Home
ಮೊಬೈಲ್

'ಒಪ್ಪೊ ಎ5' ಬೆಲೆ ಮತ್ತೆ ಇಳಿಕೆ!..64ಜಿಬಿ ಪೋನ್ ಬೆಲೆ ಇದೀಗ 11,990 ರೂ.!!

ಕಳೆದ ವರ್ಷದ ಕೊನೆಯಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದ ಒಪ್ಪೋ ಕಂಪೆನಿ ಬಜೆಟ್ ಸ್ಮಾರ್ಟ್‌ಫೋನ್ 'ಒಪ್ಪೊ ಎ5' ಬೆಲೆ ಇದೀಗ ಇಳಿಕೆಯಾಗಿದೆ. ರೆಡ್‌ಮಿ ನೋಟ್ 7 ಪ್ರೊ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ 64ಜಿಬಿ ಆಂತರಿಕ ಸ್ಟೋರೇಜ್‌ ಒಪ್ಪೊ ಎ5 ಪೋನ್ ಇದೀಗ ಕೇವಲ 11,990 ರೂ.ಗಳಿಗೆ ಲಭ್ಯವಿದೆ.

'ಒಪ್ಪೊ ಎ5' ಸ್ಮಾರ್ಟ್‌ಫೋನ್ ಬೆಲೆ 1000 ರೂ. ನಷ್ಟು ಇಳಿಕೆಯಾಗಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಾಣಗಳಲ್ಲಿ ಇದೀಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಫೋನ್ ಖರೀದಿಗೆ ಲಭ್ಯವಿದೆ. ಪ್ರಸ್ತುತ 11,990 ರೂ. ಗಳಿಗೆ ಲಭ್ಯವಿರುವ ಈ ಫೋನ್ ಕೆಲದಿನಗಳ ಹಿಂದಷ್ಟೇ 12,990 ರೂ.ಬೆಲೆ ಹೊಂದಿತ್ತು. ಇನ್ನು ಪೋನ್ ಲಾಂಚ್ ಆಗಿದ್ದಾಗಿನ ಬೆಲೆ 14,990 ರೂಪಾಯಿಗಳಾಗಿದ್ದವು.

'ಒಪ್ಪೊ ಎ5' ಬೆಲೆ ಮತ್ತೆ ಇಳಿಕೆ!..64ಜಿಬಿ ಪೋನ್ ಬೆಲೆ ಇದೀಗ 11,990 ರೂ.!!

6.2 ಇಂಚಿನ ಎಚ್‌ಡಿ+ ಡಿಸ್ಪ್ಲೇ, 4ಜಿಬಿ ರ್ಯಾಮ್, 62ಜಿಬಿ ಆಂತರಿಕ ಸ್ಟೋರೇಜ್‌ ಮತ್ತು 4230ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದ್ದು, ಹಾಗಾದರೆ, ಒಪ್ಪೋ ಎ5 ಹೊಂದಿರುವ ಇನ್ನಿತರ ಫೀಚರ್ಸ್ ಯಾವುವು ಮತ್ತು ಪೋನಿನ ವಿಶೇಷತೆಗಳು ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಫುಲ್ ವ್ಯೂವ್ ಡಿಸ್ಪ್ಲೇ

ಫುಲ್ ವ್ಯೂವ್ ಡಿಸ್ಪ್ಲೇ

6.2 ಇಂಚಿನ ಡಿಸ್ ಪ್ಲೇಯನ್ನು ಒಪ್ಪೋ A5 ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಇದು HD + ಗುಣಮಟ್ಟವನ್ನು ಹೊಂದಿದ್ದು, ಜೊತೆಗೆ ನಾಚ್ ಡಿಸ್ ಪ್ಲೇ ವಿನ್ಯಾಸ ಸಹ ಇದರಲ್ಲಿದೆ. ಇದಲ್ಲದೇ ಇದು 19:9 ಅನುಪಾತದ ಡಿಸ್ ಪ್ಲೇಯಾಗಿದ್ದು, ಫೂಲ್ ವ್ಯೂವ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, ಗೇಮ್ ಆಡಲು ಮತ್ತು ವಿಡಿಯೋ ನೋಡುವ ವಿನ್ಯಾಸವು ಇದರಲ್ಲಿದೆ.

ವೇಗದ ಪ್ರೊಸೆಸರ್

ವೇಗದ ಪ್ರೊಸೆಸರ್

ಒಪ್ಪೋ A5 ಸ್ಮಾರ್ಟ್ ಫೋನ್ ನಿನಲ್ಲಿ ವೇಗದ ಪ್ರೊಸೆಸರ್ ಅನ್ನು ಕಾಣಬಹುದಾಗಿದ್ದು, ಇದರಲ್ಲಿ 4 GB RAM ನೊಂದಿಗೆ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 256 GB ವೆರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಒಪ್ಪೋ A5 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 13 MP + 2 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದ್ದು, ಉತ್ತಮವಾದ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದರೊಂದಿಗೆ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಹೊಸ ಆಯ್ಕೆಗಳನ್ನು ಹೊಂದಿದೆ.

ಫೇಷಿಯಲ್ ರೆಕಗ್ನಿಷನ್

ಫೇಷಿಯಲ್ ರೆಕಗ್ನಿಷನ್

ಇದಲ್ಲದೇ ಒಪ್ಪೋ A5 ಸ್ಮಾರ್ಟ್ ಫೋನಿನಲ್ಲಿ ಫೇಷಿಯಲ್ ರೆಕಗ್ನೀಷನ್ ಆಯ್ಕೆಯನ್ನು ನೀಡಲಾಗಿದ್ದು, ಇದಕ್ಕಾಗಿಯೇ ಮುಂಭಾಗದಲ್ಲಿ ನೋಚ್ ಅನ್ನು ನೀಡಲಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಕಲರ್ OS ಅನ್ನು ಕಾಣಬಹುದಾಗಿದೆ.

 ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ನೀಲಿ ಹಾಗೂ ಕೆಂಪು ಬಣ್ಣದಲ್ಲಿ ಮಾರುಕಟ್ಟೆಯ ಪ್ರಮುಖ ಆಕರ್ಷಣೆಯ ಫೋನ್‌ ಎಂದೆನೆಸಿಕೊಂಡಿದರುವ ಒಪ್ಪೊ ಎ5 ಸ್ಮಾರ್ಟ್‌ಪೊನ್ 4230ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಪೇಟಿಎಂನಲ್ಲಿ 3000 ರು.ಗಳ ಕ್ಯಾಶ್‌ಬ್ಯಾಕ್ ಪಡೆಯುವ ಮೂಲಕ ಇದೀಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸಲು ಸಾಧ್ಯವಾಗಿದೆ.

Best Mobiles in India

English summary
Oppo A5 64GB variants have received permanent price cuts in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+