₹20,000 ಒಳಗೆ ಬೃಹತ್ 7,000mAh ಬ್ಯಾಟರಿಯ ಹೊಸ Oppo 5G ಫೋನ್ ಲಾಂಚ್!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Oppo ತನ್ನ ಬಹಿನಿರೀಕ್ಷಿತ ಹೊಸ Oppo A6 5G ಫೋನ್ ಅನ್ನು ಚೀನಾದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಮಧ್ಯಮ ಶ್ರೇಣಿಯ ವಿಭಾಗವನ್ನು ಗುರಿಯಾಗಿಸಿಕೊಂಡಿರುವ ಈ ಹೊಸ ಸ್ಮಾರ್ಟ್‌ಫೋನ್, 6.57-ಇಂಚಿನ Full-HD+ AMOLED ಡಿಸ್‌ಪ್ಲೇ, MediaTek Dimensity 6300 ಆಕ್ಟಾ-ಕೋರ್ ಮತ್ತು 50MP ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದೆ. ವಿಶೇಷವಾಗಿ ಇದರ ಬೃಹತ್ 7,000mAh ಸಾಮರ್ಥ್ಯದ ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಬೆಂಬಲದಿಂದ ಗಮನ ಸೆಳೆಯುತ್ತಿದೆ.
Oppo A6 5G ಫೋನ್: ಸಂಪೂರ್ಣ ವೈಶಿಷ್ಟ್ಯಗಳು
ಈ ಹೊಸ Oppo A6 5G ಫೋನ್ 6.57-ಇಂಚಿನ Full-HD+ AMOLED ಡಿಸ್ಪ್ಲೇ ಹೊಂದಿದೆ. ಇದು 2,372×1,080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹಾಗೂ ಗರಿಷ್ಠ 1,400 nits ಬ್ರೈಟ್ನೆಸ್ ಒದಗಿಸುತ್ತದೆ. 93% ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿರುವುದರಿಂದ ವೀಕ್ಷಣಾ ಅನುಭವ ಹೆಚ್ಚು ತೃಪ್ತಿಕರವಾಗಲಿದೆ. ಇದಲ್ಲದೆ, ಈ ಫೋನ್ IP69 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆಯನ್ನು ಒದಗಿಸುತ್ತದೆ. ಬ್ಲೂ ಓಷನ್ ಲೈಟ್, ವೆಲ್ವೆಟ್ ಗ್ರೇ ಮತ್ತು ಗುಲಾಬಿ ಬಣ್ಣಗಳ ಆಯ್ಕೆಯಲ್ಲಿ ಇದು ಲಭ್ಯವಿದೆ.
ಕಾರ್ಯಕ್ಷಮತೆಗಾಗಿ, MediaTek Dimensity 6300 ಆಕ್ಟಾ-ಕೋರ್ ಚಿಪ್‌ಸೆಟ್ ಈ ಫೋನ್‌ಗೆ ಶಕ್ತಿ ನೀಡುತ್ತದೆ. ಗರಿಷ್ಠ 2.4GHz ಕ್ಲಾಕ್ ಸ್ಪೀಡ್ ಒದಗಿಸುವ ಈ ಪ್ರೊಸೆಸರ್‌ಗೆ Mali-G57 MC2 GPU ಸಹಕಾರ ನೀಡುತ್ತದೆ. ಬಳಕೆದಾರರಿಗೆ ಗರಿಷ್ಠ 12GB RAM ಮತ್ತು 512GB ವರೆಗೆ UFS 2.2 ಸ್ಟೋರೇಜ್ ಆಯ್ಕೆಗಳು ಲಭ್ಯವಿದ್ದು, microSD ಕಾರ್ಡ್ ಮೂಲಕ ಹೆಚ್ಚುವರಿ ಸ್ಟೋರೇಜ್ ಬೆಂಬಲವೂ ಇದೆ.

Oppo A6 5G ಯ ಪ್ರಮುಖ ಆಕರ್ಷಣೆ ಅದರ 7,000mAh ಸಾಮರ್ಥ್ಯದ ಬ್ಯಾಟರಿ. ಈ ಸಾಮರ್ಥ್ಯ ದೀರ್ಘಾವಧಿಯ ಬಳಕೆಗೆ ಅನುಕೂಲವಾಗಲಿದ್ದು, ಗೇಮಿಂಗ್, ಸ್ಟ್ರೀಮಿಂಗ್ ಹಾಗೂ ದೈನಂದಿನ ಬಳಕೆಯಲ್ಲಿ ಬ್ಯಾಟರಿ ಚಿಂತೆ ಕಡಿಮೆ ಮಾಡುವಲ್ಲಿ ಸಹಾಯಕವಾಗಲಿದೆ. ಜೊತೆಗೆ, 80W ಫಾಸ್ಟ್ ಚಾರ್ಜಿಂಗ್ ಬೆಂಬಲದಿಂದ ಫೋನ್ ಅನ್ನು ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯ. ಇದರಲ್ಲಿ 50MP ಮುಖ್ಯ ವೈಡ್ ಆಂಗಲ್ ಲೆನ್ಸ್ ಹಾಗೂ 2MP ಏಕವರ್ಣ ಸೆನ್ಸರ್ ಇದೆ. 10x ವರೆಗೆ ಡಿಜಿಟಲ್ ಜೂಮ್ ಸೌಲಭ್ಯ ಒದಗಿಸಲಾಗಿದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಲಭ್ಯವಿದ್ದು, ವೀಡಿಯೋ ಕಾಲ್ ಮತ್ತು ಸೆಲ್ಫಿ ಪ್ರಿಯರಿಗೆ ಅನುಕೂಲವಾಗಲಿದೆ. ಸುರಕ್ಷತೆಗಾಗಿ, ಫೋನ್ ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.
Oppo A6 5G ಫೋನ್: ಬೆಲೆ ಮತ್ತು ಲಭ್ಯತೆ
ಬೆಲೆಯ ಕುರಿತು ಮಾತನಾಡುವುದಾದರೆ, ಚೀನಾದಲ್ಲಿ Oppo A6 5G ಯ ಆರಂಭಿಕ ಬೆಲೆ CNY 1,599 (ಅಂದಾಜು ₹20,000 ಕ್ಕಿಂತ ಕಡಿಮೆ) ಆಗಿದೆ. ಇದು 8GB RAM + 256GB ಸ್ಟೋರೇಜ್ ಮಾದರಿಗಾಗಿ ಅನ್ವಯಿಸುತ್ತದೆ. 12GB RAM + 256GB ಮತ್ತು 12GB RAM + 512GB ಮಾದರಿಗಳ ಬೆಲೆ ಇನ್ನೂ ಘೋಷಿಸಲ್ಪಟ್ಟಿಲ್ಲ.
ಭಾರತದಲ್ಲಿ ಈ ಫೋನ್ ಬಿಡುಗಡೆ ದಿನಾಂಕವನ್ನು ಕಂಪನಿ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಸಾಮಾನ್ಯವಾಗಿ Oppo ತನ್ನ ಹೊಸ ಮಾದರಿಗಳನ್ನು ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗೆ ತರುವುದರಿಂದ, ಶೀಘ್ರದಲ್ಲೇ ಭಾರತದಲ್ಲೂ Oppo A6 5G ಲಭ್ಯವಾಗುವ ನಿರೀಕ್ಷೆಯಿದೆ. ಇದನ್ನು ಸುಮಾರು ₹20,000 ದರದಲ್ಲಿ ಪರಿಚಯಿಸಿದರೆ, Redmi, Realme ಮತ್ತು Samsung ನಂತಹ ಬ್ರ್ಯಾಂಡ್‌ಗಳ ಮಧ್ಯಮ ಶ್ರೇಣಿಯ ಫೋನ್‌ಗಳಿಗೆ ಇದು ಗಟ್ಟಿಯಾದ ಸ್ಪರ್ಧಿಯಾಗುವ ಸಾಧ್ಯತೆ ಇದೆ.


Click it and Unblock the Notifications








