48MP ಸಾಮರ್ಥ್ಯದ 'ಒಪ್ಪೊ ಎಫ್11 ಪ್ರೊ' ಬರುವಿಕೆಗೆ ಮೊಬೈಲ್ ಪ್ರಿಯರು ಕಾತುರ!!

|

ಇತ್ತೀಚಿಗಷ್ಟೇ ಒಪ್ಪೊ ಫೈಂಡ್ ಎಕ್ಸ್ ಮತ್ತು ಒಪ್ಪೊ ಆರ್ 7 ಪ್ರೊಗಳಂತಹ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದ ಜನಪ್ರಿಯ ಮೊಬೈಲ್ ತಯಾರಿಕಾ ಕಂಪೆನಿ ಒಪ್ಪೊ ಇದೀಗ ಮತ್ತೊಂದು ಸಿಹಿಸುದ್ದಿ ನೀಡಿದೆ. ಮೊಬೈಲ್ ಮಾರುಕಟ್ಟೆಯ ಇಂದಿನ ಟ್ರೆಂಡ್ ಆಗಿರುವ 48 ಮೆಗಾಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯದ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ಒಪ್ಪೊ ಎಫ್11 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಒಪ್ಪೊ ಕಂಪೆನಿ ಟ್ವಿಟ್ ಮೂಲಕ ತಿಳಿಸಿದೆ.

ಹೌದು, ಸೆಲ್ಫೀ ಎಕ್ಸ್‌ಪರ್ಟ್‌ಗಳೆಂದೇ ಕರೆಸಿಕೊಂಡಿರುವ 'ಒಪ್ಪೊ ಎಫ್' ಸರಣಿಯ ಮುಂದಿನ ಸ್ಮಾರ್ಟ್‌ಫೋನ್ ಆಗಿ ಕಾಲಿಡುತ್ತಿರುವ ಒಪ್ಪೊ ಎಫ್11 ಪ್ರೊ 48 ಮೆಗಾಪಿಕ್ಸೆಲ್ ಕ್ಯಾಮೆರಾ ಜೊತೆಗೆ ರೈಸಿಂಗ್ ಸೆಲ್ಫಿ ಕ್ಯಾಮೆರಾ, ಫುಲ್‌ಸ್ಕ್ರೀನ್ ಡಿಸ್‌ಪ್ಲೇ ಮತ್ತು ಸ್ಮಾರ್ಟ್‌ಫೋನ್ ಕ್ಯಾಮೆರಾ ತಂತ್ರಜ್ಞಾನಗಳಿಂದ ಮೊಬೈಲ್ ಪ್ರಿಯರನ್ನು ಆಕರ್ಷಸಿಸುತ್ತಿದೆ. ಇದೇ ಮೊದಲ ಹಿಂದೆಂದೂ ಕಾಣದ ಛಾಯಾಗ್ರಹಣ ಫಲಿತಾಂಶ ಇದರಿಂದ ಸಿಗಲಿದೆ ಎಂದು ಒಪ್ಪೊ ಕಂಪೆನಿ ಹೇಳಿಕೊಂಡಿದೆ.

48MP ಸಾಮರ್ಥ್ಯದ 'ಒಪ್ಪೊ ಎಫ್11 ಪ್ರೊ' ಬರುವಿಕೆಗೆ ಮೊಬೈಲ್ ಪ್ರಿಯರು ಕಾತುರ!!

ಸಾಧ್ಯವಿರುವ ಎಲ್ಲಾ ಬೆಳಕಿನ ಸ್ಥಿತಿಯಲ್ಲಿ ಅಸಾಮಾನ್ಯ ಫಲಿತಾಂಶಗಳನ್ನು ಸೆರೆಹಿಡಿಯುವ ನಿರೀಕ್ಷೆಯ ಕ್ಯಾಮೆರಾ ತಂತ್ರಜ್ಞಾನಗಳೊಂದಿಗ 'ಒಪ್ಪೊ ಎಫ್11 ಪ್ರೊ' ಸ್ಮಾರ್ಟ್‌ಪೋನ್ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದ್ದು, ಹಾಗಾದರೆ, ಇನ್ನೇನು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಒಪ್ಪೊ ಎಫ್11 ಪ್ರೊ ಸ್ಮಾರ್ಟ್‌ಫೋನಿನ ಕ್ಯಾಮೆರಾ ತಂತ್ರಜ್ಞಾನಗಳು ಯಾವುವು?, ಸ್ಮಾರ್ಟ್‌ಫೋನಿನ ಕ್ಯಾಮೆರಾ ವಿಶೇಷತೆಗಳು ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

48MP ಅಲ್ಟ್ರಾ ಹೈ-ಡೆಫಿನಿಷನ್ ಕ್ಯಾಮರಾ

48MP ಅಲ್ಟ್ರಾ ಹೈ-ಡೆಫಿನಿಷನ್ ಕ್ಯಾಮರಾ

ಒಪ್ಪೊ ಎಫ್11 ಪ್ರೊ ಸ್ಮಾರ್ಟ್‌ಪೋನಿನಲ್ಲಿ 48 ಮೆಗಾಪಿಕ್ಸೆಲ್ ಸಾಮರ್ಥ್ಯದ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಲಂಬವಾಗಿ ಜೋಡಿಸಿರುವ ಕ್ಯಾಮೆರಾಗಳು ಎಲ್‌ಇಡಿ ಫ್ಲಾಶ್‌ಲೈಟ್ ಜೊತೆಗೆ ಅತ್ಯಾಕರ್ಶಕ ವಿನ್ಯಾಸದಲ್ಲಿ ಮೂಡಿಬಂದಿವೆ. 48MP ಸಾಮರ್ಥ್ಯದ ಅಲ್ಟ್ರಾ ಹೈ-ಡೆಫಿನಿಷನ್ ಹಿಂಬದಿಯ ಕ್ಯಾಮರಾವನ್ನು ಬಳಸುತ್ತಿರುವುದರಿಂದ, ಸಾಧ್ಯವಿರುವ ಎಲ್ಲಾ ಬೆಳಕಿನ ಸ್ಥಿತಿಯಲ್ಲಿ ಅಸಾಮಾನ್ಯ ಫಲಿತಾಂಶಗಳನ್ನು ಕಾಣಬಹುದು ಎಂದು ಒಪ್ಪೊ ಕಂಪೆನಿ ಹೇಳಿಕೊಂಡಿದೆ.

 AI ಅಲ್ಟ್ರಾ ಎಂಜಿನ್ ತಂತ್ರಜ್ಞಾನ!

AI ಅಲ್ಟ್ರಾ ಎಂಜಿನ್ ತಂತ್ರಜ್ಞಾನ!

48MP ಕ್ಯಾಮೆರಾಕ್ಕೆ ಶಕ್ತಿ ನೀಡಲು ಒಪ್ಪೊ ಎಫ್11 ಪ್ರೊ ಫೋನಿನಲ್ಲಿ ವಿಶೇಷವಾದ AI ಅಲ್ಟ್ರಾ ಎಂಜಿನ್ ತರಲಾಗಿದೆ. ಎಐ ಅಲ್ಟ್ರ ಇಂಜಿನ್ ಸುತ್ತಮುತ್ತಲಿನ ಲಭ್ಯವಿರುವ ಬೆಳಕನ್ನು ಪರಿಶೀಲಿಸುವ ಮೂಲಕ ದೃಶ್ಯಗಳನ್ನು ಬುದ್ಧಿವಂತಿಕೆಯಿಂದ ಗುರುತಿಸುತ್ತದೆ. ನಂತರ ಕ್ಯಾಮೆರಾ ದೋಷ-ಕಡಿಮೆ ಛಾಯಾಚಿತ್ರಗಳ ಸೆಟ್ಟಿಂಗ್ಗಳನ್ನು ಅತ್ಯುತ್ತಮಗೊಳಿಸುತ್ತದೆ. ಬುದ್ಧಿವಂತ AI ಎಂಜಿನ್ಇಮೇಜ್-ಸ್ಥಿರೀಕರಣ ಪ್ರಕ್ರಿಯೆಯನ್ನು ಸರಳೀಕರಿಸುವಲ್ಲಿ ಸಹ ನೆರವಾಗಿ ಕಡಿಮೆ ಮತ್ತು ಕಡಿಮೆ ಕಡಿಮೆ-ಬೆಳಕಿನ ಸಂದರ್ಭಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ.

ಸೂಪರ್-ನೈಟ್ ಮೋಡ್

ಸೂಪರ್-ನೈಟ್ ಮೋಡ್

AI ಅಲ್ಟ್ರಾ ಎಂಜಿನ್ ಉತ್ತಮ-ಬೆಳಕಿನ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಸಹಾಯ ಮಾಡುವುದಲ್ಲದೆ, ಮೆಷಿನ್ ಕಲಿಕೆ ಮೂಲಕ ಕಡಿಮೆ-ಬೆಳಕಿನ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುತ್ತವೆ. ವೃತ್ತಿಪರ-ವರ್ಗದ ಚಿತ್ರಗಳ ಪ್ರದರ್ಶನವನ್ನು ನೀಡಲು ಇದರಿಂದ ಸಹಾಯವಾಗಲಿದೆ. ಇನ್ನು 'ಅಲ್ಟ್ರಾ ನೈಟ್ ಮೋಡ್' ಕೂಡಾ ಇದ್ದು, ಅತ್ಯುತ್ತಮವಾದ ವೃತ್ತಿಪರ ದರ್ಜೆಯ ಕಡಿಮೆ-ಬೆಳಕಿನ ಚಿತ್ರಗಳಿಗಾಗಿ ಈ ಫೀಚರ್ ಮೊಬೈಲ್ ಬಳಕೆದಾರರಿಗೆ ಸಹಾಯ ಮಾಡಲಿದೆ.

ರೈಸಿಂಗ್  ಸೆಲ್ಫೀ ಕ್ಯಾಮೆರಾ

ರೈಸಿಂಗ್ ಸೆಲ್ಫೀ ಕ್ಯಾಮೆರಾ

ಹಿಂಬದಿಯ ಕ್ಯಾಮೆರಾ ಸೆಟಪ್ ಜೊತೆಗೆ, ಒಪ್ಪೊ ಎಫ್11 ಪ್ರೊ ಫೋನಿನ ಮುಂಬಾಗದ ಕ್ಯಾಮೆರಾ ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಿದೆ. ಸೆಲ್ಫೀ ಕ್ಯಾಮೆರಾದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿರುವ ಒಪ್ಪೊ, ಒಪ್ಪೊ ಎಫ್11 ಪ್ರೊ ಫೋನಿನಲ್ಲಿ ಆನ್-ಸ್ಕ್ರೀನ್ ಸ್ವಯಂ ರೈಸಿಂಗ್ ಸೆಲ್ಫೀ ಕ್ಯಾಮೆರಾವನ್ನು ನೀಡಿ ಗಮನಸೆಳೆದಿದೆ. ಅತ್ಯಂತ ಪ್ರಶಂಸನೀಯವಾದ ಬ್ಯೂಟಿ ತಂತ್ರಜ್ಞಾನಗಳನ್ನು ಹೊತ್ತ ಈ ಸ್ಟೈಲಿಶ್ ಕ್ಯಾಮೆರಾ ಅತ್ಯುತ್ತಮ ಸೆಲ್ಫೀ ಕ್ಯಾಮೆರಾ ತಂತ್ರಜ್ಞಾನಗಳನ್ನು ಸಹ ಹೊಂದಿದೆ.

ಫುಲ್‌ಸ್ಕೀನ್ ಡಿಸ್‌ಪ್ಲೇ!

ಫುಲ್‌ಸ್ಕೀನ್ ಡಿಸ್‌ಪ್ಲೇ!

ಒಪ್ಪೊ ಎಫ್11 ಪ್ರೊ ಸ್ಮಾರ್ಟ್‌ಫೋನ್ ಆನ್-ಸ್ಕ್ರೀನ್ ಸ್ವಯಂ ರೈಸಿಂಗ್ ಸೆಲ್ಫೀಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿರುವುದರಿಂದ ಪೂರ್ಣ-ಸ್ಕ್ರೀನ್ ಪ್ರದರ್ಶನದ ನಿಮ್ಮ ಊಹೆ ಖಂಡಿತ ನಿಜವಾಗಿದೆ. ಗ್ರಾಹಕರ ಜೇಬಿಗೆ ಹೆಚ್ಚು ಹೊರೆಯಾಗದಂತೆ ಅತ್ಯುತ್ತಮ-ದರ್ಜೆಯ ತಲ್ಲೀನಗೊಳಿಸುವ ಮಲ್ಟಿಮೀಡಿಯಾ ವೀಕ್ಷಣೆಯ ಅನುಭವವನ್ನು ಒಪ್ಪೊ ಎಫ್11 ಪ್ರೊ ಖರೀದಿದಾರರು ಪಡೆದುಕೊಳ್ಳಲಿದ್ದಾರೆ. ಇದಕ್ಕೆ ಪನೋರಮಾ ಸ್ಕ್ರೀನ್' ಎಂದು ಕರೆಯಲಾಗುತ್ತದೆ.

Best Mobiles in India

English summary
OPPO F11 Pro: Smartphone that will redefine innovation and flagship performance. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X