Home
ಮೊಬೈಲ್

OPPO: ಹೊಸ ಫೋನ್ ಖರೀದಿಗೆ ಲಭ್ಯ; 2500 ಬೋನಸ್.. ಶೇ.10 ರಷ್ಟು ರಿಯಾಯಿತಿ.. ಮಸ್ತ್ ಫೀಚರ್ಸ್

ಒಪ್ಪೋ ಇತ್ತೀಚೆಗೆ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಒಪ್ಪೋ F29 (OPPO F29) ಸರಣಿಯ ಅಡಿಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೌದು, ಬಹುನಿರೀಕ್ಷಿತ ಒಪ್ಪೋ F29 ಪ್ರೊ 5G (OPPO F29 Pro 5G) ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಬಂದಿದೆ. ಅಂದಹಾಗೆ, ಈ ಫೋನ್‌ ಇದೀಗ ಖರೀದಿಗೆ ಲಭ್ಯವಿದೆ. ನೀವು ಇದನ್ನು 30,000 ರೂ.ಗಳ ಬಜೆಟ್‌ನಲ್ಲಿ ಖರೀದಿಸಬಹುದು. ಈ ಹೊಸ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಒಪ್ಪೋ F29 ಪ್ರೊ 5G ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್‌ನ ವಿಶೇಷತೆಗಳೆಂದರೆ, ಈ ಮೊಬೈಲ್ 6.67 ಇಂಚಿನ ಅಮೋಲೆಡ್‌ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ದೆ. ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಜೊತೆಗೆ 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್, 12GB RAM + 256GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.

ಹೊಸ OPPO ಫೋನ್ ಖರೀದಿಗೆ ಲಭ್ಯ; 2500 ಬೋನಸ್.. ಶೇ.10 ರಷ್ಟು ರಿಯಾಯಿತಿ

ಒಪ್ಪೋ F29 ಪ್ರೊ 5G ಬೆಲೆ ಮತ್ತು ಆಫರ್

ಒಪ್ಪೋ F29 ಪ್ರೊ 5G ಫೋನಿನ 8GB RAM + 128GB ಸ್ಟೋರೇಜ್ ಬೆಲೆ 27,999 ರೂ. ಇದೆ. 8GB RAM + 256GB ಸ್ಟೋರೇಜ್ ವೇರಿಯಂಟ್ 29,999 ರೂ.ಗೆ ಮಾರಾಟವಾಗುತ್ತಿದೆ. ಇನ್ನು 12GB RAM + 256GB ಸ್ಟೋರೇಜ್ ರೂಪಾಂತರವು 31,999 ರೂ.ಗೆ ಲಭ್ಯವಿದೆ. ಕಂಪನಿಯು ಈ ಫೋನಿನ ಖರೀದಿ ಮೇಲೆ ಶೇ.10 ರಷ್ಟು ತ್ವರಿತ ಬ್ಯಾಂಕ್ ರಿಯಾಯಿತಿ ನೀಡುತ್ತಿದೆ.

ಇದು ಎಸ್‌ಬಿಐ ಕಾರ್ಡ್‌ಗಳು, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಈ ಆಫರ್ ಲಭ್ಯವಿದೆ. ಜೊತೆಗೆ 2,500 ರೂ. ವರೆಗೆ ಹೆಚ್ಚುವರಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗುವುದು. ಇದರೊಂದಿಗೆ 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಮತ್ತು 8 ತಿಂಗಳವರೆಗೆ ಗ್ರಾಹಕ ಸಾಲದ ಪ್ರಯೋಜನೆ ಪಡೆಯಬಹುದು. ನೀವು, ಅಮೆಜಾನ್, ಫ್ಲಿಪ್‌ಕಾರ್ಟ್, ಒಪ್ಪೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಫೋನನ್ನು ಖರೀದಿಸಬಹುದು.

Take a Poll

ಒಪ್ಪೋ F29 ಪ್ರೊ 5G ವೈಶಿಷ್ಟ್ಯಗಳು

ಒಪ್ಪೋ F29 ಪ್ರೊ 5G ಮೊಬೈಲ್ 6.67 ಇಂಚಿನ ಅಮೋಲೆಡ್‌ ಡಿಸ್ಪ್ಲೇ ಹೊಂದಿದೆ. ಇದು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಕಲರ್ ಓಎಸ್ 15 ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಮಾಲಿ G615 MC2 ಜಿಪಿಯು ಸಹ ಹೊಂದಿದೆ. ಈ ಫೋನ್ 8GB, 12GB RAM ಮತ್ತು 128GB, 256GB ಸ್ಟೋರೇಜ್ ಆಯ್ಕೆ ಹೊಂದಿದೆ.

ಒಪ್ಪೋ F29 ಪ್ರೊ 5G ಫೋನ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಒಳಗೊಂಡಿದೆ. ಈ ಫೋನ್ ಎಲ್‌ಇಡಿ ಫ್ಲ್ಯಾಷ್ ಮತ್ತು ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಒಪ್ಪೋ 5G ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
OPPO F29 Pro 5G now available for purchase in india: know offers, specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+