ಇನ್ನು ಒಪ್ಪೊ ಫೋನ್ ಬಿದ್ದರೂ ಒಡೆಯುವುದಿಲ್ಲ: ಏನು ಕಾರಣ ಅಂದ್ರಾ...?
ನಮ್ಮ ನಿಮ್ಮ ನಡುವೆ ಇದು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆದುಕೊಂಡಿರುವವರು ಹಲವು ಮಂದಿ ದೊರೆಯುತ್ತಾರೆ. ಸ್ಮಾರ್ಟ್‌ಫೋನ್ ಬಳಖೆದಾರರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ಮೊಬೈಲ್ ಕೈ ಜಾರಿದರೆ ಸಾಕು ಡಿಸ್‌ಪ್ಲೇ ಡಮರ್. ಇದಕ್ಕಾಗಿಯೇ ಹಲವು ಹಲವು ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ನೀಡುತ್ತವೆ. ಇದರಿಂದ ಫೋನ್ ಕೆಳಗೆ ಬಿದ್ದರೂ ಸಹ ಒಡೆಯುವುದಿಲ್ಲ ಎನ್ನಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಸುರಕ್ಷತೆಗಾಗಿ ಗೊರಿಲ್ಲಾ ಗ್ಲಾಸ್ 5 ಅನ್ನು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕಾಣಬಹುದಾಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಸದ್ಯ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಬಳಕೆದಾರರಿಗೆ ಗೊರಿಲ್ಲಾ ಗ್ಲಾಸ್ 6 ಅನ್ನು ನೀಡಲು ಮುಂದಾಗಿದೆ. ಇದು ಅತ್ಯಂತ ಬಲಿಷ್ಠವಾಗಿದ್ದು, ಬಿದ್ದರೂ ಒಡೆಯುವುದಿಲ್ಲ ಎನ್ನಲಾಗಿದೆ.

ಗೊರಿಲ್ಲಾ ಗ್ಲಾಸ್
ಸದ್ಯ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿದ್ದು, ಆಪ್‌ಡೇಟ್ ವರ್ಷನ್ ಎನ್ನಲಾಗಿದೆ. ಸುಮಾರು 15 ಬಾರಿ ಮೇಲಿನಿಂದ ಕೆಳಗೆ ಬಿದ್ದರೂ ಸಹ ಇದು ಒಡೆಯುವುದಿಲ್ಲ ಮತ್ತು ಒಂದು ಮೀಟರ್ ನೆಲದ ಮೇಲೆ ಜಾರಿಸಿದರೂ ಯಾವುದೇ ರೀತಿಯ ಸ್ಕ್ರಾಚ್ ಕೂಡ ಆಗುವುದಿಲ್ಲ. ಇದರಿಂದಾಗಿ ನಿಮ್ಮ ಫೋನ್ ಫುಲ್ ಸೇಫ್ ಆಗಲಿದೆ.

ಮೊದಲಿಗೆ ಒಪ್ಪೋದಲ್ಲಿ:
ಇದುವರೆಗೂ ಮಾರುಕಟ್ಟೆಯಲ್ಲಿ ಗೊರಿಲ್ಲಾ ಗ್ಲಾಸ್ 5 ಮಾತ್ರವೇ ಕಾಣಬಹುದಾಗಿತ್ತು. ಆದರೆ ಇನ್ನು ಮುಂದೆ ಗೊರಿಲ್ಲಾ ಗ್ಲಾಸ್ 6 ಕಾಣಿಸಿಕೊಳ್ಳಲಿದೆ. ಇದು ಮೊದಲಿಗೆ ಒಪ್ಪೋ ಸ್ಮಾರ್ಟ್‌ಫೋನ್‌ಗಳಲ್ಲಿ ಎನ್ನಲಾಗಿದೆ. ಒಪ್ಪೋ ಬಿಡಗಡೆ ಮಾಡಲಿರುವ ಟಾಪ್ ಎಂಡ್ ಫೋನಿನಲ್ಲಿ ಮಾತ್ರವೇ ದೊರೆಯಲಿದೆ.

ಸ್ಮಾರ್ಟ್‌ಫೋನ್ ಲಿಸ್ಟ್:
ಒಪ್ಪೋ ಸದ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿರುವ ಒಪ್ಪೋ F9, ಒಪ್ಪೋ F9 Pro, ಅಥಾವ R17 ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಿದೆ ಎನ್ನಲಾಗಿದೆ. ಇದಲ್ಲದೇ ಸುಮಾರು 6 ಲಕ್ಷಕ್ಕೂ ಅಧಿಕ ಸ್ಮಾರ್ಟ್‌ಫೋನ್ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಹೊಂದಿದ್ದು, 45ಕ್ಕೂ ಹೆಚ್ಚು ಬ್ಯಾಂಡ್ ಗಳು ಇದನ್ನು ತಮ್ಮ ಸ್ಮಾರ್ಟ್‌ಫೋನ್ ಗಳಲ್ಲಿ ಅಳವಡಿಸುತ್ತಿವೆ ಎನ್ನಲಾಗಿದೆ.


Click it and Unblock the Notifications








