Home
ಮೊಬೈಲ್

ಭಾರತದಲ್ಲಿ ಶಕ್ತಿಯುತ ಬ್ಯಾಟರಿಯ ಹೊಸ Oppo A6 Pro 5G ಫೋನ್ ಬಿಡುಗಡೆ!

Oppo ಕಂಪೆನಿಯ ಬಹುನಿರೀಕ್ಷಿತ Oppo A6 Pro 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ (5,ಸೋಮವಾರ) ಭರ್ಜರಿಯಾಗಿ ಎಂಟ್ರಿ ನೀಡಿದೆ. ಈಗಾಘಲೇ ಹಲವಾರು ವದಂತಿಯ ಸುದ್ದಿಗಳು ತಿಳಿಸಿದಂತೆಯೇ, ಈ ಹೊಸ ಸ್ಮಾರ್ಟ್‌ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 40 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುವಂತಹ 7,000mAh ಬ್ಯಾಟರಿ ಹೊತ್ತು ಬಂದಿದೆ. ಜೊತೆಗೆ ಮಧ್ಯಮ ಬೆಲೆ ಶ್ರೇಣಿಯ ಗ್ರಾಹಕರ ಗಮನ ಸೆಳೆಯುವಂತೆ ವಿನ್ಯಾಸಗೊಂಡಿದೆ. ಹಾಗಾದರೆ, ಹೊಸ Oppo A6 Pro 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Oppo A6 Pro 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo A6 Pro 5G ಪೋನ್ ಬೆಲೆ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ಗೆ ರೂ. 21,999 ರಿಂದ ಆರಂಭವಾಗುತ್ತದೆ. ಇದರ 8GB RAM ಹಾಗೂ 256GB ಸ್ಟೋರೇಜ್ ವೇರಿಯಂಟ್‌ಗೆ ರೂ. 23,999 ನಿಗದಿಪಡಿಸಲಾಗಿದೆ. ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ರೂ. 2,000 ವರೆಗೆ ತಕ್ಷಣದ ರಿಯಾಯಿತಿ ಕೂಡ ಲಭ್ಯವಿದ್ದು, ಇದರಿಂದ ಫೋನ್ ಬೆಲೆ ಸ್ವಲ್ಪ ಇಳಿಕೆಯಾಗುತ್ತದೆ. ಇನ್ನು ಈ ಫೋನ್ ಅನ್ನು Oppo ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದ್ದು, Aurora Gold ಮತ್ತು Cappuccino Brown ಎಂಬ ಎರಡು ಪ್ರೀಮಿಯಂ ಬಣ್ಣ ಆಯ್ಕೆಗಳು ಲಭ್ಯವಿವೆ.

Oppo A6 Pro 5G: ಪ್ರಮುಖ ವೈಶಿಷ್ಟ್ಯಗಳು
ಡಿಸ್ಪ್ಲೇ ವಿಭಾಗದಲ್ಲಿ, ಈ Oppo A6 Pro 5G ಫೋನ್ 120Hz ರಿಫ್ರೆಶ್ ರೇಟ್‌ ಬೆಂಬಲದ 6.75 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಗರಿಷ್ಠ 1,125 ನಿಟ್ಸ್ ಬ್ರೈಟ್ನೆಸ್ ಇರುವುದರಿಂದ ಹೊರಾಂಗಣದಲ್ಲಿ ಕೂಡ ಸ್ಪಷ್ಟ ವೀಕ್ಷಣೆ ಸಾಧ್ಯವಾಗುತ್ತದೆ. ಕಾರ್ಯಕ್ಷಮತೆಗಾಗಿ, ಈ ಫೋನ್‌ನಲ್ಲಿ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಬಳಸಲಾಗಿದೆ. ಇದಕ್ಕೆ ARM Mali-G57 MC2 GPU ಜೋಡಿಸಲ್ಪಟ್ಟಿದ್ದು, ಲಘು ಗೇಮಿಂಗ್‌ಗೆ ಶಕ್ತಿ ಒದಗಿಸುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, Android 15 ಆಧಾರಿತ ColorOS 15 ನಲ್ಲಿ ಉತ್ತಮ ಭದ್ರತೆ ಮತ್ತು ಸುಧಾರಿತ ಬಳಕೆದಾರ ಅನುಭವವನ್ನು ಒದಗಿಸುವ ಭರವಸೆ ನೀಡಿದೆ.

ಭಾರತದಲ್ಲಿ ಶಕ್ತಿಯುತ ಬ್ಯಾಟರಿಯ ಹೊಸ Oppo A6 Pro 5G ಫೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, Oppo A6 Pro 5G ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಮೊನೋಕ್ರೋಮ್ ಸೆನ್ಸರ್ ಇದೆ. ಇದಕ್ಕೆ 1080p ವೀಡಿಯೋ ರೆಕಾರ್ಡಿಂಗ್ ಶಕ್ತಿ ಇದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಸುರಕ್ಷತೆ ಮತ್ತು ಕನೆಕ್ಟಿವಿಟಿ ವಿಷಯದಲ್ಲಿ, ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ಬೆಂಬಲ ದೊರೆಯುತ್ತದೆ. 5G, 4G LTE, Wi-Fi, Bluetooth 5.4, USB Type-C ಹಾಗೂ ಹಲವು ನ್ಯಾವಿಗೇಶನ್ ಸಿಸ್ಟಮ್‌ಗಳ ಬೆಂಬಲವಿದೆ. ಇನ್ನು ಧೂಳು ಮತ್ತು ನೀರಿನಿಂದ ರಕಷಣೆಗಾಗಿ IP69 ರೇಟಿಂಗ್ ಇದೆ.

ಈ ಫೋನ್‌ನ ಪ್ರಮುಖ ಹೈಲೈಟ್ ಅದರ ದೊಡ್ಡ 7,000mAh ಬ್ಯಾಟರಿ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ದೀರ್ಘಕಾಲ ಬಳಕೆಗೆ ಇದು ಸೂಕ್ತವಾಗಿದೆ. ಕಂಪನಿಯ ಪ್ರಕಾರ, ಇದು 40 ದಿನಗಳವರೆಗೆ ಸ್ಟ್ಯಾಂಡ್‌ಬೈ ನೀಡಬಲ್ಲದು. ಜೊತೆಗೆ 80W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲ ಇರುವುದರಿಂದ ಸುಮಾರು ಒಂದು ಗಂಟೆಯೊಳಗೆ ಫೋನ್ ಸಂಪೂರ್ಣ ಚಾರ್ಜ್ ಆಗುತ್ತದೆ. ಹೆಚ್ಚು ಬಳಕೆ ಮಾಡುವ ಬಳಕೆದಾರರಿಗೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಗಟ್ಟಿಮುಟ್ಟಾದ ನಿರ್ಮಾಣವನ್ನು (ನಿರ್ದಿಷ್ಟ ವಸ್ತುಗಳ ಬಗ್ಗೆ ತಿಳಿಸಿಲ್ಲ) ಹೊಂದಿರುವ ಈ ಸಾಧನವು ಸುಮಾರು 216 ಗ್ರಾಂ ತೂಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಒಟ್ಟಾರೆಯಾಗಿ, ದೀರ್ಘ ಬ್ಯಾಟರಿ ಬ್ಯಾಕಪ್ಮತ್ತು ನಂಬಿಕೆಯ ಒಪ್ಪೋ ಬ್ರಾಂಡ್ ಬೆಂಬಲವನ್ನು ಬಯಸುವವರಿಗೆ Oppo A6 Pro 5G ಒಂದು ಮೌಲ್ಯಯುತ ಆಯ್ಕೆ ಎನ್ನಬಹುದು. ಆದರೆ, ಮಧ್ಯಮ ಬೆಲೆ ಶ್ರೇಣಿಯಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಭಾರತೀಯ ಬಳಕೆದಾರರು ಗಮನಿಸಬಹುದಾದ ಹಲವಾರು ಆಯ್ಕೆಗಳಿವೆ ಎಂಬುದನ್ನು ಮರೆಯಬಾರದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?...ಈ ಹೊಸ Oppo A6 Pro 5G ಸ್ಮಾರ್ಟ್‌ಫೋನ್ ಬೆಲೆಗೆ ತಕ್ಕಂತಹ ಫೀಚರ್ಸ್ ಹೊಂದಿದೆ ಎಂದು ನಿಮಗೆ ಅನಿಸುತ್ತಿದೆಯೇ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Oppo has launched the Oppo A6 Pro 5G in India with a massive 7,000mAh battery, 80W fast charging support, and a starting price of ₹21,999, targeting mid-range smartphone buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+