22,999ಕ್ಕೆ OPPO F27 5G ಬಿಡುಗಡೆ! ಪ್ರೀ ಬುಕಿಂಗ್ ಶುರು.. ಒಳ್ಳೆ ಆಫರ್ ಇದೆ
ಒಪ್ಪೋ (OPPO) ಈ ವರ್ಷ ಹೊಸ ಫೋನ್‌ಗಳ ಬಿಡುಗಡೆಯೊಂದಿಗೆ ಭಾರೀ ಸದ್ದು ಮಾಡಿದೆ. ಕಂಪನಿಯು ಭಾರತದಲ್ಲಿ Reno 12 ಸರಣಿಯನ್ನು ಪರಿಚಯಿಸಿತು. ನಂತರ, OPPO K12X, OPPO A3x ಮತ್ತು ಕಳೆದ ತಿಂಗಳು OPPO F27 Pro ಫೋನನ್ನು ಸಹ ಬಿಡುಗಡೆ ಮಾಡಿತು. ಇದೀಗ, ಕಂಪನಿಯು ಈ ಸರಣಿಯಲ್ಲಿ ಮತ್ತೊಂದು ಮೊಬೈಲ್ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಅದುವೇ OPPO F27 5G ಸ್ಮಾರ್ಟ್‌ಫೋನ್.
ಹೌದು, ಕಂಪನಿಯು ಕಳೆದ ವಾರವಷ್ಟೇ OPPO F27 5G ಫೋನಿನ ಬಿಡುಗಡೆಯ ಬಗ್ಗೆ ಪ್ರಕಟಿಸಿತ್ತು. ಆದರೆ, ಬಿಡುಗಡೆಗೂ ಮುನ್ನವೇ ಈ ಫೋನಿನ ಬೆಲೆ ಮತ್ತು ಆಫರ್‌ಗಳು ಬಹಿರಂಗವಾಗಿದೆ. ಭಾರತದಲ್ಲಿ ಈ ಫೋನಿನ ಆರಂಭಿಕ ಬೆಲೆ 22,999 ರೂ. ಎಂದು ಹೇಳಲಾಗುತ್ತಿದೆ. 1,800 ರೂ.ಗಳ ಕ್ಯಾಶ್‌ಬ್ಯಾಕ್ ಕೂಡ ಲಭ್ಯವಿರಲಿದೆ. ಇಂದಿನಿಂದ (ಆಗಸ್ಟ್ 16) ಮುಂಗಡ ಬುಕಿಂಗ್ ಸಹ ಪ್ರಾರಂಭವಾಗಿದೆ.

OPPO F27 5G ಫೋನ್ 6.67 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿರಲಿದೆ. 120Hz ಸ್ಕ್ರೀನ್ ರಿಫ್ರೆಶ್ ದರ, 2100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಜೊತೆಗೆ ಗಾಜಿನ ರಕ್ಷಣೆ ಪಡೆದಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ 50MP ಮತ್ತು 2MP ಮುಖ್ಯ ಕ್ಯಾಮೆರಾ ಹೊಂದಿರಲಿದೆ. 32MP ಫ್ರಂಟ್ ಕ್ಯಾಮೆರಾ ಮತ್ತು 5000mah ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ.
ಒಪ್ಪೋ F27 5G ಬೆಲೆ ಮತ್ತು ಆಫರ್‌ಗಳು
- 8GB RAM + 128GB ಸ್ಟೋರೇಜ್ ಬೆಲೆ - 22,999 ರೂ.
- 12GB RAM + 128GB ಸ್ಟೋರೇಜ್ ಬೆಲೆ - 24,999 ರೂ.
- 1,800 ರೂ. ತ್ವರಿತ ಕ್ಯಾಶ್‌ಬ್ಯಾಕ್
ಕಂಪನಿಯು ಒಪ್ಪೋ F27 5G ಫೋನನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ. ಎರಡೂ ಮಾದರಿಗಳು 8GB RAM ಅನ್ನು ಹೊಂದಿರಲಿದೆ. ಆದರೆ, ಸ್ಟೋರೇಜ್ ಆಯ್ಕೆಯು 128GB ಮತ್ತು 256GB ಆಗಿರುತ್ತದೆ. ಮಾಹಿತಿಯ ಪ್ರಕಾರ, ಒಪ್ಪೋ F27 5G ಫೋನಿನ 8 GB RAM ಮತ್ತು 128 GB ಸ್ಟೋರೇಜ್‌ನ ಬೆಲೆ 22,999 ರೂ. ಮತ್ತು 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ 24,999 ರೂ.ಗೆ ಲಭ್ಯವಿರುತ್ತದೆ.
ಒಪ್ಪೋ F27 5G ಆಫರ್‌ಗಳು
ಆಫರ್‌ಗಳ ಬಗ್ಗೆ ಹೇಳುವುದಾದರೆ, ಈ ಫೋನ್‌ನೊಂದಿಗೆ ಕಂಪನಿಯು 1,800 ರೂ.ಗಳ ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಕೋಟಕ್ ಬ್ಯಾಂಕ್ ಸೇರಿದಂತೆ ಹಲವು ಇತರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಈ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇದರೊಂದಿಗೆ ಕಂಪನಿಯ ಬ್ಯಾಂಕ್ ಕಾರ್ಡ್‌ನಲ್ಲಿ 6 ತಿಂಗಳ ನೋ ಕಾಸ್ಟ್ ಇಎಂಐ ಕೂಡ ನೀಡಲಾಗುತ್ತಿದೆ.
ಆಗಸ್ಟ್ 18 ರಿಂದ ಖರೀದಿಗೆ ಲಭ್ಯ!
ಈ ಫೋನ್ ಅನೇಕ ಹಣಕಾಸು ಯೋಜನೆಗಳಲ್ಲಿ 0 ಡೌನ್ ಪೇಮೆಂಟ್‌ನಲ್ಲಿ ಮತ್ತು ಕೆಲವು ಕಡಿಮೆ ಡೌನ್ ಪೇಮೆಂಟ್‌ನಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ. ವಿಶೇಷವೆಂದರೆ, ಆರಂಭಿಕ ಮಾರಾಟದ ಸಮಯದಲ್ಲಿ, ಈ ಫೋನ್‌ನೊಂದಿಗೆ ಒನ್ ಟೈಮ್ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಒಪ್ಪೋ F27 5G ಫೋನಿನ ಪ್ರೀ-ಬುಕಿಂಗ್ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಇಂದಿನಿಂದ (ಆಗಸ್ಟ್ 16) ಪ್ರಾರಂಭವಾಗಿದೆ. ಆದರೆ, ಫೋನ್ ಆಗಸ್ಟ್ 18 ರಿಂದ ಖರೀದಿಗೆ ಲಭ್ಯವಿರುತ್ತದೆ.
ಒಪ್ಪೋ F27 5G ಫೋನಿನ ಫಿಚರ್ಸ್
ಡಿಸ್ಲ್ಪೇ: ಮಾಹಿತಿಯ ಪ್ರಕಾರ, ಒಪ್ಪೋ F27 5G ಫೋನ್ 6.67 ಇಂಚಿನ ಪೂರ್ಣ HD + OLED ಡಿಸ್ಲ್ಪೇಯನ್ನು ಹೊಂದಿದೆ. ಇದು 120 Hz ಸ್ಕ್ರೀನ್ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು 2100 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್ ಅನ್ನು ಹೊಂದಿರಲಿದೆ. ಮತ್ತು LPDDR4X RAM ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 14 ಅನ್ನು ಆಧರಿಸಿದ ಕಲರ್ ಓಎಸ್ 14 ನಲ್ಲಿ ಈ ಫೋನ್ ಲಭ್ಯವಿರುತ್ತದೆ.
ಕ್ಯಾಮೆರಾ: ಒಪ್ಪೋ F27 5G ಫೋನನ್ನು ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಲಾಗುವುದು. ಈ ಫೋನಿನ ಮುಖ್ಯ ಕ್ಯಾಮೆರಾ 50MP ಆಗಿದ್ದರೆ, ಸೆಕೆಂಡರಿ ಕ್ಯಾಮೆರಾ 2MP ಆಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಇದೆ.
ಬ್ಯಾಟರಿ: ಮುಂಬರುವ ಹೊಸ ಒಪ್ಪೋ ಫೋನ್, 5,000 mAh ಬ್ಯಾಟರಿಯನ್ನು ಹೊಂದಿರಲಿದೆ. ಇದು 45 ವ್ಯಾಟ್ ಚಾರ್ಜಿಂಗ್‌ನೊಂದಿಗೆ ಬರಲಿದೆ. ಡ್ಯುಯಲ್ ಸ್ಪೀಕರ್‌ಗಳೊಂದಿಗೆ IP64 ರೇಟಿಂಗ್ ಅನ್ನು ಹೊಂದಿದೆ.


Click it and Unblock the Notifications








