Home
ಮೊಬೈಲ್

'Oppo A6x' ಫೀಚರ್ಸ್ ಲೀಕ್!..ಭಾರತಕ್ಕೆ ಬರಲಿದೆ ಮತ್ತೊಂದು ಬಜೆಟ್ 5G ಫೋನ್!

ಭಾರತದಲ್ಲಿ Oppo ತನ್ನ ಜನಪ್ರಿಯ A-ಸರಣಿಯ ಸಾಲಿಗೆ ಹೊಸದಾಗಿ 'Oppo A6x' ಎಂಬ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ಸಜ್ಜಾಗಿರುವ ಬಗ್ಗೆ ವದಂತಿಗಳಿವೆ. ಇದೇ ವೇಳೆಗೆ, ಜನಪ್ರಿಯ ಟಿಪ್‌ಸ್ಟಾರ್ ಅಭಿಷೇಕ್ ಯಾದವ್ ಅವರು ಈ ಮುಂಬರುವ ಫೋನಿನ ಫೀಚರ್ಸ್‌ಗಳನ್ನು ಸೋರಿಕೆ ಮಾಡಿದ್ದಾರೆ.! ಇದೀಗ ಲೀಕ್ ಆಗಿರುವ ಮಾಹಿತಿಗಂತೆ, Oppo A6x ಫೋನ್ ಬಜೆಟ್ ಸೆಗ್ಮೆಂಟ್ ಫೋನ್ ಆಗಿರಲಿದೆ ಎಂಬುದನ್ನು ನಾವು ಊಹಿಸಬಹುದು. ಹಾಗಾದರೆ, ಮುಂಬರುವ Oppo A6x ಸ್ಮಾರ್ಟ್‌ಫೋನ್ ಏನೆಲ್ಲಾ ಫಿಚರ್ಸ್ ಹೊಂದಿರಬಹುದು ಎಂಬುದನ್ನು ನೋಡೋಣ ಬನ್ನಿ.

Oppo A6x: ನಿರೀಕ್ಷಿತ ಫೀಚರ್ಸ್ ಸೋರಿಕೆ
ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಇತ್ತೀಚಿನ X ಪೋಸ್ಟ್ ಪ್ರಕಾರ, ಮುಂಬರಲಿರುವ Oppo A6x ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.75-ಇಂಚಿನ HD+ LCD ಪರದೆಯನ್ನು ಹೊಂದಿರುತ್ತದೆ ಎಂದು ಸೂಚಿಸಲಾಗಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ MediaTek Dimensity 6300 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಬಹುದು.(ಇದೇ ಪ್ರೊಸೆಸರ್ Oppo A5x ಮಾದರಿಯಲ್ಲೂ ಬಳಸಲಾಗಿದೆ) ಮತ್ತು ColorOS 15 ಆಪರೇಟಿಂಗ್ ಸಿಸ್ಟಮ್ ಹೊಂದಿರಲಿದ್ದು, ಇದು Android 15 ಆಧಾರಿತವಾಗಿರುತ್ತದೆ ಎಂದು ಹೇಳಿದ್ದಾರೆ. ಆದರೆ, RAM ಮತ್ತು ಸ್ಟೋರೇಜ್ ವಿವರಗಳನ್ನು ಒದಗಿಸಿಲ್ಲ.

ಕ್ಯಾಮೆರಾ ವಿಭಾಗದಲ್ಲಿ, ಈ Oppo A6x ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದ್ದು, ಇದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ದ್ವಿತೀಯ VGA ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆ ಇದೆ. ಹಾಗೂ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಇದು 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು. ಬ್ಯಾಟರಿ ವಿಭಾಗದಲ್ಲಿ,ಈ ಫೋನ್ 45W ನಲ್ಲಿ ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 6,500mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು. ಜೊತೆಗೆ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ನೀಡುವ ಸಾಧ್ಯತೆ ಇದೆ.

'Oppo A6x' ಫೀಚರ್ಸ್ ಲೀಕ್!..ಭಾರತಕ್ಕೆ ಬರಲಿದೆ ಮತ್ತೊಂದು ಬಜೆಟ್ 5G ಫೋನ್!

ಇಷ್ಟೇ ಅಲ್ಲದೆ, ಈ ಫೋನಿನ ಗಾತ್ರ ಮತ್ತು ತೂಕದ ಮಾಹಿತಿಯು ಸಹ ಲೀಕ್ ಆಗಿದ್ದು, Oppo A6x ಫೋನ್ 8.58mm ದಪ್ಪ ಮತ್ತು ಸುಮಾರು 212 ಗ್ರಾಂ ತೂಕ ಹೊಂದಿರಲಿದೆ ಎಂದು ಅಭಿಷೇಕ್ ಯಾದವ್ ತಿಳಿಸಿದ್ದಾರೆ. ಈ ಮೇಲಿನ ಎಲ್ಲಾ ಫೀಚರ್ಸ್‌ಗಳನ್ನು ಗಮನಿಸಿದಾಗ, ಭಾರತದಲ್ಲಿ Oppo A5x ಮಾದರಿಯ ಉತ್ತರಾಧಿಕಾರಿಯಾಗಿ ಬರಲಿರುವ ಈ ಫೋನ್ 15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಪರಿಚಯಗೊಳ್ಳಬಹುದು. ಏಕೆಂದರೆ, ಈ ಹಿಂದಿನ Oppo A5x ಮಾದರಿಯು ಮೇ ತಿಂಗಳಲ್ಲಿ 13,999 ರೂ. ಆರಂಭಿಕ ಬೆಲೆಗೆ ಲಾಂಚ್ ಆಗಿತ್ತು. ಇದೀಗ ಇದೇ ಬೆಲೆಯನ್ನು ನಾವು ನಿರೀಕ್ಷಿಸಬಹುದು.

ಈ ಹಿಂದಿನ ಮಾದರಿ Oppo A5x ಫೋನ್ 13,999 ರೂ. ಆರಂಭಿಕ ಬೆಲೆಗೆ ಬಿಡುಗಡೆಯಾಗಿತ್ತು. ಈ ಬೆಲೆಗೆ, ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್, ಜೊತೆಗೆ 5W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ ಮತ್ತು IP65-ರೇಟೆಡ್ ಬಿಲ್ಡ್ ಫಿಚರ್ಸ್ ಇದ್ದವು. ಈ Oppo A5x 5G ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್-ದರ್ಜೆಯ ಬಲವರ್ಧಿತ ಗಾಜಿನೊಂದಿಗೆ ಬಂದಿದ್ದಾಗಿ ಮತ್ತು ಹಿಂದಿನ ಆವೃತ್ತಿಗಳಿಗಿಂತ 160% ಹೆಚ್ಚು ಪ್ರಭಾವದ ಪ್ರತಿರೋಧವನ್ನು ಹೊಂದಿದ್ದಾಗಿ ಕಂಪೆನಿ ಹೇಳಿಕೊಂಡಿತ್ತು. ಇದೀಗ ಇದರ ಮತ್ತೊಂದು ತಲೆಮಾರು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು. ಯಾವ ಬೆಲೆಯಲ್ಲಿ ನಿರೀಕ್ಷಿಸುತ್ತಿದ್ದೀರಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ

Best Mobiles in India

English summary
Oppo is rumoured to be gearing up to introduce a new budget smartphone to its popular A-series lineup called the 'Oppo A6x'. Meanwhile, popular tipster Abhishek Yadav has leaked the features of the upcoming phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+