ಸ್ವಲ್ಪ ಕಾಯಿರಿ! 6000mAh ಬ್ಯಾಟರಿ.. 50MP ಟ್ರಿಪಲ್ ಕ್ಯಾಮೆರಾ.. ಬಜೆಟ್ ಬೆಲೆ; ಯಾವ ಫೋನ್ ಗೊತ್ತಾ?
ಒಪ್ಪೋ ಕಂಪನಿಯು ಮತ್ತೊಂದು ಹೊಸ ಫೋನನ್ನು ಬಿಡುಗಡೆಗೆ ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು 25,000 ರೂ.ಗಳ ಬಜೆಟ್‌ನಲ್ಲಿ ಪರಿಚಯಿಸಲಾಗುವುದು. ಹೌದು, ಶೀಘ್ರದಲ್ಲೇ ಒಪ್ಪೋ F29 ಪ್ರೊ 5G (OPPO F29 Pro 5G) ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮಧ್ಯೆಯೇ, ಒಪ್ಪೋ F29 ಪ್ರೊ 5G ಫೋನಿನ ಪ್ರಮುಖ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರ ಸ್ಟೈಲಿಶ್ ಲುಕ್ ಮೊಬೈಲ್ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಕಂಪನಿಯು ತನ್ನ ಒಪ್ಪೋ F29 ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಇದು ಕಳೆದ ವರ್ಷದ ಬಿಡುಗಡೆಯಾದ OPPO F27 ಸರಣಿಯ ಉತ್ತರಾಧಿಕಾರಿಯಾಗಿ ಮಾರುಕಟ್ಟೆಗೆ ಬರಲಿದೆ. OPPO F29 ಶ್ರೇಣಿಯು ಸ್ಟ್ಯಾಂಡರ್ಡ್, ಒಪ್ಪೋ F29 ಪ್ರೊ ಮತ್ತು ಒಪ್ಪೋ F29 ಪ್ರೊ ಪ್ಲಸ್ ಫೋನ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಒಪ್ಪೋ F27 ಸರಣಿಯಲ್ಲಿ ಪ್ರೊ ಮಾದರಿಯನ್ನು ಕೈಬಿಟ್ಟಿರುವುದರಿಂದ ಇದು ಮತ್ತೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಟಿಪ್‌ಸ್ಟರ್ ಈ ಮುಂಬರುವ ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದಾರೆ.

ಒಪ್ಪೋ F29 ಪ್ರೊ 5G ವೈಶಿಷ್ಟ್ಯಗಳು (ನಿರೀಕ್ಷೆ)
ಡಿಸ್ಪ್ಲೇ ವಿವರ
ಒಪ್ಪೋ F29 ಪ್ರೊ 5G ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಟಿಪ್‌ಸ್ಟರ್ ಸುಧಾಂಶು ಅಂಬೋರೆ ಅವರು ಬಹಿರಂಗಪಡಿಸಿದ್ದಾರೆ. ವರದಿಯ ಪ್ರಕಾರ, ಒಪ್ಪೋ F29 ಪ್ರೊ 5G ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಈ ಡಿಸ್ಪ್ಲೇ ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಒಪ್ಪೋ F25 ಪ್ರೊ ಫೋನಿನಂತೆಯೇ ಇವೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ F29 ಪ್ರೊ 5G ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾಕೋರ್ ಪ್ರೊಸೆಸರ್ ಹೊಂದಿರುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಕಲರ್ ಓಎಸ್ 15 ನೊಂದಿಗೆ ಕೆಲಸ ಮಾಡುತ್ತದೆ. ಇದು LPDDR4X RAM ಮತ್ತು UFS 3.1 ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ. ಆದರೆ, ಕಂಪನಿಯು ಈ ಬಗ್ಗ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಕ್ಯಾಮೆರಾ ಸೆಟಪ್
ಒಪ್ಪೋ F29 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾದೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಇದಲ್ಲದೆ, ಈ ಫೋನ್ ಎಲ್‌ಇಡಿ ಫ್ಲ್ಯಾಷ್ ಮತ್ತು ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ F29 ಪ್ರೊ 5G ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಈ ಹಿಂದೆ ಬಿಡುಗಡೆಯಾಗಿದ್ದ ಫೋನಿನ 5,000mAh ಬ್ಯಾಟರಿ ಮತ್ತು 45W ಚಾರ್ಜಿಂಗ್‌ಗಿಂತ ದೊಡ್ಡ ಅಪ್‌ಗ್ರೇಡ್ ಆಗಿದೆ.
ಒಪ್ಪೋ F29 ಪ್ರೊ 5G ಬೆಲೆ
ಮುಂಬರುವ ತಿಂಗಳಲ್ಲಿ ಒಪ್ಪೋ F29 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಬಹುದು. ಆದರೆ, ಒಪ್ಪೋ F29 ಪ್ರೊ 5G ಫೋನಿನ ಬೆಲೆ ಬಗ್ಗೆ ಮಾಹಿತಿ ಲಭ್ಯವಿಲ್ಲ. ಒಪ್ಪೋ F29 ಪ್ರೊ 5G ಫೋನಿನ ಆರಂಭಿಕ ಬೆಲೆ 23,999 ರೂ. ಎಂದು ಹೇಳಲಾಗಿದೆ. ಒಪ್ಪೋ F27 5G ಫೋನಿನ ಬೆಲೆ 22,999 ರೂ. ಮತ್ತು ಮತ್ತು ಒಪ್ಪೋ F27 ಪ್ರೊ+ 5G ಮೊಬೈಲ್ 27,999 ರೂ. ಆಗಿದೆ.


Click it and Unblock the Notifications








