12,499 ರೂ.ಗೆ Oppo A6x 5G ಲಾಂಚ್: 6,500mAh ಬ್ಯಾಟರಿ, 45W ಚಾರ್ಜಿಂಗ್!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಫ್ಲಾಗ್‌ಶಿಪ್ ಫೋನ್‌ಗಳ ಜೋರಾಗಿರುವ ಮಧ್ಯೆ, Oppo ಇಂದು ತನ್ನ ಬಜೆಟ್ ಬೆಲೆಯ ಮತ್ತೊಂದು ಶಕ್ತಿಶಾಲಿ 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ದೇಶದಲ್ಲಿ Oppo A6x 5G ಹೆಸರಿನಲ್ಲಿ ಈ ಹೊಸ ಫೋನ್ ಬಿಡುಗಡೆಯಾಗಿದ್ದು, ಇದು ಕೇವಲ ₹12,499 ಬೆಲೆಯಲ್ಲಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, MediaTek Dimensity 6000 ಪ್ರೊಸೆಸರ್ ಮತ್ತು 6GB RAM ಹಾಗೂ 128GB ಆನ್‌ಬೋರ್ಡ್ ಸ್ಟೋರೇಜ್ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ಹೊಸ Oppo A6x 5G ಫೋನ್ ಹೇಗಿದೆ?, ಫೀಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Oppo A6x 5G: ಫೀಚರ್ಸ್ ಮತ್ತು ಪ್ರಮುಖ ವೈಶಿಷ್ಟ್ಯಗಳು
Oppo A6x 5G ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುವ ಡ್ಯುಯಲ್ ಸಿಮ್ ಫೋನ್ ಆಗಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ 6.75-ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, ಇದು HD+ (720x1,570 ಪಿಕ್ಸೆಲ್‌ಗಳು) ರೆಸಲ್ಯೂಶನ್, 120Hz ವರೆಗೆ ರಿಫ್ರೆಶ್ ರೇಟ್, 256ppi ಪಿಕ್ಸೆಲ್ ಸಾಂದ್ರತೆ, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,125 nits ವರೆಗೆ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಜೊತೆಗೆ 16.7 ಮಿಲಿಯನ್ ಬಣ್ಣಗಳು, 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಮತ್ತು 100 ಪ್ರತಿಶತ sRGB ಅನ್ನು ಹೊಂದಿದೆ.
ಕಾರ್ಯಕ್ಷಮತೆಗಾಗಿ, Oppo A6x 5G ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಹೊಂದಿದೆ. ಇದನ್ನು ARM ಮಾಲಿ-G57 MC2 GPU ಜೊತೆಗೆ ಜೋಡಿಸಲಾಗಿದೆ. ಜೊತೆಗೆ ಇದು 6GB ವರೆಗೆ LPDDR4x RAM ಮತ್ತು 128GB ವರೆಗೆ UFS2.2 ಆನ್‌ಬೋರ್ಡ್ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 45W ವೈರ್ಡ್ ಸೂಪರ್VOOC ವೇಗದ ಚಾರ್ಜಿಂಗ್ ಬೆಂಬಲಿಸುವ 6,500mAh ಬೃಹತ್ ಬ್ಯಾಟರಿಯನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಇದು ಅತ್ಯುತ್ತಮ ಬ್ಯಾಟರಿ ವೇಗ ಮತ್ತು ಸಾಮರ್ಥ್ಯವನ್ನು ನೀಡುತ್ತಿದೆ.

ಕ್ಯಾಮೆರಾ ವಿಭಾಗದಲ್ಲಿ, Oppo A6x 5G ಫೋನಿನ್ 13-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಕ್ಯಾಮೆರಾವನ್ನು ಹೊಂದಿದ್ದು, ಇದು f/2.2 ಅಪರ್ಚರ್, 77-ಡಿಗ್ರಿ ವ್ಯೂ ಫೀಲ್ಡ್ ಮತ್ತು ಆಟೋ ಫೋಕಸ್ ಅನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಇದೂ ಸಹ , f/2.2 ಅಪರ್ಚರ್ ಮತ್ತು 77-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಇದರ . ಹಿಂಬದಿಯ ಕ್ಯಾಮೆರಾ 60 fps ವರೆಗೆ 1080p ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, ಸೆಲ್ಫಿ ಕ್ಯಾಮೆರಾ 30fps ನಲ್ಲಿ 1080p ವೀಡಿಯೊಗಳನ್ನು ಶೂಟ್ ಮಾಡುತ್ತದೆ.
ಸಂಪರ್ಕ ಆಯ್ಕೆಗಳ ವಿಷಯದಲ್ಲಿ, Oppo A6x 5G ಫೋನಿನಲ್ಲಿ 5G, 4G LTE, Wi-Fi 5, ಬ್ಲೂಟೂತ್ 5.4, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್ ವೈಶಿಷ್ಟ್ಯಗಳಿವೆ. ಮತ್ತು ಈ ಫೋನ್ 166.6x78.5x8.6mm ಆಯಾಮಗಳನ್ನು ಹೊಂದಿದ್ದು, ಸುಮಾರು 212g ತೂಗುತ್ತದೆ.
Oppo A6x 5G : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo A6x 5G ಫೋನ್ ಬೆಲೆ (4GB RAM + 64GB ಸ್ಟೋರೇಜ್) 12,499 ರೂ.ಗಳಿಂದ ರಿಂದ ಪ್ರಾರಂಭವಾಗುತ್ತದೆ. ಇದರ, ಉನ್ನತ-ಮಟ್ಟದ 4GB RAM + 128GB ಮಾದರಿಯ ಬೆಲೆ 13,499 ರೂ ಮತ್ತುಕೊನೆಯದಾಗಿ, 6GB RAM + 128GB ಸ್ಟೋರೇಜ್ ಹೊಂದಿರುವ ಇದರ ಟಾಪ್-ಆಫ್-ಲೈನ್ ಆಯ್ಕೆಯ ಬೆಲೆ 14,999 ರೂ.ಗಳಾಗಿವೆ. ಐಸ್ ಬ್ಲೂ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ಅನ್ನು ಇಂದಿನಿಂದಲೇ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಇತರ ಆಫ್‌ಲೈನ್ ಚಿಲ್ಲರೆ ಮಾರಾಟ ಮಳಿಗೆಗಳು ಸೇರಿದಂತೆ ವಿವಿಧ ಆನ್‌ಲೈನ್ ಚಿಲ್ಲರೆ ಚಾನೆಲ್‌ಗಳ ಮೂಲಕ ಖರೀದಿಸಬಹುದು. ಬಿಡುಗಡೆ ಕೊಡುಗೆಯಾಗಿ ಗ್ರಾಹಕರು ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಗ್ರಾಹಕರಿಗೆ ಮೂರು ತಿಂಗಳ ಬಡ್ಡಿ-ಮುಕ್ತ EMI ಆಯ್ಕೆಯನ್ನು ಪಡೆಯುತ್ತಾರೆ ಎಂದು ಕಂಪೆನಿ ತಿಳಿಸಿದೆ.


Click it and Unblock the Notifications








