ಮಾರುಕಟ್ಟೆಗೆ ಹೊಸ OPPO ಫೋನ್ ಎಂಟ್ರಿ; 21,500ಕ್ಕಿಂತ ಕಡಿಮೆ ಬೆಲೆ.. ಅಬ್ಬಬಾ ಇಷ್ಟೆಲ್ಲಾ ಫೀಚರ್ಸ್
ಒಪ್ಪೋ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದೆ. ಸೈಲೆಂಟ್ ಆಗಿಯೇ ಹೊಸ 5G ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೌದು, ಒಪ್ಪೋ ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ತವರು ಮಾರುಕಟ್ಟೆ ಚೀನಾದಲ್ಲಿ ಒಪ್ಪೋ A5 ಪ್ರೊ 5G (OPPO A5 Pro 5G) ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ, ಈ 5G ಮೊಬೈಲ್ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಚೀನಾದಲ್ಲಿ ಮಾರಾಟವಾಗುತ್ತಿರುವ ಮೊಬೈಲ್‌ಗಿಂತ ವಿಭಿನ್ನವಾಗಿದೆ. ಈ ಸ್ಮಾರ್ಟ್‌ಫೋನ್ ತನ್ನ ಅದ್ಭುತ ಲುಕ್ ಮತ್ತು ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒಪ್ಪೋ A3 ಪ್ರೊ 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್, 5800mAh ಬ್ಯಾಟರಿ ಮತ್ತು 45W ಫ್ಲ್ಯಾಶ್ ಚಾರ್ಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಒಪ್ಪೋ A3 ಪ್ರೊ 5G ಬೆಲೆ
ಒಪ್ಪೋ A3 ಪ್ರೊ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವನ್ನು 21,199 ರೂ.ಗೆ ಬಿಡುಗಡೆ ಮಾಡಲಾಗಿದೆ. 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 25,199 ರೂ.ಗೆ ಲಭ್ಯವಿದೆ. ಈ ಒಪ್ಪೋ 5G ಫೋನನ್ನು ಫ್ಲವರ್ ಪಿಂಕ್ ಮತ್ತು ಮೋಚಾ ಬ್ರೌನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ, ಈ ಮೊಬೈಲ್ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತದೆ. ಭಾರತದಲ್ಲಿ ಒಪ್ಪೋ A5 ಪ್ರೊ ಬಿಡುಗಡೆಯಾಗುವ ಬಗ್ಗೆ ಕಂಪನಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಒಪ್ಪೋ A5 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ A5 ಪ್ರೊ ಮೊಬೈಲ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 1604 × 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ A5 ಪ್ರೊ 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಒಪ್ಪೋ A5 ಪ್ರೊ 5G ಸ್ಮಾರ್ಟ್‌ಫೋನ್ 16GB RAM ಮತ್ತು 8GB RAM ಹೊಂದಿದೆ. ಈ ಫೋನಿನಲ್ಲಿ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ಈ ಎರಡೂ ರೂಪಾಂತರಗಳಲ್ಲಿ ವರ್ಚುವಲ್ RAM ಬೆಂಬಲವೂ ಇದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್
ಒಪ್ಪೋ A5 ಪ್ರೊ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ A5 ಪ್ರೊ 5G ಮೊಬೈಲ್ 5800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಚೀನಾದಲ್ಲಿ ಮಾರಾಟವಾಗುತ್ತಿರುವ ಫೋನ್ 6000mAh ಬ್ಯಾಟರಿ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಒಪ್ಪೋ A3 ಪ್ರೊ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಇದು ಭದ್ರತೆ ಮತ್ತು ಫೋನ್ ಅನ್‌ಲಾಕಿಂಗ್‌ಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಡ್ಯುಯಲ್ ಸಿಮ್, 5G, ಡ್ಯುಯಲ್ 4G VoLTE, ವೈ-ಫೈ 5, ಬ್ಲೂಟೂತ್ 5.3, ಜಿಪಿಎಸ್, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








