ಬಜೆಟ್ ಬೆಲೆಯ ಹೊಸ 5G ಫೋನ್ 'OPPO A5' ಬಿಡುಗಡೆ!
ಭಾರತದಲ್ಲಿ OPPO F29 ಹೆಸರಿನಲ್ಲಿ ಪರಿಚಯಿಸಲಾಗುತ್ತದೆ ಎನ್ನಲಾದ ಬಜೆಟ್ ಬೆಲೆಯ 5G ಸ್ಮಾರ್ಟ್‌ಫೋನ್ ಇದೀಗ ಚೀನಾದಲ್ಲಿ OPPO A5 ಹೆಸರಿನಲ್ಲಿ ಬಿಡುಗಡೆಗೊಂಡಿದೆ. ಚೀನಾದಲ್ಲಿಂದು OPPO ಕಂಪೆನಿ ಆಯೋಜಿಸಿದ್ದ ಸಮಾರಂಭದಲ್ಲಿ ಬಜೆಟ್ ಬೆಲೆಗಳಲ್ಲಿ OPPO A5 ಸ್ಮಾರ್ಟ್‌ಫೊನ್ ಬಿಡುಗಡೆಯಾಗಿದ್ದು, ಈ ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7-ಇಂಚಿನ FHD+ AMOLED ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಸ್ನಾಪ್‌ಡ್ರಾಗನ್ 6 Gen 1 SoC ನಿಂದ ಚಾಲಿತವಾಗಿದೆ. ಹಾಗಾದರೆ, ಹೊಸ OPPO A5 ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
OPPO A5 ವೈಶಿಷ್ಟ್ಯಗಳು
OPPO A5 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7-ಇಂಚಿನ FHD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1200 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದ್ದು, ಇದು ಪ್ರಕಾಶಮಾನ ಪರಿಸ್ಥಿತಿಗಳಲ್ಲಿಯೂ ಉತ್ತಮ ದೃಶ್ಯತೆಯನ್ನು ಖಚಿತಪಡಿಸುತ್ತದೆ. ಸ್ನಾಪ್‌ಡ್ರಾಗನ್ 6 Gen 1 SoC ನಿಂದ ಚಾಲಿತವಾಗಿರುವ ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ColorOS 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್ ಸಿಮ್ ಕಾರ್ಡ್‌ಗಳನ್ನು ಬೆಂಬಲಿಸುವ ಈ ಸ್ಮಾರ್ಟ್‌ಫೋನ್ 128GB ರಿಂದ 512GB ವರೆಗೆ ಶೇಖರಣಾ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, OPPO A5 ಸ್ಮಾರ್ಟ್‌ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 2MP ಮಾನೋಕ್ರೋಮ್ ಲೆನ್ಸ್ ಅನ್ನು ಒಳಗೊಂಡ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು ಮಾಡಲು ಮುಂಭಾಗದದಲ್ಲಿ 8MP ಕ್ಯಾಮೆರಾ ಇದೆ. ಸಂಪರ್ಕ ವೈಶಿಷ್ಟ್ಯಗಳಲ್ಲಿ SA/NSA 5G ನೆಟ್‌ವರ್ಕ್‌ಗಳು, Wi-Fi ac, ಬ್ಲೂಟೂತ್ 5.1, GPS, GLONASS, ಗೆಲಿಲಿಯೋ, QZSS ಮತ್ತು NFC ಸೇರಿವೆ. ಮತ್ತು ಭದ್ರತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.

ಈ OPPO A5 ಸ್ಮಾರ್ಟ್‌ಫೋನ್ 45W SUPERVOOC ತಂತ್ರಜ್ಞಾನದ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6500mAh ಬ್ಯಾಟರಿಯನ್ನು ಹೊಂದಿದೆ, ಇದು ಬಳಕೆದಾರರಿಗೆ ತ್ವರಿತವಾಗಿ ತಮ್ಮ ಸಾಧನಗಳನ್ನು ರೀಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಇದರ Vitality ಆವೃತ್ತಿಯು 5640mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಅದೇ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಉಳಿಸುತ್ತದೆ. ಇನ್ನು ಈ OPPO A5 ಫೋನ್ ಕಪ್ಪು ಅಥವಾ ನೀಲಿ/ಗುಲಾಬಿ ಬಣ್ಣಗಳಲ್ಲಿ ಬರಲಿದೆ ಹಾಗೂ 161.57×74.47×7.65mm ಅಳತೆಯಲ್ಲಿ 185g ತೂಕವಿದೆ.
ಬೆಲೆ ವಿವರಗಳು
ಚೀನಾದಲ್ಲಿ ಬಿಡುಗಡೆಯಾಗಿರುವ OPPO A5 ಸ್ಮಾರ್ಟ್‌ಫೋನ್ ಈಗಾಗಲೇ ಪೂರ್ವ-ಆರ್ಡರ್‌ಗೆ ಲಭ್ಯವಿದ್ದು, ಇದೇ ಮಾರ್ಚ್ 21 ರಂದು ಮಾರಾಟಕ್ಕೆ ಬರುತ್ತದೆ. ಚೀನಾದಲ್ಲಿ OPPO A5 ಸ್ಮಾರ್ಟ್‌ಫೋನಿನ ಮೂಲ ಮಾದರಿಯ ಬೆಲೆಯು ಸುಮಾರು 15,540 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಹೆಚ್ಚಿನ ಕಾನ್ಫಿಗರೇಶನ್‌ಗಳಿಗೆ 23,925 ರೂ. ವರೆಗೆ ಬೆಲೆ ಇದೆ. ಇದರ Vitality ಆವೃತ್ತಿಯ ಬೆಲೆ 14,345 ರೂ.ಗಳಿಂದ 19,130 ರೂ. ವರೆಗೆ ಇದೆ. ಹಲವು ವರದಿಗಳು ತಿಳಿಸಿರುವಂತೆ, ಈ OPPO A5 ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಶೀಘ್ರವೇ OPPO F29 ಹೆಸರಿನಲ್ಲಿ ಪರಿಚಯಿಸಲಾಗುತ್ತದೆ ಎನ್ನಲಾಗಿದೆ. ಆದರೆ, ಈ ಕುರಿತಂತೆ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.


Click it and Unblock the Notifications








