ಫೇಸ್ ಅನ್‌ಲಾಕ್ ಫೀಚರ್ ಇರುವ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83 ರಿಲೀಸ್!!
ಬೆಜೆಲ್ ಲೆಸ್ ಡಿಸ್‌ಪ್ಲೇ, ಆಲ್ಟ್ರಾ ಹೆಚ್‌ಡಿ ಮೊಡ್ ಸೆಲ್ಫಿ ಕ್ಯಾಮೆರಾ ಹಾಗೂ ಫೇಸ್ ಅನ್‌ಲಾಕ್ ಕಾರ್ಯನಿರ್ವಹಣೆ ಫೀಚರ್ ಹೊಂದಿರುವ ಒಪ್ಪೊವಿನ ನೂತನ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.!
ಬೆಜೆಲ್ ಲೆಸ್ ಡಿಸ್‌ಪ್ಲೇ, ಆಲ್ಟ್ರಾ ಹೆಚ್‌ಡಿ ಮೊಡ್ ಸೆಲ್ಫಿ ಕ್ಯಾಮೆರಾ ಹಾಗೂ ಫೇಸ್ ಅನ್‌ಲಾಕ್ ಕಾರ್ಯನಿರ್ವಹಣೆ ಫೀಚರ್ ಹೊಂದಿರುವ ಒಪ್ಪೊವಿನ ನೂತನ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.! ನಿರೀಕ್ಷೆಯಂತೆಯೇ ಭಾರತದಲ್ಲಿ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಲಾಂಚ್ ಆಗಿದೆ.!!
ಹೆಚ್ಚು ರಿಯಲಿಸ್ಟಿಕ್ ಮತ್ತು ಸಹಜವಾಗಿ ಕಾಣುವ ಸೆಲ್ಫಿ, 4ಜಿಬಿ RAM ಮತ್ತು 3180mAh ಬ್ಯಾಟರಿಯಂತಹ ಅತ್ಯುತ್ತಮ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ಒಪ್ಪೊ A83 ಸ್ಮಾರ್ಟ್‌ಫೋನ್ ನೀಡಲಿದೆ ಎಂದು ಒಪ್ಪೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ವಿಲ್ ಯಾಂಗ್ ಹೇಳಿದ್ದಾರೆ!!

ಯುವ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಕಪ್ಪು ಮತ್ತು ಚಿನ್ನದ ಬಣ್ಣಗಳಲ್ಲಿ ಒಪ್ಪೊ ಎ83 ಬಿಡುಗಡೆಯಾಗಿದ್ದು, ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಲ್ಲಿ ಮತ್ತು ಒಪ್ಪೊ ಆಫ್‌ಲೈನ್ ಮಳಿಗೆಗಳಲ್ಲಿ ಜ. 20ರಿಂದ ಮಾರಾಟಕ್ಕೆ ದೊರೆಯಲಿದೆ.!! ಹಾಗಾದರೆ, ಒಪ್ಪೊ ಒಪ್ಪೊ A83 ಸ್ಮಾರ್ಟ್‌ಫೋನ್ ಇನ್ನಿತರ ವಿಶೇಷತೆಗಳೆನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫುಲ್ ಸ್ಕ್ರೀನ್ ಡಿಸ್‌ಪ್ಲೇ!!
ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಂತೆ ಒಪ್ಪೊ A83 ಸ್ಮಾರ್ಟ್‌ಫೋನ್ ಕೂಡ ಫುಲ್ ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿದೆ. 18:9 ರೆಷ್ಯೂವಿನ (720*1440 ಪಿಕ್ಸೆಲ್) 5.7 ಇಂಚ್ ಪ್ಲಸ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಅನ್ನು ಅಲಕಂರಿಸಿದ್ದು, ಮಲ್ಟಿಮೀಡಿಯಾಗೆ ಡಿಸ್‌ಪ್ಲೇ ಹೇಳಿಮಾಡಿಸಿದಂತಿದೆ.!!

ಪ್ರೊಸೆಸರ್ ಮತ್ತು ಒಎಸ್!!
ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ 2.5GHz ಮೀಡಿಯಾ ಟೆಕ್ MT6763T SoC ಆಕ್ಟಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.! ಮೀಡಿಯಾ ಟೆಕ್ MT6763T SoC ಆಕ್ಟಕೋರ್ ಪ್ರೊಸೆಸರ್‌ನಲ್ಲಿ ಆಂಡ್ರಾಯ್ಡ್ 7.1 ಮೂಲಕ ಕಾರ್ಯನಿರ್ವಹಣೆ ಉತ್ತಮವಾಗಿದೆ ಎಂದು ಹೇಳಬಹುದು.!!

RAM ಮತ್ತು ಮೆಮೊರಿ.!!
4GB RAM ಮತ್ತು 32GB ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಎಸ್‌ಡಿಕಾರ್ಡ್ ಮೂಲಕ ಮೆಮೊರಿಯನ್ನು 256GB ವೆರೆಗೂ ಹೆಚ್ಚಿಸಬಹುದಾದ ಆಯ್ಕೆ ಈ ಫೋನಿನ ವಿಶೆಷತೆಗಳಲ್ಲಿ ಒಂದಾಗಿದೆ ಎಂದು ಒಪ್ಪೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ತಿಳಿಸಿದ್ದಾರೆ.!!

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83?
ಒಪ್ಪೊ A83ಯನ್ನು ಸೆಲ್ಫಿ ಎಕ್ಸ್‌ಪರ್ಟ್ ಎಂದು ಒಪ್ಪೊ ಕಂಪೆನಿ ಹೇಳಿದ್ದರೂ ಸಹ 13MP ರಿಯರ್ ಹಾಘೂ 8MP ಸೆಲ್ಫಿ ಕ್ಯಾಮೆರಾಗಳನಷ್ಟೆ ಒಪ್ಪೊ A83ಯಲ್ಲಿ ನೀಡಲಾಗಿದೆ. ಆದರೆ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಮೂಲಕ ಅತ್ಯದ್ಬುತ ಚಿತ್ರಗಳನ್ನು ಒಪ್ಪೊ A83 ಸೆರೆಹಿಡಿಯಲಿದೆ ಎಂದು ಒಪ್ಪೊ ಕಂಪೆನಿ ಹೇಳಿಕೊಂಡಿದೆ.!!


ಇತರೆ ಏನೆಲ್ಲಾ ಫೀಚರ್ಸ್?
3180mAh ಬ್ಯಾಟರಿ, 4G ವೋಲ್ಟ್, 3.5mm ಹೆಡ್‌ಫೋನ್ ಜಾಕ್, ವೈಫೈ 802.11, ಬ್ಲೂಟೂತ್ v4.2, ಮೈಕ್ರೊ ಯುಎಸ್‌ಬಿಯಂತಹ ಬಹುತೇಕ ಫೀಚರ್‌ಗಳು ಒಪ್ಪೊ A83ಯನ್ನು ಸೆಲ್ಫಿ ಎಕ್ಸ್‌ಪರ್ಟ್ ಫೋನ್ ಒಳಗೆ ಅಡಕವಾಗಿದೆ.!! ಹಾಗಾಗಿ, ಇರುವ ಫೀಚರ್ಸ್‌ಗೆ ಬೆಲೆ ಸ್ವಲ್ಪ ಹೆಚ್ಚಾದರೂ ಸಹ ಉತ್ತಮ ಫೋನ್ ಎಂದರೆ ತಪ್ಪಾಗುವುದಿಲ್ಲ.!!


Click it and Unblock the Notifications








