Oppo A6 5G vs Realme P3 5G: 20 ಸಾವಿರದೊಳಗೆ ಯಾವ ಫೋನ್ ಬೆಸ್ಟ್?
ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ದರ್ಜೆಯ 5G ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ Oppo ಕಂಪೆನಿಯು ತನ್ನ ಹೊಸ Oppo A6 5G ಅನ್ನು ಇಂದಷ್ಟೇ ಬಿಡುಗಡೆ ಮಾಡಿದೆ. ಇದು ಈಗಾಗಲೇ ಲಭ್ಯವಿರುವ Realme P3 5G ಗೆ ನೇರ ಸ್ಪರ್ಧೆ ನೀಡುತ್ತಿದೆ. ಈ ಎರಡೂ ಫೋನ್‌ಗಳು 5G ಸಂಪರ್ಕ, ದೊಡ್ಡ ಬ್ಯಾಟರಿ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಆದರೆ ಕಾಗದದ ಮೇಲಿನ ಹೋಲಿಕೆಯಲ್ಲಿ ಈ ಎರಡೂ ಫೋನ್‌ಗಳಲ್ಲಿ ಯಾವುದು ಹೆಚ್ಚು ಮೌಲ್ಯ ನೀಡುತ್ತದೆ? ಎಂಬ ಸಂಪೂರ್ಣ ವಿವರವನ್ನು ಇಂದಿನ ಲೇಖನದಲ್ಲಿ ನೋಡೋಣ ಬನ್ನಿ.
Oppo A6 5Gನ ಆರಂಭಿಕ ಬೆಲೆ ₹17,999 ಆಗಿದ್ದು, ಈ ಬೆಲೆಗೆ 4GB RAM ಮತ್ತು 128GB ಸ್ಟೋರೇಜ್ ದೊರೆಯುತ್ತದೆ. ಹೆಚ್ಚಿನ ಬಳಕೆದಾರರಿಗಾಗಿ 6GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮಾದರಿಯೂ ಲಭ್ಯವಿದ್ದು, ಅದರ ಬೆಲೆ ₹21,999 ರೂ. ಆಗಿದೆ.
ಇನ್ನೊಂದೆಡೆ, Realme P3 5G ಕಡಿಮೆ ಆರಂಭಿಕ ಬೆಲೆಯಿಂದಲೇ ಗಮನ ಸೆಳೆಯುತ್ತದೆ. 6GB RAM ಮತ್ತು 128GB ಸ್ಟೋರೇಜ್ ರೂಪಾಂತರ ₹16,999 ಕ್ಕೆ ದೊರೆಯುತ್ತದೆ. ಇದರ 8GB RAM ಆಯ್ಕೆಗಳು ಕ್ರಮವಾಗಿ ₹17,999 ಮತ್ತು ₹19,999 ಬೆಲೆಗಳಲ್ಲಿ ಲಭ್ಯವಿವೆ.
ಡಿಸ್‌ಪ್ಲೇ ಗುಣಮಟ್ಟ: LCD vs AMOLED ವ್ಯತ್ಯಾಸ ಸ್ಪಷ್ಟ
Oppo A6 5Gನಲ್ಲಿ 6.75 ಇಂಚಿನ ದೊಡ್ಡ HD+ LCD ಡಿಸ್‌ಪ್ಲೇ ಇದೆ. ಇದು 120Hz ರಿಫ್ರೆಶ್ ರೇಟ್ ಮತ್ತು 1,125 ನಿಟ್ಸ್ ವರೆಗೆ ಬ್ರೈಟ್ನೆಸ್ ನೀಡುತ್ತದೆ. ದೊಡ್ಡ ಪರದೆ ಬೇಕು ಎನ್ನುವವರಿಗೆ ಇದು ಅನುಕೂಲವಾದರೂ, ರೆಸಲ್ಯೂಷನ್ HD+ ಮಟ್ಟಕ್ಕೆ ಸೀಮಿತವಾಗಿದೆ.
Realme P3 5Gನಲ್ಲಿ 6.67 ಇಂಚಿನ AMOLED ಡಿಸ್‌ಪ್ಲೇ ಇದೆ. 120Hz ರಿಫ್ರೆಶ್ ರೇಟ್ ಜೊತೆಗೆ 2,000 ನಿಟ್ಸ್ ವರೆಗೆ ಬ್ರೈಟ್ನೆಸ್ ಇರುವುದರಿಂದ, ವಿಡಿಯೋ, ಗೇಮಿಂಗ್ ಮತ್ತು ಹೊರಾಂಗಣ ಬಳಕೆಗೆ ಇದು ಹೆಚ್ಚು ಸೂಕ್ತವಾಗಿದೆ. ಡಿಸ್‌ಪ್ಲೇ ಗುಣಮಟ್ಟದ ವಿಷಯದಲ್ಲಿ Realme ಸ್ಪಷ್ಟ ಮುನ್ನಡೆ ಹೊಂದಿದೆ.
ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್: ದಿನನಿತ್ಯದ ಬಳಕೆಗೂ ಗೇಮಿಂಗ್‌ಗೂ ಯಾವುದು ಉತ್ತಮ?
Oppo A6 5Gನಲ್ಲಿ MediaTek Dimensity 6300 ಚಿಪ್‌ಸೆಟ್ ಬಳಸಲಾಗಿದೆ. ಇದು ದಿನನಿತ್ಯದ ಬಳಕೆ, ಸೋಶಿಯಲ್ ಮೀಡಿಯಾ ಮತ್ತು ಸ್ಟ್ರೀಮಿಂಗ್‌ಗೆ ಸಮರ್ಪಕವಾಗಿದೆ. ColorOS 15 ಆಧಾರಿತ Android 15 ಇದರೊಂದಿಗೆ ಬರುತ್ತದೆ, ಇದು ಕ್ಲೀನ್ ಇಂಟರ್ಫೇಸ್ ಮತ್ತು ಉಪಯುಕ್ತ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
Realme P3 5Gನಲ್ಲಿ Qualcomm Snapdragon 6 Gen 4 ಪ್ರೊಸೆಸರ್ ಇದೆ. ಇದು ಹೆಚ್ಚು ಶಕ್ತಿಶಾಲಿಯಾಗಿದ್ದು, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ. Android 15 ಆಧಾರಿತ Realme UI 6.0 ಸಹ ಸ್ಮೂತ್ ಅನುಭವ ನೀಡುತ್ತದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ Realme ಮತ್ತೊಮ್ಮೆ ಮುನ್ನಡೆ ಸಾಧಿಸುತ್ತದೆ.



Click it and Unblock the Notifications








