Oppo F27 Pro+ 5G ಸೇಲ್ ಆರಂಭ: 1,000 ಎಕ್ಸ್‌ಚೇಂಜ್ ಆಫರ್! ಬೆಲೆ ಎಷ್ಟು?
ಒಪ್ಪೋ ಕಂಪನಿಯು ಸಾಕಷ್ಟು ಹೊಸ ಫೀಚರ್ಸ್, ಸುದೀರ್ಘ ಬಾಳಿಕೆಯ ಭರವಸೆಯೊಂದಿಗೆ Oppo F27 Pro+ 5G ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಮೊಬೈಲ್ ಡಿಸೈನ್, ಬೆಲೆ ಹಾಗೂ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರನ್ನ ಆಕರ್ಷಿಸಿತ್ತು. ಈ ಮೊಬೈಲ್ ಇಂದಿನಿಂದ ಅಧಿಕೃತವಾಗಿ ಮಾರಾಟ ಆರಂಭಿಸಿದೆ. 30 ಸಾವಿರ ರೂ. ಒಳಗಿನ ಫೋನ್ ಹುಡುಕುವವರಿಗೆ ಇದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಈ ಫೋನ್ ಖರೀದಿಸಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಹೌದು, ನೀವು 30 ಸಾವಿರ ರೂ. ಒಳಗಿನ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದ್ದೀರಾ..? ಹಾಗಾದ್ರೆ, ಒಪ್ಪೋ ನಿಮಗಾಗಿ ಒಂದೊಳ್ಳೆ ಅವಕಾಶ ಕಲ್ಪಿಸಿದೆ. ಸಾಕಷ್ಟು ಅದ್ಭುತ ವೈಶಿಷ್ಟ್ಯ, ಸುದೀರ್ಘ ಬಾಳಿಕೆಯ ಭರವಸೆಯೊಂದಿಗೆ Oppo F27 Pro+ 5G ಮೊಬೈಲ್ ಇಂದಿನಿಂದ ಖರೀದಿಗೆ ಲಭ್ಯವಿದೆ. ಈ ಮೂಲಕ ಒಪ್ಪೋ ಸದ್ದಿಲ್ಲದೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಫ್ ಸರಣಿಯ ಫೋನ್‌ಗಳನ್ನು ಸೇರ್ಪಡೆ ಮಾಡಿದೆ. ಈ ಮೊಬೈಲ್‌ನ ಬೆಲೆ, ಲಭ್ಯತೆ ಹಾಗೂ ಆಫರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Oppo F27 Pro+ 5G ಬೆಲೆ ಮತ್ತು ಆಫರ್‌ಗಳು
ಒಪ್ಪೋ F27 ಪ್ರೋ + 5ಜಿ ಮೊಬೈಲ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಒಂದು 8GB+128GB ರೂಪಾಂತರ. ಇನ್ನೊಂದು 8GB+256GB ವೇರಿಯೆಂಟ್. 8GB+128GB ವೇರಿಯಂಟ್ ಬೆಲೆ 27,999 ರೂ. ಇದೆ. ಅದರಂತೆ 8GB+256GB ವೇರಿಯೆಂಟ್ ಬೆಲೆ 29,999 ರೂ. ಇದೆ. ಇನ್ನು ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ ಡಸ್ಕ್ ಪಿಂಕ್ ಮತ್ತು ಮಿಡ್ನೈಟ್ ನೇವಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಶೇ.10 ಕ್ಯಾಶ್‌ಬ್ಯಾಕ್, 1,000 ರೂ. ಎಕ್ಸ್‌ಚೇಂಜ್ ಆಫರ್
ಇನ್ನೂ ಆಫರ್‌ಗಳ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್‌ನೊಂದಿಗೆ ಕಂಪನಿ ಕೆಲವೊಂದು ಕೊಡುಗೆಗಳನ್ನೂ ಘೋಷಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ತಮ್ಮ ಹಳೆಯ ಫೋನ್ ಮೇಲೆ 1,000 ರೂ. ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಹಾಗೂ 9 ತಿಂಗಳವರೆಗೆ ಗ್ರಾಹಕ ಸಾಲಗಳನ್ನು ಪಡೆಯಬಹುದು.

ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ಮೊಬೈಲ್ ಅನ್ನು ಎಲ್ಲಿ ಖರೀದಿಸಬೇಕು ಎಂಬ ಕುತೂಹಲ, ಪ್ರಶ್ನೆ ಖಂಡಿತಾ ಎಲ್ಲರಿಗೂ ಇರುತ್ತದೆ. OPPO F27 Pro+ 5G ಮೊಬೈಲ್ ಅನ್ನು ವಿವೋ ಕಂಪನಿಯ ಅಧಿಕೃತ ಸೈಟ್, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ, ದೇಶದ ಇತರ ಪ್ರಮುಖ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಬಹುದು.
Oppo F27 Pro+ 5G ವೈಶಿಷ್ಟ್ಯಗಳೇನು?
ಒಪ್ಪೋ ಎಫ್27 ಪ್ರೋ+ 5G ಫೋನ್‌ನ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ಇದು 1080x2412 ಪಿಕ್ಸೆಲ್ ರೆಸಲ್ಯೂಷನ್ ಜೊತೆಗೆ 6.7 ಇಂಚಿನ ಸಂಪೂರ್ಣ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ AMOLED ಕರ್ವ್ಡ್ ಸ್ಕ್ರೀನ್ 120Hz ವರೆಗಿನ ರಿಫ್ರೆಶ್ ರೇಟ್ ಮತ್ತು 950 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿದೆ. ಭಾರತದಲ್ಲಿ IP69 ರೇಟಿಂಗ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು ಧೂಳು ಮತ್ತು ನೀರು ನಿರೋಧಕವಾಗಿದೆ.
ಪ್ರೊಸೆಸರ್ ಏನು? ಬ್ಯಾಟರಿ ಬ್ಯಾಕಪ್ ಹೇಗಿದೆ?
ಒಪ್ಪೋ ಎಫ್27 ಪ್ರೋ+ 5G ಮೊಬೈಲ್ 8GB RAMನೊಂದಿಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿದೆ. 128 GB ಮತ್ತು 256GBಯ ಎರಡು ವಿಭಿನ್ನ ಇಂಟರ್ನಲ್ ಸ್ಟೋರೇಜ್ ಆಯ್ಕೆಯೊಂದಿಗೂ ಬರುತ್ತದೆ. ಈ ಸ್ಮಾರ್ಟ್‌ಫೋನ್ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ.

Oppo F27 Pro+ 5G ಕ್ಯಾಮೆರಾ ಸೆಟಪ್
ಒಪ್ಪೋ ಎಫ್27 ಪ್ರೋ+ 5ಜಿ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿದೆ. ಇದು 64 ಮೆಗಾಪಿಕ್ಸಲ್ ಮೈನ್ ಕ್ಯಾಮೆರಾ 2 ಮೆಗಾಪಿಕ್ಸಲ್ ಡೆಪ್ಟ್ ಸೆನ್ಸರೊಟ್ ಹೊಂದಿರುವ ಡ್ಯುವಲ್ ಕ್ಯಾಮೆರಾ ವೈಶಿಷ್ಟ್ಯವನ್ನು ಒಳಗೊಂಡಿದೆ. ಇದಲ್ಲದೆ, ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಆಕರ್ಷಕ ಫೋಟೋಗಳನ್ನು ಇದರಲ್ಲಿ ಕ್ಲಿಕ್ಕಿಸಬಹುದು.
ಇನ್ನೂ, ಈ ಮೊಬೈಲ್ ಮಿಲಿಟರ್ ಗ್ರೇಟ್ ಬಾಳಿಕೆಯೊಂದಿಗೆ ಬರುತ್ತದೆ. ಮಿಲಿಟರಿ ಗ್ರೇಟ್ ಸರ್ಟಿಫಿಕೇಷನ್‌ನೊಂದಿಗೆ ಬರುವ ಒಪ್ಪೋದ ಮೊದಲ ಎಫ್ ಸರಣಿ ಫೋನ್ ಇದಾಗಿದೆ. ಉತ್ತಮ ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿದೆ. ಒಟ್ಟಾರೆ, ಹೊಸದಾಗಿ ಬಿಡುಗಡೆಯಾಗಿರುವ Oppo F27 Pro+ 5G ಮೊಬೈಲ್ ಪ್ರಿಯರನ್ನು ತನ್ನತ್ತ ಸೆಳೆದಿದೆ.


Click it and Unblock the Notifications








