒಪ್ಪೋ ಇನ್ನೂ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, 91mobiles ಇದರ ವಿಶೇಷತೆಗಳು, ವಿನ್ಯಾಸ ಮತ್ತು ಬೆಲೆ ಬಗ್ಗೆ ವರದಿ ಮಾಡಿದೆ. ನೂತನ OPPO A3x 5G ಫೋನಿನ ವಿಶೇಷತೆಗಳೇನು? ಒಪ್ಪೋ ಪ್ರಿಯರು ಏನನ್ನು ನಿರೀಕ್ಷಿಸಬಹುದು? ಈ ಬಗ್ಗೆ ತಿಳಿಯೋಣ ಬನ್ನಿ.

Oppo A3X ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಆರಂಭಿಕ ಬೆಲೆ 12,999 ರೂ. ಇರಲಿದೆ. ಈ ಫೋನ್ ಒಪ್ಫೋ ಕಂಪನಿಯ ಹಳೆಯ ಮಾದರಿಗಳಾದ Oppo A18 ಮತ್ತು A59 ಅನ್ನು ರೀಪ್ಲೇಸ್ ಮಾಡುತ್ತದೆ. OPPO A3x ಫೋನ್ MediaTek ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿರಲಿದೆ. 1,000nits ಬ್ರೈಟ್‌ನೆಸ್‌ನೊಂದಿಗೆ LCD ಡಿಸ್ಪ್ಲೇಯನ್ನು ಹೊಂದಿರುತ್ತದೆ. 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,100mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಬಿಡುಗಡೆಗೂ ಮುನ್ನವೇ.. OPPO A3x 5G ಬೆಲೆ ಸೋರಿಕೆ: ರೂ.12,999 ಆರಂಭಿಕ ಬೆಲೆ?

OPPO A3x 5G ಭಾರತದಲ್ಲಿ ಬಿಡುಗಡೆ ಯಾವಾಗ?

OPPO A3x 5G ಫೋನನ್ನು ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. OPPO A3x ಮಾರುಕಟ್ಟೆಯಲ್ಲಿ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್‌ ಆಗಿರಲಿದೆ. iQOO ಮತ್ತು Vivo ಇತ್ತೀಚೆಗೆ ತಮ್ಮ ಬಜೆಟ್ 5G ಫೋನ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿವೆ. ಇದೀಗ, OPPO A3x ಈ ಎರಡೂ ಮೊಬೈಲ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

OPPO A3x 5G: ಭಾರತದಲ್ಲಿ ಬೆಲೆ ಎಷ್ಟಿರಲಿದೆ?

ಫೋನ್ ಬಿಡುಗಡೆಗೆ ಮುಂಚೆಯೇ, ಇದರ ಬೆಲೆ ಸೋರಿಕೆಯಾಗಿದೆ. OPPO A3x ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. 4GB+64GB ಸ್ಟೋರೇಜ್‌ನ ಬೆಲೆ 12,499 ರೂ. ಆಗಿರುತ್ತದೆ. 4GB+128GB ಸ್ಟೋರೇಜ್‌ನ ಬೆಲೆ 13,499 ರೂ. ಮತ್ತು ಟಾಪ್ ವೇರಿಯಂಟ್ 6GB+128GB ಬೆಲೆ 15,499 ರೂ. ಆಗಿರುತ್ತದೆ. 4GB RAM ಹೊಂದಿರುವ ಎರಡೂ ಮಾದರಿಗಳು ಜುಲೈ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಆಗಬಹುದು. 6GB RAM ಹೊಂದಿರುವ ಮಾದರಿಯು ಆಗಸ್ಟ್‌ ವೇಳೆಗೆ ಲಾಂಚ್‌ ಆಗುವ ನಿರೀಕ್ಷೆಯಿದೆ.

OPPO A3x ವಿಶೇಷತೆಗಳು: ಹೊಸದೇನಿರಲಿದೆ?

ಡಿಸ್ಪ್ಲೇ: ಇದು 6.67 ಇಂಚಿನ HD ಪ್ಲಸ್ ಡಿಸ್ಲ್ಪೇಯನ್ನು ಹೊಂದಿರುತ್ತದೆ. 120 Hzನ ಸ್ಕ್ರೀನ್ ರಿಫ್ರೆಶ್ ದರವನ್ನು ಫೋನ್‌ನಲ್ಲಿ ಕಾಣಬಹುದು. ಕಂಪನಿಯು ಮಿಲಿಟರಿ ದರ್ಜೆಯ ಆಘಾತ ನಿರೋಧಕ ಮತ್ತು ಬಹು ದ್ರವ ನಿರೋಧಕ ಪ್ರಮಾಣೀಕರಣದೊಂದಿಗೆ ಪರಿಚಯಿಸಬಹುದು.

ಪ್ರೊಸೆಸರ್: ಕಂಪನಿಯು Oppo A3X ಅನ್ನು MediaTek ಡೈಮೆನ್ಸಿಟಿ 6300 SoC ಜೊತೆಗೆ ಬಿಡುಗಡೆ ಮಾಡಬಹುದು. ಇದು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾದ ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ನೀವು ಫೋನ್‌ನಲ್ಲಿ 4GB ಮತ್ತು 6GB RAM ಮೆಮೊರಿಯನ್ನು ಪಡೆಯಬಹುದು. ಅಲ್ಲದೆ, ನೀವು ಇದರಲ್ಲಿ 64GB ಮತ್ತು 128GB ಸ್ಟೋರೇಜ್‌ ಪಡೆಯಬಹುದು.

ಕ್ಯಾಮೆರಾ: Oppo A3X ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ ಬರಲಿದೆ. ಕಂಪನಿಯು ಇದನ್ನು 8MP ಫ್ಲಿಕರ್ ಬ್ರೈಟ್‌ನೆಸ್ ಸೆನ್ಸಾರ್‌ನೊಂದಿಗೆ ನೀಡಬಹುದು. ಆದರೆ, ಪ್ರಸ್ತುತ ಇತರ ಸಂವೇದಕಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಫೋನ್‌ನಲ್ಲಿ ನೀವು 5MP ಫ್ರಂಟ್ ಕ್ಯಾಮೆರಾವನ್ನು ಪಡೆಯಬಹುದು.

ಸಾಫ್ಟ್‌ವೇರ್ ಮತ್ತು ಬ್ಯಾಟರಿ: ಈ ಫೋನ್ Android 14 ಆಧಾರಿತ ColorOS 14ನಲ್ಲಿ ರನ್ ಆಗುತ್ತದೆ. ಬ್ಯಾಟರಿಯ ಬಗ್ಗೆ ಹೇಳುವುದಾದರೆ, ನೀವು ಫೋನ್‌ನಲ್ಲಿ 5100Amh ಬ್ಯಾಟರಿಯನ್ನು ಕಾಣಬಹುದು. ಇದು 45 ವ್ಯಾಟ್ ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ.

ಬಣ್ಣಗಳು: OPPO A3x ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಸ್ಟಾರ್ರಿ ಪರ್ಪಲ್, ಸ್ಟಾರ್‌ಲೈಟ್ ವೈಟ್ ಮತ್ತು ಸ್ಪಾರ್ಕಲ್ ಬ್ಲ್ಯಾಕ್ ಕಲರ್‌ನಲ್ಲಿ ಲಭ್ಯವಾಗಲಿದೆ. ಈ ಫೋನ್ ದಪ್ಪವು ಕೇವಲ 7.68 ಮಿಮೀ ಇರಬಹುದು.

Best Mobiles in India

English summary
OPPO A3x 5G to launch in India soon: price, specs and design details revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+