ಶೀಘ್ರದಲ್ಲೇ OPPO F27 5G ಬಿಡುಗಡೆ; ವಿನ್ಯಾಸ ಬಹಿರಂಗ, ಬೆಲೆಯೂ ಕಡಿಮೆ!
ಒಪ್ಪೋ ಪ್ರಿಯರಿಗೆ ಮತ್ತೊಂದು ಸಿಹಿ ಸದ್ದಿ ಇದೆ. ಆದಷ್ಟು ಬೇಗ ಹೊಸ ಫೋನ್ ಕೈ ಸೇರಲಿದೆ. ಹೌದು, ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರಾಂಡ್ ಒಪ್ಪೋ (OPPO) ಶೀಘ್ರದಲ್ಲೇ 'F' ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದು ಒಪ್ಪೋ F27 5G (OPPO F27 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಈ ಫೋನಿನ ಬಿಡುಗಡೆಯನ್ನು ಖಚಿತಪಡಿಸಿದೆ. ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟೀಸರ್ ಅನ್ನು ಹಂಚಿಕೊಂಡಿದೆ. ಇದರೊಂದಿಗೆ, ಮುಂಬರುವ ಈ ಹೊಸ ಫೋನಿನ ವಿನ್ಯಾಸವನ್ನು ಬಹಿರಂಗಪಡಿಸಿದೆ.
ಹೌದು, ಒಪ್ಪೋ F27 5G ಬಿಡುಗಡೆ ಬಗ್ಗೆ ಕಂಪನಿಯು ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಅಧಿಕೃತವಾಗಿ ದೃಢಪಡಿಸಿದೆ. ಪೋಸ್ಟ್‌ನಲ್ಲಿ, ಶೀಘ್ರದಲ್ಲೇ ಹೊಸ ಬರಲಿದೆ ಎಂದು ನಮೂದಿಸಲಾಗಿದೆ. ಅದರಂತೆ, ಕೆಲವೇ ದಿನಗಳಲ್ಲಿ ಹೊಸ ಫೋನ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಟೀಸರ್ ಪೋಸ್ಟ್ ಮೂಲಕ ಫೋನಿನ ಹಿಂದಿನ ಡಿಸೈನ್ ಬಹಿರಂಗಪಡಿಸಲಾಗಿದೆ. ಹಿಂಭಾಗದ ಫಲಕಗಳಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಎಲ್ಇಡಿ ಫ್ಲ್ಯಾಷ್ ಇದೆ. ಇದಲ್ಲದೆ, ರಿಂಗ್ ಲೈಟ್ ಸಹ ಕಾಣುತ್ತದೆ.

Oppo F27 Pro+ ಫೋನಿಗಿಂತ ಕಡಿಮೆ ಬೆಲೆ
ಟಿಪ್‌ಸ್ಟರ್ ಸುಧಾಂಶು ಅವರು Oppo F27 5G ಕುರಿತು ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ, ಈ ಫೋನ್ 8GB+128GB ಮತ್ತು 8GB+256GB ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದು F27 ಸರಣಿಯ ಮೂಲ ಮಾದರಿಯಾಗಿದೆ. Oppo F27 Pro+ ಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಕಂಪನಿಯು ಈ ಫೋನ್‌ನ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ವರದಿಯ ಪ್ರಕಾರ, ಈ ಫೋನ್ ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ.
ಒಪ್ಪೋ F27 5G ಡಿಸೈನ್ ಲೀಕ್!
ಈ ಫೋನಿನ ಲೈವ್ ಚಿತ್ರ ಸೋರಿಕೆಯಾಗಿದೆ. ಇದನ್ನು ನೋಡಿದಾಗ, OPPO F27 5G ಸ್ಮಾರ್ಟ್‌ಫೋನ್ ಪಂಚ್ ಹೋಲ್ ಡಿಸ್ಪ್ಲೇ ಮತ್ತು ಫ್ಲಾಟ್ ಎಡ್ಜ್‌ಗಳನ್ನು ಹೊಂದಿರುವುದು ಖಚಿತವಾಗಿದೆ. OPPO F27 5G ಸ್ಮಾರ್ಟ್‌ಫೋನ್ ಗ್ರೇಡಿಯಂಟ್ ಬಣ್ಣ ವಿನ್ಯಾಸ, ಲೋಹದ ಚೌಕಟ್ಟಿನೊಂದಿಗೆ ಬರುವ ನಿರೀಕ್ಷೆಯಿದೆ.
ಒಪ್ಪೋ F27 ಪ್ರೊ ಪ್ಲಸ್ 5G ಫೋನಿಗೆ ಹೋಲಿಸಿದರೆ,ಒಪ್ಪೋ F27 5G ವಿಭಿನ್ನವಾಗಿ ಕಾಣುತ್ತದೆ. ಪ್ಲಸ್ ರೂಪಾಂತರವು ಬಾಗಿದ ಡಿಸ್ಲ್ಪೇಯನ್ನು ಹೊಂದಿದೆ. ಎರಡೂ ಫೋನ್‌ಗಳು ಹಿಂಭಾಗದ ಫಲಕದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿವೆ. ಇದು ಎರಡು ಅಥವಾ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಇವುಗಳ ಜೊತೆಗೆ ಎಲ್ಇಡಿ ಫ್ಲ್ಯಾಶ್ ಕೂಡ ಇದೆ.
ಒಪ್ಪೋ F27 ಪ್ರೊ ಪ್ಲಸ್ 5G ವೈಶಿಷ್ಟ್ಯಗಳು
ಒಪ್ಪೋ F27 ಪ್ರೊ ಪ್ಲಸ್ 5G (OPPO F27 Pro+ 5G) ಫೋನನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೊಬೈಲ್‌ನ ಫೀಚರ್ಸ್‌ಗಳು ಈ ಕೆಳಗಿನಂತಿವೆ.
ಡಿಸ್ಲ್ಪೇ: ಈ ಫೋನ್ 6.7 ಇಂಚಿನ 3D ಬಾಗಿದ AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು, 120 Hz ರಿಫ್ರೆಶ್ ದರ, 2412 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ MediaTek Dimension 7050 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 8GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.
ಕ್ಯಾಮೆರಾ: ಒಪ್ಪೋ F27 ಪ್ರೊ ಪ್ಲಸ್ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 64MP OV64B ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್ ಹೊಂದಿದೆ. ಈ ಫೋನ್ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಒಪ್ಪೋ F27 ಪ್ರೊ ಪ್ಲಸ್ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67 ವ್ಯಾಟ್ ಸೂಪರ್ ವುಕ್ ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಅನ್ನು ಹೊಂದಿದೆ.
ಇನ್ನೂ, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಒಪ್ಪೋ F27 ಪ್ರೊ ಪ್ಲಸ್ 5G ಫೋನ್ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ-ಫೈ ನಂತಹ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








